ಸ್ಲೀಪ್‌ವೆಲ್‌ನಿಂದ ಹೋಂ ಕಂಫರ್ಟ್ ಉತ್ಪನ್ನ ಅನಾವರಣ
Team Udayavani, Feb 7, 2019, 6:59 AM IST
ಬೆಂಗಳೂರು: ಪಿಯು ಫೋಮ್ ಉದ್ಯಮದ ಖ್ಯಾತ ಶೀಲಾ ಫೋಮ್‌ನ ಪ್ರಮುಖ ಉತ್ಪನ್ನ ಸ್ಲೀಪ್‌ವೆಲ್, ಹೋಮ್ ಕಂಫರ್ಟ್ ಪ್ರಾಡಕ್ಟ್ ಶ್ರೇಣಿಯ ‘ಟೋಟಲ್ ಸ್ಲೀಪ್ ಸಲ್ಯೂಷನ್’ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮಂಗಳವಾರ ನಗರದ ಹೋಟೆಲೊಂದರಲ್ಲಿ ಸ್ಲೀಪ್‌ವೆಲ್ ಮ್ಯಾಟ್ರಸ್ ನೂತನ ಹೋಮ್ ಕಂಫರ್ಟ್ ಉತ್ಪನ್ನ ವ್ಯಾಪ್ತಿಯ ಟೋಟಲ್ ಸ್ಲೀಪ್ ಸಲ್ಯೂಷನ್ ಉತ್ಪನಗಳ ಪ್ರದರ್ಶನವನ್ನು ಶೀಲಾ ಫೋಮ್ ಸಿಇಒ ಮತ್ತು ನಿರ್ದೇಶಕ ರಾಕೇಶ್ ಚಾಹರ್, ಪಿಎಂಜಿಯ ವ್ಯವಸ್ಥಾಪಕ ನಿರ್ದೇಶಕ ನರೇಶ್ ಮಿಟ್ಟಲ್, ಹೋಮ್ ಕಂಫರ್ಟ್ ಪ್ರಾಡಕ್ಟ್‌ನ ವ್ಯವಹಾರ ಮುಖ್ಯಸ್ಥ ಭೂಷಣ್ ಪಾಠಕ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಅನಾವರಣಗೊಳಿಸಿದರು.
ಗ್ರಾಹಕರನ್ನು ಆಕರ್ಷಿಸುವ ಹೊಸ ಶ್ರೇಣಿಯ ಪರಿಕಲ್ಪನೆಯ ದಿಂಬುಗಳ (ಪಿಲ್ಲೋಸ್) ಗುಚ್ಛ, ಮೋಡಿ ಮಾಡುವ ವಿನ್ಯಾಸವುಳ್ಳ ಬೆಡ್‌ಶೀಟ್‌ಗಳು, ಐಷಾರಾಮಿ ಕಂಫರ್ಟರ್‌ಗಳು, ಬೆಚ್ಚನೆಯ ಹೊದಿಕೆಗಳು ಮತ್ತು ಮ್ಯಾಟ್ರಸ್ ಪ್ರೊಟೆಕ್ಟರ್‌ಗಳು ಸೇರಿದಂತೆ ನವೀನ ಹಾಸಿಗೆಗಳು ಎಲ್ಲವೂ ಒಂದೇ ಸೂರಿನಡಿ ದೊರಕುವ ವ್ಯವಸ್ಥೆಯನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿತ್ತು.
ನಂತರ ಪತ್ರಕರ್ತರನ್ನು ಉದ್ದೇಶಿಸಿ ವ್ಯವಹಾರ ಮುಖ್ಯಸ್ಥ ಭೂಷಣ್ ಪಾಠಕ್ ಅವರು ಮಾತನಾಡಿದರು. ಸ್ಲೀಪ್‌ವೆಲ್ ಉತ್ಪನ್ನಗಳು ಮನೆಯ ಹಾಗೂ ಮಲಗುವ ಕೋಣೆಯ ಅಂದವನ್ನು, ಗ್ರಾಹಕರ ಸೌಕರ್ಯವನ್ನು ಮತ್ತು ನಿದ್ರಾಸುಖದ ಅನುಭವವನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಸುಖ ನಿದ್ರೆ ಅವಶ್ಯಕ. ಗ್ರಾಹಕರ ಸೌಕರ್ಯಗಳ ಅವಶ್ಯಕತೆಗೆ ತಕ್ಕಂತೆ ನಾವು ಹಾಸಿಗೆ, ದಿಂಬುಗಳನ್ನು ರೂಪಿಸುತ್ತೇವೆ. ಒಟ್ಟಾರೆ, ಸ್ಲೀಪ್‌ವೆಲ್ ಅತ್ಯುನ್ನತ ಸಾಟಿಯಿಲ್ಲದ ಜ್ಞಾನವನ್ನು ಬಳಸಿಕೊಂಡು ಅತ್ಯಾಧುನಿಕ ಉತ್ಪನ್ನಗಳಾಗಿ ಹೊರಬರುತ್ತದೆ. ಅದರಿಂದಾಗಿಯೇ ಸ್ಲೀಪ್‌ವೆಲ್ ಇಂದು ಭಾರತದ ನಂ.1 ಮ್ಯಾಟ್ರೆಸ್ ಆಗಿದೆ ಎಂದರು.
ಇಷ್ಟೇ ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮ ಉತ್ಪನಗಳ ಥೀಮ್ಸ್, ಡಿಸೈನ್ಸ್, ಕಲರ್ ಮತ್ತು ಮೆಟಿರಿಯಲ್ ಅನ್ನು ಕಾಲ ಹಾಗೂ ಗ್ರಾಹಕರ ಸೌಕರ್ಯಕ್ಕನುಗುಣವಾಗಿ ನಿರ್ಮಿಸುತ್ತೇವೆ. ರಿಯಾಕ್ಟಿವ್ ಪ್ರಿಂಟ್ಸ್, ಜಿರೋ ಶ್ರಿಂಕೇಜ್ ಕಾಟನ್, ಮೃದು ಹಾಗೂ ಬೆಚ್ಚಗಿನ ಅನುಭವ ನೀಡುವ ನವೀನ ಹಾಗೂ ಆಕರ್ಷಕ ಶೈಲಿಯ ಗುಣಮಟ್ಟದ ಉತ್ಪನ್ನಗಳನ್ನು ಹೊರತರುತ್ತೇವೆ. ಎಲ್ಲರ ಕೈಗೆಟುವ ಬೆಲೆಯಲ್ಲಿ ನಮ್ಮ ಉತ್ಪನ್ನಗಳು ದೊರೆಯುತ್ತವೆ ಎಂದರು.
ಮೈ ಪಿಲ್ಲೊ: ಸ್ಲೀಪ್‌ವೆಲ್ ಪಿಲ್ಲೊ ವಿಭಾಗದಲ್ಲಿ ಮೈ ಪಿಲ್ಲೊ ಶ್ರೇಣಿಯನ್ನು ಪರಿಚಯಿಸಿದ್ದು, ಇವು ತಾಪಮಾನ ಸೂಕ್ಷತೆ ಹಾಗೂ ನಿಮ್ಮ ತೂಕದ ಪ್ರಕಾರ ಆಕಾರವನ್ನು ತೆಗೆದುಕೊಳ್ಳುವ ಆರಾಮದಾಯಕ ನಿದ್ರೆಯನ್ನು ನೀಡುತ್ತವೆ. ಇವುಗಳು 400 ರೂ. ಗಳಿಂದ 2499 ರೂ. ವರೆಗೆ ಲಭ್ಯ. ಕಾರ್ಯಕ್ರಮದಲ್ಲಿ ಶೀಲಾ ಫೋಮ್‌ನ ಸಿಇಒ-ನಿರ್ದೇಶಕ ರಾಕೇಶ್ ಚಾಹರ್, ಪಿಎಂಜಿ ವ್ಯವಸ್ಥಾಪಕ ನಿರ್ದೇಶಕ ನರೇಶ್ ಮಿಟ್ಟಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.