ಆರೋಗ್ಯ ವಿಚಾರಿಸಿದ ಗೃಹ ಸಚಿವರು
Team Udayavani, Nov 1, 2021, 10:43 AM IST
![ಆರೋಗ್ಯ ವಿಚಾರಿಸಿದ ಗೃಹ ಸಚಿವರು](https://www.udayavani.com/wp-content/uploads/2021/11/ಆರೋಗ್ಯ-ವಿಚಾರಿಸಿದ-ಗೃಹ-ಸಚಿವರು-620x372.jpg)
![ಆರೋಗ್ಯ ವಿಚಾರಿಸಿದ ಗೃಹ ಸಚಿವರು](https://www.udayavani.com/wp-content/uploads/2021/11/ಆರೋಗ್ಯ-ವಿಚಾರಿಸಿದ-ಗೃಹ-ಸಚಿವರು-620x372.jpg)
ಬೆಂಗಳೂರು: ಕಂಠೀರವ ಕ್ರೀಡಾಂಗ ಣ ದಲ್ಲಿ ನಟ ಪುನೀತ್ ರಾಜ ಕುಮಾರ್ ಅವರ ಅಂತಿಮ ದರ್ಶನದ ವೇಳೆ ಕರ್ತವ್ಯ ನಿರ್ವಹಿಸುವಾಗ ಅಭಿಮಾನಿಗಳ ದಟ್ಟಣೆಯ ನೂಕು ನುಗ್ಗಲಿನಲ್ಲಿ ಸಿಲುಕಿ ಕಾಲು ಮುರಿತಕ್ಕೊಳಗಾದ ಮಡಿವಾಳ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಗಣೇಶ್ ನಾಯಕ್ ಅವರ ಆರೋಗ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ದೂರವಾಣಿ ಮೂಲಕ ವಿಚಾರಿಸಿದರು.
ಗಣೇಶ್ ನಾಯಕ್ ಅವರಿಗೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಸಚಿವರು, ಇಲಾಖೆಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವ ಹಾಗೂ ಉನ್ನತ ಚಿಕಿತ್ಸೆ ಬೇಕಿದ್ದರೆ ಅದನ್ನೂ ಒದಗಿಸುವ ಬಗ್ಗೆ ಭರವಸೆ ನೀಡಿದರು. ನೋವಿ ನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಗಣೇಶ್ ನಾಯಕ್ ಅವರ ಬಗ್ಗೆ ಸಚಿವರು ಸಂತೋಷ ವ್ಯಕ್ತಪಡಿಸಿದರು.
ಇದನ್ನೂ ಓದಿ;- 103 ಜನರಿಗೆ ಬೌದ್ಧ ಧರ್ಮ ದೀಕ್ಷೆ
ಗಣೇಶ್ ನಾಯಕ್ ಅವರು ಮಲ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಪ್ರಸ್ತುತ ಹೊಸೂರು ರಸ್ತೆಯಲ್ಲಿರುವ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.