ನಗರದ ವಿವಿಧ ಠಾಣೆಗಳಿಗೆ ಗೃಹ ಸಚಿವರ ದಿಢೀರ್‌ ಭೇಟಿ

Team Udayavani, Nov 4, 2017, 11:01 AM IST

ramalingareddy].jpg

ಬೆಂಗಳೂರು: ಗೃಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ನಗರದ ವಿವಿಧ ಪೊಲೀಸ್‌ ಠಾಣೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳು ತಡಬಡಾಯಿಸಿದ ಪ್ರಸಂಗವೂ ನಡೆಯಿತು. ಶುಕ್ರವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ದಿಢೀರನೆ ಕಬ್ಬನ್‌ಪಾರ್ಕ್‌ ಠಾಣೆಗೆ ಆಗಮಿಸಿದ ಸಚಿವರು ಮತ್ತು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರನ್ನು ಕಂಡ ಠಾಣಾ ಸಿಬ್ಬಂದಿ ಆಶ್ಚರ್ಯಗೊಂಡರು.

ಈ ವೇಳೆ ಠಾಣಾ ಅವರಣ ಗಮನಿಸಿದ ಸಚಿವರು, ಆವರಣದೊಳಗೆ ಸ್ವತ್ಛತೆಯಿರಬೇಕು, ಅಶಿಸ್ತು ಸಹಿಸುವುದಿಲ್ಲ ಎಂದರು. ಬಳಿಕ ಯುಬಿ ಸಿಟಿ, ಎಂ.ಜಿ.ರಸ್ತೆ, ಕುಂಬ್ಳೆ ವೃತ್ತ, ಕ್ವೀನ್ಸ್‌ ಸರ್ಕಲ್‌ ಸೇರಿದಂತೆ ಸುಮಾರು 20 ಕಡೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರು. ಠಾಣಾ ಸಿಬ್ಬಂದಿ ಕುಂದುಕೊರತೆ ಆಲಿಸಿ, ಅಪರಾಧಗಳ ಕುರಿತು ಮಾಹಿತಿ ಸಂಗ್ರಹಿಸಿ ಕೆಲವ ಸೂಚನೆ ನೀಡಿದರು.

ಬಳಿಕ ಅಶೋಕ್‌ನಗರ ಠಾಣೆಗೆ ಭೇಟಿ ನೀಡಿ, ಠಾಣಾಧಿಕಾರಿ ಶಶಿಧರ್‌ ಅವರಿಂದ ಠಾಣಾ ವ್ಯಾಪ್ತಿಯ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು, ಹೊಯ್ಸಳ ಬೀಟ್‌, ಚೀತಾ ಬೀಟ್‌ ವ್ಯವಸ್ಥೆಯ ಕಾರ್ಯವೈಖರಿ ಚರ್ಚಿಸಿದರು. ಸುಮಾರು ಮೂರು ಗಂಟೆಗಳ ಕಾಲ ಠಾಣೆಯಲ್ಲಿದ್ದ ಸಚಿವರು, ಅಪರಾಧ ದಾಖಲೆ ಪುಸ್ತಕ, ವಾಕಿಟಾಕಿ ನಿರ್ವಹಣೆ, ಅಧಿಕಾರಿಗಳ ಹಾಜರಿ, ಗೈರು ಇನ್ನಿತರೆ ವ್ಯವಸ್ಥೆಗಳ ಪರಿಶೀಲಿಸಿದರು.

ದೂರು ಪೆಟ್ಟಿಗೆ: ಸಚಿವರು ಭೇಟಿ ನೀಡಿದ ಎರಡು ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರ ದೂರು ಪೆಟ್ಟಿಗೆಯನ್ನು ಠಾಣೆಯೊಳಗೆ ಇಡಲಾಗಿತ್ತು. ಇದನ್ನು ನೋಡಿ ಸಿಬ್ಬಂದಿಗೆ ಪ್ರಶ್ನಿಸಿದ ಅವರು, ದೂರು ಪೆಟ್ಟಿಗೆ ಹೊರಗಡೆ ಇಟ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. 

ಸೂಚನೆ: ಬೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ನಾಲ್ಕು ಠಾಣೆಗಳಿಗೆ ಭೇಟಿ ನೀಡಿದ್ದೇನೆ. ಶಾಲಾ, ಕಾಲೇಜುಗಳಿಗೆ ಬೀಟ್‌ ವ್ಯವಸ್ಥೆ ಹಾಗೂ ಮೀಟಿಂಗ್‌ ನಡೆಸುವಂತೆ ಸೂಚಿಸಲಾಗಿದೆ. ರೌಡಿಶೀಟರ್‌ಗಳನ್ನು ಮಟ್ಟಹಾಕುವಂತೆ ಪೊಲೀಸರಿಗೆ ಖಡಕ್‌ಎಚ್ಚರಿಕೆ ನೀಡಿದ್ದೇನೆ ಎಂದರು.

ನೋಡ್ರಿ ಸುನೀಲ್‌ ಕುಮಾರ್‌ ಏನಿದು?: ಹಲಸೂರು ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆವರಣದಲ್ಲಿನ ಕಸ ಕಂಡ ಸಚಿವರು, ನೋಡ್ರಿ ಸುನೀಲ್‌ ಕುಮಾರ್‌ ಏನಿದು ಪೊಲೀಸ್‌ ಠಾಣೆಯಲ್ಲಿ ಕಸ ಇದೆ ಯಾಕೆ ಪ್ರತಿನಿತ್ಯ ಸ್ವಚ್ಚಗೊಳಿಸಲ್ವಾ?. ಅದಕ್ಕೂ ಆದೇಶ ಕೊಡಬೇಕು ಎಂದು ಪೊಲೀಸ್‌ ಆಯುಕ್ತರ ಮುಂದೆಯೇ ಇನ್‌ಸ್ಪೆಕ್ಟರ್‌ ಮತ್ತು ಎಸಿಪಿಗೆ ತರಾಟೆಗೆ ತೆಗೆದುಕೊಂಡರು. ಎಸಿಪಿ, ಪಿಎಸ್‌ಐಗೆ ನೋಟಿಸ್‌ ಜಾರಿಗೊಳಿಸುವಂತೆ ಆದೇಶಿಸಿದರು.

ಟಾಪ್ ನ್ಯೂಸ್

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.