ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ : ಇಬ್ಬರ ಬಂಧನ
Team Udayavani, May 14, 2022, 10:36 AM IST
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಮನೆ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರು ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವೀರಭದ್ರನಗರ ನಿವಾಸಿ ನಾಗರಾಜು ಅಲಿಯಾಸ್ ಎಸಿ (24) ಮತ್ತು ಶೇಖರ್ ಅಲಿಯಾಸ್ ತಿಪ್ಪೆ (26) ಬಂಧಿತರು. ಅವರಿಂದ 2.10 ಲಕ್ಷ ರೂ. ಮೌಲ್ಯದ 23 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ, 2 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.
ಬನಶಂಕರಿ 3ನೇ ಹಂತದ ವೀರಭದ್ರನಗರದ ನಿವಾಸಿ ಆಟೋ ಚಾಲಕ ರಮೇಶ್ ಎಂಬುವವರು ಮೇ 2ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬದ ಸಮೇತ ತಮಿಳು ನಾಡಿಗೆ ತೆರಳಿದ್ದರು. ಮೇ 2ರಂದು ತಡರಾತ್ರಿ 12.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಅಡುಗೆ ಮನೆಯ ವೆಂಟಿಲೇಟರ್ ವಿಂಡೋ ಕತ್ತರಿಸಿ ಮನೆ ಪ್ರವೇಶಿಸಿ ಕಬೋರ್ಡ್‌ನಲ್ಲಿದ್ದ ಚಿನ್ನಾ ಭರಣ, ನಗದು, ವಾಹನದ ದಾಖಲೆಗಳು ಕಳವು ಮಾಡಿದ್ದರು.
ಇದನ್ನೂ ಓದಿ:ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ನಂಬಿಸಿ ಸಾವಿರಾರೂ ರೂ. ವಂಚನೆ
ಬೆರಳಚ್ಚು ಸುಳಿವು ಆಧರಿಸಿ ಬಂಧನ
ಘಟನಾ ಸ್ಥಳಕ್ಕೆ ಬಂದ ಬೆರಳಚ್ಚು ತಜ್ಞರು ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆರೋಪಿ ನಾಗರಾಜನ ಬೆರಳಚ್ಚಿಗೆ ಹೋಲಿಕೆಯಾಗಿದೆ. ಈ ಸುಳಿವಿನ ಮೇರೆಗೆ ಮೊದಲಿಗೆ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೂಬ್ಬ ಆರೋಪಿ ಶೇಖರ್ ನನ್ನು ಬಂಧಿಸಲಾಗಿದೆ. ಅವರ ಬಂಧನದಿಂದ ಗಿರಿನಗರ ಹಾಗೂ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀ ಸರು ಹೇಳಿದರು.
ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆ ವುಳ್ಳವರಾಗಿದ್ದು, ಈ ಹಿಂದೆ ವಿಜಯನಗರ, ಗಿರಿನಗರಮ, ಜೆ.ಪಿ.ನಗರ, ಹನುಮಂತನಗರ ಠಾಣೆಗಳಲ್ಲಿ ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.