ರಾಜ್ಯದ ಗೃಹ ಸಚಿವರ ಪುತ್ರಿಗೇ ಸುರಕ್ಷತೆಯ ಪಾಠ ಹೇಳಿದ ಹೋಮ್‌ಗಾರ್ಡ್..
Team Udayavani, Mar 1, 2018, 6:40 AM IST
ಬೆಂಗಳೂರು: ಗೃಹ ರಕ್ಷ ದಳದ ಮಹಿಳಾ ಸಿಬ್ಬಂದಿಯೊಬ್ಬರು ಗೃಹ ಸಚಿವರ ಪುತ್ರಿಗೇ ಒಡವೆ ವಸ್ತುಗಳನ್ನು ಕಳ್ಳಕಾಕರಿಂದ ರಕ್ಷಿಸಿಕೊಳ್ಳುವುದು, ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಭದ್ರತೆ ಬಗ್ಗೆ ಅರಿವು ಮೂಡಿಸುವ ಪಾಠ ಹೇಳಿದ ಪ್ರಸಂಗ ಜಯನಗರದಲ್ಲಿ ನಡೆದಿದೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಜಯನಗರದ ರಸ್ತೆಯಲ್ಲಿ ಆಕರ್ಷಕ ಉಡುಗೆ ಮತ್ತು ಆಭರಣ ಧರಿಸಿ ನಡೆದುಕೊಂಡು ಹೋಗುವಾಗ ಗಮನಿಸಿದ ಹೋಮ್‌ಗಾರ್ಡ್ ಲಕ್ಷ್ಮೀ ನರಸಮ್ಮ ಸಾರ್ವಜನಿಕ ಸ್ಥಳಗಳಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವವರ ಬಗ್ಗೆ ಎಚ್ಚರದಿಂದರಬೇಕು ಎಂದು ಸುರಕ್ಷತೆಯ ಪಾಠ ಹೇಳಿದ್ದಾರೆ.
ಈ ವೇಳೆ ತಾವು ಗೃಹ ಸಚಿವರ ಪುತ್ರಿ ಎನ್ನುವುದನ್ನು ತೋರ್ಪಡಿಸಿಕೊಳ್ಳದೆ ಸೌಮ್ಯರೆಡ್ಡಿ ಉತ್ಸುಕತೆಯಿಂದ ಮಹಿಳಾ ಸಿಬ್ಬಂದಿಯ ಎಚ್ಚರಿಕೆ ಮಾತುಗಳನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸ್ನೇಹಿತೆಯರು ಚಿತ್ರಿಕರಿಸಿಕೊಂಡಿರುವ ಈ ಘಟನೆಯ ವಿಡಿಯೋವನ್ನು ಸೌಮ್ಯರೆಡ್ಡಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಾಕಿ ಗೃಹರಕ್ಷಕದಳದ ಸಿಬ್ಬಂದಿ ಕಾರ್ಯವನ್ನು ಶ್ಲಾ ಸಿದ್ದಾರೆ.
ಫೆ.21ರಂದು ಸಂಜೆ ಚುನಾವಣೆ ಪ್ರಚಾರ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸೌಮ್ಯರೆಡ್ಡಿ, ಕಾರ್ಯಕ್ರಮ ಮುಗಿಸಿಕೊಂಡು ರಸ್ತೆಯಲ್ಲಿ ನಡೆದು ಹೋಗುವಾಗ ಎದುರಾದ ಹೋಮ್‌ಗಾರ್ಡ್ ಲಕ್ಷಿ$¾àನರಸಮ್ಮ, ಸೌಮ್ಯರೆಡ್ಡಿಯನ್ನು ತಡೆದಿದ್ದಾರೆ.
ಆದರೆ, ಈ ಸಂದರ್ಭದಲ್ಲಿ ಗೃಹ ಸಚಿವರ ಪುತ್ರಿ ಎಂಬುದು ಸಿಬ್ಬಂದಿಗೆ ತಿಳಿದಿಲ್ಲ. ಬಳಿಕ ನೋಡಿ ಮೇಡಂ, ಮಹಿಳೆಯರು ಹಾಗೂ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುವ ಬಗ್ಗೆ ಹೇಳುತ್ತೇನೆ ತಿಳಿದುಕೊಂಡು ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ. ಗಮನ ಬೇರೆಡೆ ಸೆಳೆದು ಹೇಗೆ ಕಳವು ಮಾಡುತ್ತಾರೆ. ಮಹಿಳೆಯರು ಆಭರಣಗಳನ್ನು ಹಾಕಿಕೊಂಡಾಗ ಮೈತುಂಬ ಸೆರಗು ಹಾಕಿಕೊಳ್ಳಬೇಕು. ಇಲ್ಲವಾದರೆ ಕಳ್ಳರು ಆಭರಣ ಕಳವು ಮಾಡುತ್ತಾರೆ. ವಸ್ತು ಅಥವಾ ಕಸ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಮೊಬೈಲ್, ಬ್ಯಾಗ್, ಸರ ಕಳವು ಮಾಡುತ್ತಾರೆ. ಅಪರಿಚಿತರು ಏನೇ ಹೇಳಿದರು ಆ ಬಗ್ಗೆ ಗಮನ ಕೊಡಬೇಡಿ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.
ಸಮಾಜದಲ್ಲಿ ಅಶಾಂತಿ ಮೂಡಿಸುವುದು ನಮಗೆ (ಪೊಲೀಸರಿಗೆ) ಇಷ್ಟವಿಲ್ಲ. ನಮ್ಮ ಕೆಲಸ ಸರಿಯಾಗಿ ಮಾಡಿದರೆ ಅದು ನಮಗೆ ಕೊನೆವರೆಗೂ ಕಾಯುತ್ತದೆ ಎಂದು ಕರ್ತವ್ಯ ನಿಷ್ಠೆ ತೋರಿದ್ದಾರೆ. ಇದನ್ನು ತಾಳ್ಮೆಯಿಂದಲೇ ಕೇಳಿದ ಸೌಮ್ಯರೆಡ್ಡಿ, ಬಳಿಕ ಸೂಪರ್, ಬಹಳ ಚೆನ್ನಾಗಿ ವಿವರಣೆ ನೀಡಿದ್ರಿ ಎಂದು ಕೈ ಕುಲುಕಿ ಅಭಿನಂದಿಸಿದ್ದಾರೆ. ಮನೆಗೆ ತೆರಳಿದ ನಂತರ ಸೌಮ್ಯರೆಡ್ಡಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.
ಸೌಮ್ಯರೆಡ್ಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ, “ಇವತ್ತು ಜಯನಗರದಲ್ಲಿ ಅದ್ಭುತ ಹಾಗೂ ಬುದ್ದಿವಂತ ಮಹಿಳೆ ಲಕ್ಷ್ಮೀನರಸಮ್ಮರನ್ನು ನೋಡಿದೆ. ಇಂತಹ ಬದ್ಧತೆ ಇರುವ ಪೊಲೀಸರು ಇರುವುದರಿಂದಲೇ ನಮ್ಮ ಮನೆ ಮತ್ತು ನಗರ ಸುರಕ್ಷಿತವಾಗಿದೆ. ಮಹಿಳಾ ಸಬಲೀಕರಣ ಅಂದರೇ ಇದೇ.
ಪ್ರತಿ ದಿನವೂ ಮಹಿಳಾ ದಿನಾಚರಣೆಯೇ..ನನಗೆ ನಿಜವಾಗಿಯೂ ಸ್ಫೂರ್ತಿ ತುಂಬಿದ ಮಹಿಳೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.