Honeytrap Case: ಹನಿಟ್ರ್ಯಾಪ್ ಮಾಸ್ಟರ್ ಮೈಂಡ್ ಕಳವು ಕೇಸಲ್ಲಿ ಬಂಧನ
Team Udayavani, Sep 14, 2023, 12:50 PM IST
ಬೆಂಗಳೂರು: ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾಗಿದ್ದ ಮಧ್ಯಪ್ರದೇಶದ ಹೈಪ್ರೊಫೈಲ್ ಹನಿಟ್ರ್ಯಾಪ್ ಕೇಸ್‌ನ ಮಾಸ್ಟರ್ ಮೈಂಡ್ ಆರತಿ ದಯಾಳ್ ಕಳ್ಳತನ ಪ್ರಕರಣದಲ್ಲಿ ಬೆಂಗಳೂರಿನ ಮಹ ದೇವಪುರ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಕಳೆದ ತಿಂಗಳಷ್ಟೇ ಬೆಂಗಳೂರಿಗೆ ಬಂದಿದ್ದ ಆರತಿ, ಪಿಜಿಯೊಂದರಲ್ಲಿ ವಾಸವಾಗಿದ್ದಳು. ಪಿಜಿಯಲ್ಲಿ ವಾಸವಾಗಿದ್ದ ವೇಳೆ ರೂಮ್ ಮೇಟ್ ಗಳ ಚಿನ್ನದ ಆಭರಣ ಕದ್ದು ಎಸ್ಕೇಪ್ ಆಗಿದ್ದಳು. ಈ ಸಂಬಂಧ ಮಹದೇವ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಬಂಧಿಸಿದ್ದಾರೆ. ಬಳಿಕ ಈಕೆಯನ್ನು ವಿಚಾರಣೆ ನಡೆಸಿದಾಗ, ಮಧ್ಯಪ್ರದೇಶದಲ್ಲಿ ನಡೆದ ಹೈಪ್ರೊಫೈಲ್ ಹನಿಟ್ರ್ಯಾಪ್ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಗೊತ್ತಾಗಿದೆ.
2020ರಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರತಿ ಕೆಲ ತಿಂಗಳುಗಳಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆರತಿ ಪತ್ತೆಗೆ ಅಲ್ಲಿನ ಹೈಕೋರ್ಟ್ ಸೂಚಿಸಿತ್ತು. ಮಧ್ಯಪ್ರದೇಶದಿಂದ ಬಂದ ಬಳಿಕ ಬೆಂಗಳೂರು, ಚೆನ್ನೈನ ಸ್ಪಾಗಳಲ್ಲಿ ಮಸಾಜ್ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದಳು. ಸ್ಪಾಗಳಲ್ಲಿ ಕೆಲಸ ಮಾಡುವ ಶ್ರೀಮಂತ ಹುಡುಗಿಯರ ಸ್ನೇಹ ಸಂಪಾದಿಸಿ ಅವರ ವಿಶ್ವಾಸ ಗಳಿಸುತ್ತಿದ್ದಳು. ಬಳಿಕ ಅವರ ಮನೆಗಳಲ್ಲಿ ಉಳಿದು ಚಿನ್ನಾಭರಣ ಕದಿಯುತ್ತಿದ್ದಳು ಎಂಬ ಆರೋಪ ಇದೆ. ಈಕೆ ಸೋನು, ಸಮಂತ, ಆರತಿ ಅಗರವಾಲ್ ಸೇರಿ ವಿವಿಧ ಹೆಸರುಗಳಿಂದ ಪರಿಚಯಿಸಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.