ಹನಿಟ್ರ್ಯಾಪ್: ಮಹಿಳೆ ಸೇರಿ ಐವರ ಬಂಧನ
ಬಾರ್ ಲೈಸೆನ್ಸ್: ನಿವೃತ್ತ ಪ್ರಾಂಶುಪಾಲರಿಗೆ ವಂಚನೆ | ಮತ್ತೂಂದು ಕೇಸಿನಲ್ಲಿ ಬ್ಯಾಂಕ್ ಉದ್ಯೋಗಿಗೆ ದೋಖಾ
Team Udayavani, Nov 5, 2021, 9:24 AM IST
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಮಹಿಳೆ ಸೇರಿ ಐವರು ಪೊಲೀಸರ ಅತಿಥಿಯಾಗಿದ್ದಾರೆ. ನಿವೃತ್ತ ಪ್ರಾಂಶುಪಾಲರಿಗೆ ಬಾರ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ಹನಿ ಟ್ರ್ಯಾಪ್ ಮಾಡಿದ್ದ ಮಹಿಳೆ ಸೇರಿ ನಾಲ್ವರು ನಂದಿನಿ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶ್ರೀರಾಮಪುರ ನಿವಾಸಿಗಳಾದ ತ್ರಿಶಾ ಅಲಿಯಾಸ್ ಜಾನ್ಸಿ (27) ಮತ್ತು ಆಕೆಯ ಪ್ರಿಯಕರ ಮುತ್ತು (32) ಹಾಗೂ ಆತನ ಸಹಚರರಾದ ದಾಮೋದರ್ (30), ಪೆದ್ದರೆಡ್ಡಿ (31) ಬಂಧಿತರು.
ಅವರಿಂದ ಲಕ್ಷಾಂತರ ರೂ. ನಗದು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ರಾಜಾಜಿನಗರ ನಿವಾಸಿ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ್ ಎಂಬುವವರನ್ನು ಟ್ರ್ಯಾಪ್ ಮಾಡಿದ್ದರು. ಆರೋ ಪಿಗಳು ಯಾವುದೇ ಕೆಲಸಕ್ಕೆ ಹೋಗುವುದಿಲ್ಲ. ವೃದ್ಧರು, ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಚಂದ್ರಶೇಖರ್ ಅವರು ಬಾರ್ ಲೈಸೆನ್ಸ್ ಪಡೆ ಯಲು ಅರ್ಜಿ ಸಲ್ಲಿಸಿದ್ದರು. ಈ ವಿಚಾರ ತಿಳಿದುಕೊಂಡು ಆರೋಪಿಗಳು ಅವರನ್ನು ಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು.
ಆರೋಪಿಗಳ ಪೈಕಿ ತ್ರಿಶಾ ಅ.1ರಂದು ಚಂದ್ರಶೇಖರ್ ಅವರಿಗೆ ಕರೆ ಮಾಡಿ ಬಾರ್ ಲೈಸೆನ್ಸ್ ಕೊಡಿಸುತ್ತೇವೆ ಎಂದು ಲಗ್ಗೆರೆಯ ಸಾರ್ವಜನಿಕ ಆಸ್ಪತ್ರೆ ಬಳಿ ಬರಲು ಹೇಳಿದ್ದಾಳೆ. ಅದರಂತೆ ಅವರು ಬಂದಾಗ ಆರೋಪಿ ಮುತ್ತು ಮತ್ತು ಇತರೆ ಆರೋಪಿಗಳು ಅವರನ್ನು ತ್ರಿಶಾಳ ಮನೆಗೆ ಕರೆದೊಯ್ದಿದ್ದಾರೆ. ಆಗ ಆಕೆ, ತಾನೇ ಕರೆ ಮಾಡಿದ್ದು ಎಂದು ಬಾರ್ ಲೈಸೆನ್ಸ್ ಬಗ್ಗೆ ಕೆಲ ಹೊತ್ತು ಮಾತನಾಡಿದ್ದಾರೆ. ನಂತರ ಮುತ್ತು ಮತ್ತು ಇತರರು ಏಕಾಏಕಿ ಮನೆಯೊಳಗೆ ನುಗ್ಗಿ, ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ:- ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಆರು ಮಂದಿ ಸ್ಥಳದಲ್ಲೇ ಸಾವು!
ಅಲ್ಲದೆ, ಮಾಧ್ಯಮದರವನ್ನು ಕರೆಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಮೂರು ಲಕ್ಷ ರೂ. ಸ್ಥಳದಲ್ಲೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಳಿಕ ಚಂದ್ರಶೇಖರ್ ಅವರ ಅಳಿ ಯನಿಗೆ ಕರೆ ಮಾಡಿ ತುರ್ತು 3 ಲಕ್ಷ ರೂ. ತರುವಂತೆ ಹೇಳಿದ್ದು, ಅವರು ಲಗ್ಗೆರೆ ಸೇತುವೆಯ ಬಳಿ ಬೇಕರಿಯೊಂದರ ಬಳಿ ಬಂದಿದ್ದು, ಆರೋಪಿಗಳು ಅವರಿಂದ ಹಣ ಪಡೆದು ಚಂದ್ರಶೇಖರ್‌ರನ್ನು ಬಿಟ್ಟು ಕಳುಹಿಸಿದ್ದಾರೆ. ಅದರಿಂದ ಗಾಬರಿಗೊಂಡ ಚಂದ್ರಶೇಖರ್ ಕೂಡಲೇ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಕಿಂಗ್‌ಪಿನ್ ಬಂಧನ
ಅವಿವಾಹಿತರು, ವಿಧುರರು, ವೃದ್ಧರನ್ನು ಗುರಿಯಾಸಿಗಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ತಂಡದ ಕಿಂಗ್ ಪಿನ್ ಗೋವಿಂದಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿ ದ್ದಾನೆ. ಮೊಹಮ್ಮದ್(34) ಬಂಧಿತ. ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ಸುಮಾರು 20 ಮಂದಿಗೆ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡು ತ್ತಿದ್ದರು ಎಂಬುದು ಪತ್ತೆಯಾಗಿದೆ. ನಾಪತ್ತೆಯಾಗಿರುವ ನಾಲ್ವರಿಗಾಗಿ ಹುಟುಕಾಟ ನಡೆದಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಮೊದಲಿಗೆ ಮಿಸ್ಡ್ ಕಾಲ್ ಕೊಡುತ್ತಿ ದ್ದರು. ನಂತರ ವಾಟ್ಸ್‌ಆ್ಯಪ್‌ನಲ್ಲಿ ಹಾಯ್ ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಒಂದು ವೇಳೆ ಆ ಕಡೆಯಿಂದ ಕರೆ ಮಾಡಿದ ಕೂಡಲೇ ಅವರಿಗೆ ಕೆಲವೊಂದು ಆಮಿಷವೊಡ್ಡಿ ಟ್ರ್ಯಾಪ್ ಮಾಡುತ್ತಿದ್ದರು. ಆರೋಪಿ ಗಳು ಇತ್ತೀಚೆಗೆ ಮಾರತ್ತಹಳ್ಳಿ ನಿವಾಸಿ 50 ವರ್ಷದ ವ್ಯಕ್ತಿಗೆ ವಾಟ್ಸ್‌ಆ್ಯಪ್‌ನಲ್ಲಿ ಯುವತಿಯ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದರು. ನಂತರ ಉತ್ತರ ಭಾರತದವರು ಬೆಂಗಳೂರಿಗೆ ಬಂದಾಗ ಭೇಟಿಯಾಗುತ್ತೇವೆ ಎಂದು ಹೇಳಿ ಆತ್ಮೀಯತೆ ಬೆಳೆಸಿದ್ದಾರೆ. ಅ.10ರಂದು ಅಪರಿಚಿತ ವ್ಯಕ್ತಿ ನಗರಕ್ಕೆ ಬಂದಿರುವುದಾಗಿ ತಿಳಿಸಿ, ಯುವತಿಯೊಬ್ಬಳ ಕಡೆಯಿಂದ ಕರೆ ಮಾಡಿಸಿ ಭೇಟಿ ಆಗುವುದಾಗಿ ಹೇಳುತ್ತಿದ್ದರು.
ಭೇಟಿಯಾಗಲು ದೂರುದಾರ ವ್ಯಕ್ತಿ ರಾತ್ರಿ ವೀರಣ್ಣಪಾಳ್ಯದ ಹೋಟೆಲ್ ಬಳಿ ಬಂದಿದ್ದರು. ನಂತರ ಹೋಟೆಲ್ ಒಳಗೆ ತೆರಳುತ್ತಿದ್ದಂತೆ ಯುವತಿ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದಾಳೆ. ಈ ವೇಳೆ ಹೋಟೆಲ್ ರೂಂಗೆ ಪೊಲೀಸರು ಮತ್ತು ಮಾಧ್ಯಮದವರ ಸೋಗಿನಲ್ಲಿ ಎಂಟ್ರಿ ಕೊಟ್ಟ ಆರೋಪಿಗಳು, ನೀನು ಡ್ರಗ್ಸ್ ಮಾರಾಟ ಮಾಡುತ್ತಿದ್ದಿಯಾ? ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ನಂತರ ಗೂಗಲ್, ಫೋನ್‌ಪೇ ಮೂಲದ 5.91 ಲಕ್ಷ ರೂ. ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ಹೋಟೆಲ್ ಕೋಣೆಯಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ ಎಂದು ದೂರುದಾರರು ತಿಳಿಸಿದ್ದರು. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.