ಕೆಪೆಲ್ ಹಣ್ಣು ತಿಂದರೆ ವಾರ ಕಾಲ ದೇಹದಲ್ಲಿ ಸುವಾಸನೆ!
Team Udayavani, Feb 23, 2023, 2:51 PM IST
ಬೆಂಗಳೂರು: ನೀವು ಮೈಗೆ ಸೆಂಟ್ ಹಾಕಿಕೊಂಡರೆ ಹಲವು ತಾಸುಗಳ ಕಾಲ ಸುವಾಸನೆ ಬೀರಬಹುದು. ಆದರೆ, ಇಲ್ಲೊಂದು ಅಪರೂಪದ ಹಣ್ಣಿದೆ. ಆ ಹಣ್ಣನ್ನು ನೀವು ಸೇವಿಸಿದರೆ 8 ದಿನಗಳ ಕಾಲ ನಿಮ್ಮ ದೇಹದ ತುಂಬೆಲ್ಲ ಸೂವಾಸೆಯ ಘಮಲಿರಲಿದೆ!
ಥೈಯ್ಲೆಂಡ್ ಮೂಲದ “ಕೆಪೆಲ್’ ಜಾತಿಯ ಈ ಗಿಡವು ತೋಟಗಾರಿಕಾ ಮೇಳದಲ್ಲಿ ಆಕರ್ಷಣೆಯಾಗಿದೆ. ಮಹಮದ್ ಆದಿಲ್ ಅವರು ಈ ಗಿಡವನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದಾರೆ. ಕರ್ನಾಟಕದ ರೈತರಿಗೆ ಕೆಪೆಲ್ ಗಿಡದ ಬಗ್ಗೆ ಅಷ್ಟೇನೂ ಮಾಹಿತಿಯಿಲ್ಲ. ಆ ಹಿನ್ನೆಲೆಯಲ್ಲಿ ಕರುನಾಡಿನ ರೈತರಿಗೆ ಈ ತಳಿಯನ್ನು ಪರಿಚಯಿತ್ತಿದ್ದೇನೆ. ಕೇರಳ ರೈತರು ಕೆಪೆಲ್ ಬೆಳೆ ಬೆಳೆಯುತ್ತಿದ್ದಾರೆ ಎಂದು ವ್ಯಾಪಾರಿ ಮಹಮದ್ ಅದಿಲ್ ಹೇಳುತ್ತಾರೆ.
ಈ ಹಣ್ಣು ತಿಂದರೆ ಮೈಯಲ್ಲ ಸುವಾಸನೆ ಬೀರಲಿದೆ. ಥೈಯ್ಲೆಂಡ್ ರಾಜಮನೆತನದವರು ಈ ಗಿಡವನ್ನು ಬೆಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಭಾರತಕ್ಕೂ ಪರಿಚಯಿಸುವ ಕೆಲಸ ನಡೆದಿದೆ ಎನ್ನುತ್ತಾರೆ. ಭೂಮಿಗೆ ಹಾಕಿದ ಐದು ವರ್ಷದಲ್ಲಿ ಬೆಳೆ ಬರಲು ಪ್ರಾರಂಭವಾಗಲಿದೆ. ಒಂದು ಗಿಡದಲ್ಲಿ 10ರಿಂದ 20 ಕಾಯಿಗಳು ಬಿಡಲಿವೆ. ಹೆಚ್ಚು ನೀರು ಕೂಡ ಈ ಬೆಳೆಗೆ ಬೇಕಾಗಿಲ್ಲ. ಸುಮಾರು 30 ಅಡಿಯ ವರೆಗೂ ಈ ಗಿಡ ಬೆಳೆಯಲಿದೆ. ವರ್ಷ ಕಳೆದಂತೆ ಗಿಡದಲ್ಲಿ ಫಲಗಳು ಹೆಚ್ಚಾಗಲಿವೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸಾವಿರ ರೂ. ವರೆಗೂ ಕೆಪೆಲ್ ಹಣ್ಣು ಮಾರಾಟವಾಗಲಿದೆ ಎಂದು ಮಾಹಿತಿ ನೀಡುತ್ತಾರೆ.
ಕೆಪೆಲ್‌ನಲ್ಲಿ ಆರೋಗ್ಯಕ್ಕೂ ಅನುಕೂಲವಾಗಿರುವ ಅಂಶಗಳಿವೆ. ಕೇರಳದಲ್ಲಿ ಈಗಾಗಲೇ ಕೆಲವು ರೈತರು ಈ ಬೆಳೆಗಳನ್ನು ತಮ್ಮ ಹೊಲಕ್ಕೆ ಹಾಕಿದ್ದಾರೆ. ಹೊರ ದೇಶದಲ್ಲೂ ಕೂಡ ಇದಕ್ಕೆ ಬೇಡಿಕೆಯಿದೆ. ಆದರೆ ಜನರಿಗೆ ಇನ್ನೂ ಈ ಹಣ್ಣಿನ ಬಗ್ಗೆ ಮಾಹಿತಿಯಿಲ್ಲ. ಆದರೆ ಥೈಯ್ಲೆಂಡ್‌ನಲ್ಲಿ ಈ ಗಿಡದ ಬಗ್ಗೆ ಅರಿವಿದೆ. ಕೆಲವ ಪ್ರದರ್ಶನಕ್ಕೆ ಮಾತ್ರ ಇಲ್ಲಿ ಇರಿಸಲಾಗಿದೆ. ರೈತರು ಬೇಡಿಕೆ ಸಲ್ಲಿಸಿದರೆ ಕೇರಳದಿಂದ ಈ ಗಿಡವನ್ನು ತರಿಸಿಕೊಡುವುದಾಗಿ ಹೇಳುತ್ತಾರೆ. ಚಿಕ್ಕ ಗಾತ್ರದ ಕೆಪೆಲ್ ಗಿಡ 1,500 ರೂ.ಆಗಿದ್ದು, ಬೃಹತ್ ಗಾತ್ರದ ಗಿಡಕ್ಕೆ 5 ಸಾವಿರ ರೂ.ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.