ಚೇತರಿಕೆಯತ್ತ ಹೋಟೆಲ್ ಉದ್ಯಮ
Team Udayavani, May 28, 2023, 2:26 PM IST
ಬೆಂಗಳೂರು: ಕಾರ್ಪೋರೆಟ್ ವಲಯದಲ್ಲಿ “ವರ್ಕ್ ಫ್ರಮ್ ಹೋಮ್ ಪದ್ಧತಿ’ ಕಡಿಮೆಯಾ ಗುತ್ತಿದ್ದಂತೆ ಹೋಟೆಲ್‌ಗಳ ಉದ್ಯಮದಲ್ಲಿ ಮಂದಹಾಸ ಕಾಣುತ್ತಿದೆ. ಪ್ರತಿ ತಿಂಗಳು ದರ್ಶನಿ ಸೇರಿದಂತೆ ನಾಲ್ಕೈದು ಹೊಸ ಹೋಟೆಲ್‌ಗಳು ಪ್ರಾರಂಭವಾಗುತ್ತಿದ್ದು, ಉದ್ಯಮ ಸಂಪೂರ್ಣ ಚೇತರಿಕೆಯತ್ತ ಹೆಜ್ಜೆಯಿರಿಸಿದೆ.
ಈ ಹಿಂದೆ ಅಪ್ಪಳಿಸಿದ್ದ ಕೋವಿಡ್ ಹಾವಳಿಗೆ ಹೋಟೆಲ್ ಉದ್ಯಮ ತತ್ತರಿಸಿತ್ತು. ಕಾರ್ಪೋರೆಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಹೋಮ್‌ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಮಾಲೀಕರು ಬಾಡಿಗೆ ಕಟ್ಟಲಾಗದೆ ತಮ್ಮ ತಮ್ಮ ಹೋಟೆಲ್‌ಗಳಿಗೆ ಬೀಗ ಹಾಕಿದ್ದರು. ಜತೆಗೆ ಸಾವಿರಾರು ಕೋಟಿ ರೂ.ನಷ್ಟಕ್ಕೆ ಕಾರಣವಾಗಿತ್ತು. ಪ್ರತಿಷ್ಠಿತ ಹೋಟೆಲ್‌ಗಳ ಮಾಲೀಕರು ಹೋಟೆಲ್ ನಿರ್ವಹಿಸಲಾಗದೇ ಸಾಲದ ಸುಳಿಗೆ ಸಿಲುಕಿದ್ದರು. ಹಾಗೆಯೇ ಪ್ರತಿಷ್ಠಿತ ಬಡಾವಣೆಗಳಲ್ಲಿ ತಲೆ ಎತ್ತಿದ್ದ ಹೋಟೆಲ್‌ಗಳ ಬಾಡಿಗೆ ನೀಡಲಾಗದೆ ಬೀಗ ಹಾಕಲಾಗಿತ್ತು. ಇದೀಗ ಹೋಟೆಲ್ ಉದ್ಯಮ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಜತೆಗೆ ಕಾರ್ಪೋರೆಟ್ ವಲಯದಲ್ಲಿದ್ದ “ವರ್ಕ್ ಫ್ರಮ್ ಹೋಮ್ ಪದ್ಧತಿ’ʼ ಮರೆಯಾಗುತ್ತಿದ್ದು ಇದು ಕೂಡ ಹೋಟೆಲ್ ಉದ್ಯಮದ ಬಹಳಷ್ಟು ಮಟ್ಟದಲ್ಲಿ ಚೇತರಿಸಿಕೊಳ್ಳಲು ಕಾರಣವಾಗಿದೆ. ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ನಾಲ್ಕೈದು ಹೊಸ ಹೋಟೆಲ್‌ಗಳು ಪ್ರಾರಂಭ ವಾಗುತ್ತಿವೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡುತ್ತಾರೆ.
ಕೋವಿಡ್ ವೇಳೆ ಹೋಟೆಲ್ ಉದ್ಯಮದ ಹಲವು ರೀತಿಯ ಸಂಕಷ್ಟಗಳಿಗೆ ಸಿಲುಕಿತ್ತು. ಹೋಟೆಲ್ ಮಾಲೀಕರು ಹೋಟೆಲ್‌ಗಳ ಬಾಗಿಲು ತೆಗೆದು ಉದ್ಯಮವನ್ನು ಮತ್ತೆ ಪ್ರಾರಂಭಿಸಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇತ್ತು. ಆದರೆ, ಈಗ ಆ ಸಮಸ್ಯೆಗಳು ಹೋಟೆಲ್ ಉದ್ಯಮದಲ್ಲಿ ಇಲ್ಲ. ಬಹಳಷ್ಟು ರೀತಿ ಯಲ್ಲಿ ಚೇತರಿಕೆ ಕಂಡಿದೆ ಎಂದು ಹೇಳುತ್ತಾರೆ.
50 ಹೊಸ ಹೋಟೆಲ್‌ಗಳು ಪ್ರಾರಂಭ: ಹೋಟೆಲ್ ಉದ್ಯಮದ ಚೇತರಿಕೆಯ ಹಿನ್ನೆಲೆ ಯಲ್ಲಿ ಈ ಹಿಂದೆ ಸರ್ಕಾರಕ್ಕೆ ” ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಬೇಡ’ ಎಂದು ಮನವಿ ಮಾಡಲಾಗಿತ್ತು. ಆದರೆ, ಈಗ ಮತ್ತೆ ಅಂತಹ ಮನವಿಯನ್ನು ಸರ್ಕಾರಕ್ಕೆ ಮಾಡಬೇಕಾದ ಅಗತ್ಯವಿಲ್ಲ. ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆಗಳು ಸೇರಿದಂತೆ ಹಲವು ಕಾರ್ಪೋರೆಟ್ ಸಂಸ್ಥೆಗಳ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡು ತ್ತಿದ್ದಾರೆ. ಹೀಗಾಗಿ ಹೋಟೆಲ್ ಉದ್ಯಮ ಕೂಡ ಉತ್ತಮ ರೀತಿಯಲ್ಲಿ ಚೇರಿಕೆ ಕಂಡುಕೊಂಡಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳುತ್ತಾರೆ.
ಈ ವರ್ಷ ದರ್ಶನಿ, ನಾನ್ ಎಸಿ ಸೇರಿದಂತೆ 50ಕ್ಕೂ ಹೊಸ ಹೋಟೆಲ್‌ಗಳು ಬೆಂಗಳೂರಿನ ಹಲವು ಕಡೆ ತಲೆ ಎತ್ತಿವೆ. ಇನ್ನೂ ಹಲವು ಕಡೆ ರೆಸ್ಟೋರೆಂಟ್‌ಗಳು ಕೂಡ ಪ್ರಾರಂಭವಾಗಲಿವೆ. ಈ ಹಿಂದೆ ಹೋಟೆಲ್ ಉದ್ಯಮಕ್ಕೆ ಕೆಲಸಗಾರರ ಸಮಸ್ಯೆ ಉಂಟಾಗಿತ್ತು. ಉತ್ತರ ಭಾರತೀಯದ ಮೂಲದ ಕಾರ್ಮಿಕರು ಮತ್ತೆ ರಾಜ್ಯಕ್ಕೆ ಮರಳಿದ್ದಾರೆ. ಆ ಹಿನ್ನೆಲೆಯಲ್ಲಿ ಕಾರ್ಮಿಕರ ಸಮಸ್ಯೆ ಕೂಡ ಇಲ್ಲ ಎಂದು ಹೇಳುತ್ತಾರೆ. ಇಂದಿರಾನಗರ, ಎಂ.ಜಿ.ರಸ್ತೆ, ಹೆಬ್ಟಾಳ, ಕೋರ ಮಂಗಲ, ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಿಂಗಳಿಗೆ ನಾಲ್ಕೈದು ಹೋಟೆಲ್‌ಗಳು ಪ್ರಾರಂಭವಾಗುತ್ತಿದೆ. ಉತ್ತಮ ರೀತಿಯ ಆರ್ಥಿಕ ವಹಿವಾಟು ನಡೆಯುತ್ತಿದೆ ಎಂದು ಮಾಹಿತಿ ನೀಡುತ್ತಾರೆ.
ತಿಂಡಿ, ತಿನಿಸು ಬೆಲೆ ಏರಿಕೆ ಇಲ್ಲ : ವಿದ್ಯುತ್ ಇಲಾಖೆಯು ವಿದ್ಯುತ್ ದರವನ್ನು 70 ಪೈಸೆ ಏರಿಸಿದೆ. ಇದು ಹೋಟೆಲ್ ಉದ್ಯಮಕ್ಕೆ ಬಹಳಷ್ಟು ಹೊರೆಯಾಗಲಿದೆ. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಹೋಟೆಲ್ ಉದ್ಯಮದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದ್ಯುತ್ ಬಿಲ್ ಇಳಿಕೆಗೆ ಮನವಿ ಮಾಡಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ವಿದ್ಯುತ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತಿಂಡಿ, ತಿನಿಸುಗಳ ದರ ಏರಿಕೆ ಮಾಡುವ ಆಲೋಚನೆ ಸಂಘದ ಮುಂದೆ ಇಲ್ಲ. ಹೆಚ್ಚುವರಿ ವಿದ್ಯುತ್‌ಬಿಲ್ ಹೊರೆಯನ್ನು ಮಾಲೀಕರೇ ಭರಿಸಲಿದ್ದಾರೆ. ಆದರೂ ಕೂಡ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪವಿಲ್ಲ. ಈ ಹಿಂದೆ ಹೋಟೆಲ್‌ಗಳ ತಿಂಡಿ, ತಿನಿಸುಗಳ ಬೆಲೆ ಏರಿಕೆ ಮಾಡಲಾಗಿದೆ. ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಪರಿಸ್ಥಿತಿ ಇಲ್ಲ ಎಂದು ಸಂಘ ಹೇಳಿದೆ.
ಬಹುತೇಕ ಕಾರ್ಪೋರೆಟ್ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಸ್ಥಗಿತಗೊಳಸಿವೆ. ಹೀಗಾಗಿ ನೌಕರರು ಕಚೇರಿಗೆ ಬಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿಯೇ ಬೆಂಗಳೂ ರಿನಲ್ಲಿ ತಿಂಗಳಿಗೆ ನಾಲ್ಕೈದು ಹೋಟೆ ಲ್‌ಗಳು ಪ್ರಾರಂಭವಾಗುತ್ತಿವೆ. -ಪಿ.ಸಿ.ರಾವ್, ಅಧ್ಯಕ್ಷರು, ಬೆಂಗಳೂರು ಹೋಟೆಲ್ ಮಾಲೀಕರ ಸಂಘ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.