ಮಾನವೀಯತೆ ಮಹಾ ಬೆಳಕು ಸಿದ್ಧಗಂಗಾ ಶ್ರೀ ಗಳು
Team Udayavani, Apr 1, 2021, 3:39 PM IST
ನಾನು ಆರಂಭವ ಮಾಡುವನೆಯ್ನಾ, ಗುರುಪೂಜೆಗೆಂದು,ನಾನು ಬೆವಹಾರವ ಮಾಡುವೆನೆಯ್ನಾ, ಲಿಂಗಾರ್ಚನೆಗೆಂದು,ನಾನು ಪರಸೇವೆಯ ಮಾಡುವೆನಯ್ನಾ,ಜಂಗಮದಾಸೋಹಕ್ಕೆಂದು,ನಾನಾವಾವ ಕರ್ಮಂಗಳ ಮಾಡಿದಡೆಯುಆ ಕರ್ಮಫಲಭೋಗವ ನೀ ಕೊಡುವೆ ಎಂಬುದನಾನು ಬಲ್ಲೆನು.ನೀ ಕೊಟ್ಟ ದ್ರವ್ಯನ ನಿಮಗಲ್ಲದೆ ಮತ್ತೂಂದಕ್ಕೆ ಮಾಡೆನು,ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೇ ಕೂಡಲಸಂಗಮದೇವಾ.ಎಂಬ ಬಸವಣ್ಣವರ ಸಂದೇಶದಂತೆ ಪೂಜ್ಯಶ್ರೀ ಶಿವಕುಮಾರಮಹಾಸ್ವಾಮಿಗಳವರು ನಡೆಸಿದ ಕಾಯಕದಲ್ಲಿ ಸ್ವಾರ್ಥದ ಲೇಪವಿಲ್ಲ. ಅವರು ನಡೆಸಿದಕಾಯಕಯೋಗದಿಂದ ಬಂದ ಪ್ರತಿಫಲವನ್ನು ಗುರು ಲಿಂಗ ಜಂಗಮಕ್ಕೆಸಮರ್ಪಿಸಿದ್ದಾರೆ. ಅವರ ದೃಷ್ಟಿಯಲ್ಲಿ ಗುರು ಲಿಂಗಜಂಗಮ ಎಂದರೆ ಸಮಾಜ.
ಅವರು ನಡೆಸಿದಕಾಯಕ ಒಂದು ಆಧ್ಯಾತ್ಮಿಕ ವ್ರತದಂತೆ. ತಮಗೆ ಬಂದಎಲ್ಲಾ ಫಲವನ್ನು ಅದು ಭಗವಂತನ ಕೃಪೆಯಿಂದಬಂದದ್ದು ಎಂದು ಭಾವಿಸಿ, ಸಮಾಜದ ಕಲ್ಯಾಣಕ್ಕಾಗಿಸಮರ್ಪಿಸಬೇಕೆಂಬ ಋಣದ ಕಲ್ಪನೆಯ ಕರ್ತವ್ಯದಸಂದೇಶವನ್ನು ತಮ್ಮ ಆದರ್ಶ ಬದುಕಿನ ಮೂಲಕಇಡೀ ಲೋಕಕ್ಕೆ ನೀಡಿದ ಮಹಾನ್ ಚೇತನ ಪರಮಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು.ಶ್ರೀಗಳವರಿಗೆ ಕಾಯಕ ಮತ್ತು ದಾಸೋಹ ತಮ್ಮ ಸೇವಾಪಥದ ಎರಡು ಆದರ್ಶ ಆಧ್ಯಾತ್ಮಿಕ ಮಾರ್ಗಗಳಾಗಿದ್ದವು.
ಸ್ವತಃ ತಾವೇ ದೈಹಿಕ ಪರಿಶ್ರಮದಿಂದಮಠದ ನೆಲದಲ್ಲಿ ಕೃಷಿ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳುವುದರ ಮೂಲಕ ಮಠಾಧಿಪತಿಗಳಾದವರು ಸ್ವತಃ ಶ್ರಮದ ಸಂಸ್ಕೃತಿಯನ್ನು ಸಾಕಾರಗೊಳಿಸಿಕೊಳ್ಳಬೇಕು ಎಂಬ ದಿವ್ಯವಾದ ಕಾಯಕ ಸೂತ್ರವನ್ನುಧಾರ್ಮಿಕ ಗುರುಗಳ ಸಂಕುಲಕ್ಕೆ ನೀಡಿದ ಅಪರೂಪದಕಾಯಕಯೋಗಿಗಳು ಅವರಾಗಿದ್ದರು.
ಅವರಕಲ್ಪನೆಯ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ.ಶ್ರೀಗಳವರ ಆಧ್ಯಾತ್ಮ ಬದುಕಿನ ಸಾಧನೆಯ ಮೂಲ ಮಂತ್ರವೇ ತ್ರಿವಿಧದಾಸೋಹವಾಗಿತ್ತು. ಶ್ರೀ ಸ್ವಾಮಿವಿವೇಕಾನಂದರು ಹೇಳುವಂತೆ “”ಹಸಿದ ಹೊಟ್ಟೆಗೆಅನ್ನವೇ ಬ್ರಹ್ಮಾಂಡ” ಎನ್ನುವ ಸಂದೇಶಕ್ಕೆ ಪೂರಕವಾಗಿ ಅನ್ನದಾಸೋಹ, ಜ್ಞಾನದಾಸೋಹ ಮತ್ತು ಅನಾಥರಿಗೆ, ನಿರ್ಲಕ್ಷಿತರಿಗೆ ಆಶ್ರಯ ನೀಡುವ ಮೂಲಕ ತ್ರಿವಿಧದಾಸೋಹಿಗಳೆಂಬ ವಿಶಿಷ್ಟ ಅಭಿನಾಮಕ್ಕೆ ಅವರು ಪಾತ್ರರಾದರು.ಮಹಾದಾಸೋಹದ ಮಣಿಹ ಹೊತ್ತು ಧರೆಗೆ ಇಳಿದು ಬಂದ ಅಪೂರ್ವ ಚೇತನ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರು.
ಅವರ ದೀರ್ಘ ಬದುಕಿನ ರಹಸ್ಯವೇಅವರು ಪ್ರತಿಪಾತಿಸಿದ ಮತ್ತು ಪಾಲಿಸಿಕೊಂಡು ಬಂದ ಸತ್ಯಶುದ್ಧ ಕಾಯಕ ಪ್ರಜ್ಞೆ ಮತ್ತುನಿಷ್ಕಾಮ ಭಾವದಿಂದ ಅವರು ನಿರ್ವಹಿಸಿದ ತ್ರಿವಿಧ ದಾಸೋಹ ಸೇವೆ.
1966ರಲ್ಲಿ ಭೀಕರ ûಾಮ ರಾಜ್ಯದಲ್ಲಿ ಆವರಿಸಿದಾಗ ಅದರ ಪರಿಣಾಮ ಶ್ರೀಮಠದಮೇಲೂ ದಟ್ಟವಾಗಿ ಆವರಿಸಿತ್ತು. ಆ ಸಂದರ್ಭದಲ್ಲಿ ಶ್ರೀಮಠದ ಹಿತೈಷಿಗಳು ಮತ್ತುಹಿರಿಯ ಭಕ್ತರು ಆರ್ಥಿಕ ಸಂಕಷ್ಟದಲ್ಲಿದ್ದಶ್ರೀಮಠದಲ್ಲಿ ನಡೆಯುತ್ತಿದ್ದ ಉಚಿತ ವಿದ್ಯಾರ್ಥಿನಿಲಯವನ್ನು ಮತ್ತು ಅನ್ನ ದಾಸೋಹವನ್ನುತಾತ್ಕಾಲಿಕವಾಗಿ ನಿಲ್ಲಿಸಬೇಕೆಂಬ ಸಲಹೆಯನ್ನುಶ್ರೀಗಳವರಿಗೆ ನೀಡಿದಾಗ ಅದನ್ನು ಸಾರಾಸಗಟಾಗಿತಿರಸ್ಕರಿಸಿ “”ಶ್ರೀಮಠವು ಇರುವವರೆಗೆ ಮತ್ತುನಾನು ಜೀವಂತವಾಗಿರುವವರೆಗೆ ಈ ಮಠದಲ್ಲಿದಾಸೋಹ ನಿಲ್ಲಲು ಸಾಧ್ಯವೇ ಇಲ್ಲ.
ಅದಕ್ಕಾಗಿ ಎಂತಹ ತ್ಯಾಗಕ್ಕಾದರೂ ನಾನು ಸಿದ್ಧ” ಎಂದುಗಟ್ಟಿಧ್ವನಿಯಲ್ಲಿ ಹೇಳುವ ಮೂಲಕ ದಾಸೋಹನಿಲ್ಲಿಸಬೇಕೆಂಬ ಸಲಹೆ ನೀಡಲು ಬಂದಿದ್ದ ಮಠದ ಹಿತೈಷಿಗಳಿಗೆ ಒಂದು ರೀತಿಯಎಚ್ಚರಿಕೆಯ ಸಂದೇಶವನ್ನು ನೀಡಿದ ಮಹಾನ್ ಮಾನವತಾವಾದಿ ಡಾ. ಶ್ರೀಶಿವಕುಮಾರ ಮಹಾಸ್ವಾಮಿಗಳ ಆಧ್ಯಾತ್ಮ ಬದುಕಿಗೆ ಕಾಯಕ ದಾಸೋಹಗಳೇತಾರಕ ಮಂತ್ರಗಳಾಗಿದ್ದವು.
ಶಿಸ್ತು, ಸಂಯಮ ಮತ್ತು ದಯೆಯ ಸಾಕಾರ ಮೂರ್ತಿ: ಪರಮ ಪೂಜ್ಯ ಶ್ರೀಶಿವಕುಮಾರ ಮಹಾಸ್ವಾಮಿಗಳು ಶಿಸ್ತು, ಸಂಯಮಕ್ಕೆ ಹೆಸರಾಗಿದ್ದವರು. ಇದುಅವರ ದಿನನಿತ್ಯ ದಿನಚರಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಸುಮಾರು ಬೆಳಿಗ್ಗೆಎರಡು ಗಂಟೆಗೆ ಆರಂಭವಾಗುತ್ತಿದ್ದ ಅವರ ದಿನನಿತ್ಯದ ಚಟುವಟಿಕೆಗಳು ರಾತ್ರಿಸುಮಾರು ಹತ್ತು ಗಂಟೆಯವರೆವಿಗೂ ಮುಂದುವರೆಯುತ್ತಿದ್ದುದು ಅವರಕ್ರಿಯಾಶೀಲತೆಯ ಸಂಕೇತವಾಗಿತ್ತು. ಅವರು ಅನುಸರಿಸುತ್ತಿದ್ದ ಶಿವಯೋಗವೇಅವರ ಆರೋಗ್ಯದ ರಹಸ್ಯವಾಗಿತ್ತು.
ಅವರು ನಿಷ್ಠೆಯಿಂದ ಮಾಡುತ್ತಿದ್ದ ಇಷ್ಟಲಿಂಗಪೂಜೆ, ಅಲ್ಪ ಪ್ರಸಾದ ಸೇವನೆ, ಶ್ರೀಮಠದ ಮಕ್ಕಳೊಂದಿಗಿನ ಅವರ ಪ್ರೀತಿಯಒಡನಾಟ, ಮಠಕ್ಕೆ ಬರುತ್ತಿದ್ದ ಅಸಂಖ್ಯಾತ ಭಕ್ತರೊಂದಿಗೆ ಅವರ ಪ್ರೀತಿಯ ಸ್ಪಂದನ,ಈ ಮಧ್ಯೆ ಧರ್ಮಪ್ರಚಾರಕ್ಕಾಗಿ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿಅವರು ನೀಡುತ್ತಿದ್ದ ಧಾರ್ಮಿಕ ಸಂದೇಶಗಳು ಅವರ ಇಳಿವಯಸ್ಸಿನಲ್ಲಿಯೂಅವರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿಟ್ಟಿತ್ತು.
ಪರಿಶುದ್ಧವಾದ ಶಿಸ್ತು,ಸಂಯಮ ಹಾಗೂ ಜನಪರ ಚಿಂತನೆಗಳಿಗೆ ಅವರೊಂದು ದಿವ್ಯಉದಾಹರಣೆಯಾಗಿದ್ದರು. ಅವರು ಅಧ್ಯಯನಶೀಲರಾಗಿದ್ದರು. ಸಾಹಿತ್ಯ, ಸಂಸ್ಕೃತಿಕಲೆಗಳ ಆರಾಧಕರಾಗಿದ್ದರು. ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಅವರುನೀಡುತ್ತಿದ್ದ ಆಶೀರ್ವಚನವು ಕೇಳುಗರಿಗೆ ಒಂದು ವಿಶಿಷ್ಟವಾದದಿವ್ಯಾನುಭೂತಿಯನ್ನು ನೀಡುತ್ತಿತ್ತು.
“”ಮಾತೆಂಬುದು ಜ್ಯೋತಿರ್ಲಿಂಗ” ಎಂಬಅಲ್ಲಮ ಪ್ರಭುಗಳ ಸಂದೇಶಕ್ಕೆ ಅನ್ವರ್ಥವಾಗುವಂತೆ ಇದ್ದ ಶ್ರೀಗಳವರ ಮಾತುಎಂದರೆ ಅದು ಶಿವಾನುಭಾವದ ಬೆಳಕೇ ಆಗಿತ್ತು.ಬಸವಾದಿ ಶರಣರ ವಿಚಾರಧಾರೆಯ ಪ್ರಯೋಗಶಾಲೆ ಶ್ರೀ ಸಿದ್ಧಗಂಗಾ ಕ್ಷೇತ್ರ:ಪೂಜ್ಯ ಶ್ರೀಗಳವರಿಗೆ ಬಸವಾದಿ ಶರಣರ ತತ್ವಾದರ್ಶಗಳೇ ಉಸಿರಾಗಿತ್ತು. ಶರಣರುಹನ್ನೆರಡನೆಯ ಶತಮಾನದಲ್ಲಿ ಪ್ರತಿಪಾದಿಸಿದಂತಹ ಕಾಯಕ, ದಾಸೋಹ, ವೈಚಾರಿಕಚಿಂತನೆ, ಸ್ತ್ರೀಸಮಾನತೆ, ಜಾತ್ಯಾತೀತ ಭಾವ ಮುಂತಾದ ವಿಚಾರಧಾರೆಗಳಮಹಾಪ್ರಯೋಗ ಶಾಲೆಯನ್ನಾಗಿ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ರೂಪಿಸಿದ ಹಿರಿಮೆಪೂಜ್ಯಶ್ರೀ ಸ್ವಾಮಿಗಳವರಿಗೆ ಸಲ್ಲುತ್ತದೆ.ವಿಶ್ವದ ವಿಭೂತಿ ಪುರುಷರುಗಳಾದ ಬಸವ, ಬುದ್ಧ, ಮಹಾವೀರ, ಏಸುಕ್ರಿಸ್ತ, ಶ್ರೀರಾಮಕೃಷ್ಣ ಪರಮಹಂಸರು, ಶ್ರೀ ಸ್ವಾಮಿವಿವೇಕಾನಂದರು, ಶ್ರೀ ಅರವಿಂದರು,ಮಹಾತ್ಮ ಗಾಂಧೀಜಿಯವರು ಶ್ರೀ ಅಂಬೇಡ್ಕರ್ ಮತ್ತು ಡಾ. ರಾಧಾಕೃಷ್ಣನ್‌ಅಂತಹವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ನಿಜವಾದಅರ್ಥದಲ್ಲಿ ಸರ್ವಧರ್ಮದ ಪ್ರತಿಪಾದಕರಾಗಿದ್ದ ಅಪೂರ್ವ ದಾರ್ಶನಿಕರಾಗಿದ್ದರು.
ಅಲ್ಲಮಪ್ರಭುಗಳ ಈ ವಚನಕ್ಕೆ ಅನ್ವರ್ಥವಾದವರು ಮಹಾನ್ ವಿಶ್ವಜ್ಯೋತಿಪೂಜ್ಯಶ್ರೀ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಪೂಜ್ಯಶ್ರೀಗಳು ನೆಟ್ಟಿದ ಸಸಿಪರಮ ಜ್ಞಾನವೆಂಬ ಸಸಿ. ಈ ಜ್ಞಾನವೆಂಬ ಸಸಿಗೆ ಪಾತಿಯ ಕಟ್ಟಲು ಅವರುಬಳಸಿರುವ ಮಣ್ಣು ಗುರುಭಕ್ತಿಯೆಂಬ ಕಾಯಕ ನಿಷ್ಠೆಯಿಂದ ಕೂಡಿದ ಭೂಮಿಯಮಣ್ಣು.
ಜ್ಞಾನದ ಸಸಿಗೆ ಆಹಾರವಾಗಿ ಅವರು ನೀಡಿದ ಗೊಬ್ಬರ ಅದು ಲಿಂಗಭಕ್ತಿ.ಜ್ಞಾನದ ಸಸಿಗೆರೆದ ಜಲ ಜಂಗಮ ಭಕ್ತಿಯೆಂಬ ಪರಮಾನಂದದ ಜಲ. ಇಂತಹಆಧ್ಯಾತ್ಮಿಕವಾದ ಕಾಯಕ ಸಾಧನದಿಂದ ಬೆಳಿಸಿದ ಬೆಳೆ ಅದೊಂದು ಭಕ್ತಿಯ ವೃಕ್ಷ.ಇಂಥಹ ಭಕ್ತಿವೃಕ್ಷ ಫಲವನ್ನು ಬೆಳೆದು ಆ ಫಲವನ್ನು ತಾವು ಉಣ್ಣದೆ, ಅನುಭವಿಸದೆ, ಆಫಲವನ್ನು ಹಸಿದ ಹೊಟ್ಟೆಗೆ ಅನ್ನವನ್ನು, ಅಂಧಕಾರದಲ್ಲಿದ್ದವರಿಗೆ ಅಕ್ಷರದ ಜ್ಞಾನವನ್ನು,ಅನಾಥರಿಗೆ ಆಶ್ರಯವನ್ನು ನೀಡುವ ಮೂಲಕ ಸರ್ವವನ್ನೂ ಸಮರ್ಪಣಾಭಾವದಿಂದ ಸಮಾಜಕ್ಕೆ ಧಾರೆಯೆರೆದವರು ಶ್ರೀ ಸಿದ್ಧಗಂಗೆಯ ಪರಮ ಪೂಜ್ಯರಾದಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು.
ಅವರು ನಿಜವಾದ ಅರ್ಥದಲ್ಲಿಲಿಂಗದಲ್ಲಿ ಮುಕ್ತರಾಗಿದ್ದಾರೆ, ಲಿಂಗೈಕ್ಯರಾಗಿದ್ದಾರೆ. ಅವರು ಭೌತಿಕವಾಗಿ ನಮ್ಮ ನಡುವೆಇಲ್ಲದಿದ್ದರೂ ಅವರು ತಮ್ಮ ಜ್ಞಾನಯೋಗ, ಕಾಯಕಯೋಗ, ದಾಸೋಹ ಯೋಗ,ಶಿವಯೋಗದ ಸ್ವರೂಪಿಗಳಾಗಿ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಪರಮಜ್ಞಾನವೆಂಬ ಸಸಿಗೆ,ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ;ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ;ಜಂಗಮಭಕ್ತಿ ಎಂಬ ಪರಮಾನಂದವ ಜಲವ ನೀಡಿದೆ.ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ.
– ಅಲ್ಲಮಪ್ರಭು
ಡಾ.ಸಿ.ಸೋಮಶೇಖರ ಭಾ.ಆ.ಸೇ(ನಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.