ಹುಣಸೆಮಾರನಹಳ್ಳಿ ಜಂಗಮ ಮಠದ ಹೈಡ್ರಾಮ ಸುಖಾಂತ್ಯ


Team Udayavani, Oct 29, 2017, 11:57 AM IST

dayananada-swami.jpg

ಬೆಂಗಳೂರು/ಯಲಹಂಕ: ಹುಣಸೆಮಾರನಹಳ್ಳಿ ಜಂಗಮಮಠದ ದಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣ ಸಾಕಷ್ಟು ತಿರುವು ಪಡೆದುಕೊಂಡಿದ್ದು, ಕಳೆದ ಮೂರು ದಿನಗಳಿಂದ ಜಂಗಮ ಮಠದ ಆವರಣದಲ್ಲಿ ನಡೆಯುತ್ತಿದ್ದ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಸದ್ಯ ಶ್ರೀಶೈಲ ಮಠದ ಹಿರಿಯ ಶ್ರೀಗಳ ಸಮ್ಮುಖದಲ್ಲಿ ಇಡೀ ಪ್ರಕರಣ ಸುಖಾಂತ್ಯಗೊಂಡಿದೆ.

ಶನಿವಾರ ಮಠಕ್ಕೆ ಭೇಟಿ ನೀಡಿದ ಶ್ರೀಶೈಲ ಮಠದ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು, ಮಠದ ಆಡಳಿತ ಮಂಡಳಿ ಮತ್ತು ಕೆಲ ಭಕ್ತಾದಿಗಳ ಜತೆ ಸಮಾಲೋಚನೆ ನಡೆಸಿದರು. ಬಳಿಕ ದಯಾನಂದ ಸ್ವಾಮೀಜಿಯನ್ನು ಮಠದ ಉತ್ತರಾಧಿಕಾರಿಯಾಗಿ ಮುಂದುವರಿಸಲು ಅವಕಾಶ ನೀಡುವುದಿಲ್ಲ. 15 ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಾಗೆಯೇ 15 ದಿನಗಳಲ್ಲಿ ಮುಂದಿನ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಭಕ್ತರಿಗೆ ಆಶ್ವಾಸನೆ ನೀಡಿದರು. ಆದರೆ, ಮೂಲಗಳ ಪ್ರಕಾರ ದಯಾನಂದ ಸ್ವಾಮೀಜಿಯಿಂದ ಇಡೀ ಮಠದ ಮರ್ಯಾದೆ ಹಾಳಾಗಿದೆ. ಹೀಗಾಗಿ ಅವರನ್ನು ಉಚಾಟನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಶ್ರೀಶೈಲ ಸ್ವಾಮೀಜಿಗಳು ಅಧಿಕೃತವಾಗಿ ಪ್ರಕಟಿಸಿಲ್ಲ.

ಸಂಜೆ ಮಠಕ್ಕೆ ಆಗಮಿಸಿದ ಶ್ರೀಶೈಲ ಶ್ರೀಗಳು, ಜಂಗಮ ಮಠದ ಹಿರಿಯ ಸ್ವಾಮೀಜಿ ಪಟ್ಟದ ಶಿವಾಚಾರ್ಯ ಸ್ವಾಮೀಜಿ ಮತ್ತು ಕುಟುಂಬ ಸದಸ್ಯರ ಜತೆ ಸುಮಾರು ಮೂರು ಗಂಟೆಗಳ ಸಮಾಲೋಚನೆ ನಡೆಸಿದ್ದು, ಸಂಧಾನಕ್ಕೆ ಯತ್ನಿಸಿದರು. ಆದರೆ, ದಯಾನಂದ ಸ್ವಾಮೀಜಿ ವಿರುದ್ಧ ಬಣ ಹಾಗೂ ಕೆಲ ಭಕ್ತರು ಆರೋಪಿ ಸ್ವಾಮೀಜಿಯ ಇಡೀ ಕುಟುಂಬವನ್ನು ಹೊರಹಾಕಬೇಕು. ಅಲ್ಲಿವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಆಡಳಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಶ್ರೀಗಳು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದರು. ನಂತರ ಮತ್ತೂಮ್ಮೆ ಎರಡು ಬಣಗಳು ಕೆಲ ಪ್ರಮುಖರ ಜತೆ ಸಭೆ ನಡೆಸಿದ ಶ್ರೀಗಳು ಸದ್ಯ ಪ್ರತಿಭಟನೆ ವಾಪಸ್‌ ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಸಹಮತ ವ್ಯಕ್ತವಾಯಿತು. ಇದೇ ವೇಳೆ ರಾಸಲೀಲೆ ಮತ್ತು ಮಠದ ಆಸ್ತಿಯನ್ನು ಅಕ್ರಮವಾಗಿ ದಯಾನಂದ ಸ್ವಾಮೀಜಿ ಕಬಳಿಕೆ ಮಾಡಿದ್ದಾರೆಂಬ ಆರೋಪ ಕುರಿತು 9 ಮಂದಿಯ ಸಮಿತಿ ರಚಿಸಿ, 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದರು.

ಅಲ್ಲದೇ ಮುಂದಿನ ಅರ್ಹ ಉತ್ತರಾಧಿಕಾರಿ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸುವಂತೆ ಆದೇಶಿಸಿದರು. ನೂತನ ಸಮಿತಿಯ 9 ಮಂದಿ ಸದಸ್ಯರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಮಠದ ಭಕ್ತರು, ಗ್ರಾಮಸ್ಥರು ಟ್ರಸ್ಟಿಗಳು ತಿಳಿಸಿದ್ದಾರೆ. ಅಲ್ಲದೇ ಆರೋಪಿತ ಸ್ವಾಮೀಜಿಯ ಇಡೀ ಕುಟುಂಬವನ್ನು ಮಠದಿಂದ ಹೊರಹಾಕುವಂತೆ ಒತ್ತಾಯಿಸಿದ್ದು,

ಈ ಮೂಲಕ ವೀರಶೈವ ಸಮಾಜ ಕುರಿತು ಸಮಾಜಕ್ಕೆ ಸೂಚನೆ ನೀಡಬೇಕು ಎಂದು ಭಕ್ತರು, ಗ್ರಾಮಸ್ಥರು ಆಗ್ರಹಿಸಿದರು. ಅಷ್ಟೇ ಅಲ್ಲದೇ 15 ದಿನಗಳಲ್ಲಿ ಮಠದಿಂದ ಹೊರಹೋಗುತ್ತೇವೆ ಎಂದು ರಾಸಲೀಲೆ ನಡೆಸಿದ ದಯಾನಂದಸ್ವಾಮೀಜಿ ಸೇರಿ ಇಡೀ ಕುಟಂಬ ಭಕ್ತರು, ಆಡಳಿತ ಮಂಡಳಿ ಮತ್ತು ಶ್ರೀಗಳ ಸಮ್ಮುಖದಲ್ಲಿ ಮುಚ್ಚಳಿಕೆ ಬರೆದುಕೊಟ್ಟರು.

ಶ್ರೀಗಳಿಗೆ ಪೊಲೀಸರ ಭದ್ರತೆ: ಕಳೆದ ಮೂರು ದಿನಗಳಿಂದ ಮಠದಲ್ಲಿ ನಡೆಯುತಿದ್ದ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶ್ರೀಶೈಲ ಮಠದ ಶ್ರೀಗಳು ಆಗಮಿಸುತ್ತಿದ್ದಂತೆ ಎರಡು ಬಣದ ಭಕ್ತರು ಏಕಾಏಕಿ ಶ್ರೀಗಳ ಜತೆ ಚರ್ಚೆಗೆ ಮುಂದಾದರು.

ಈ ವೇಳೆ ತಳ್ಳಾಟ, ನೂಕಾಟ ಕೂಡ ನಡೆಯಿತು. ಹೋರಾಟಗಾರರು ಮಾತಿನ ಚಕಮಕಿ ಜತೆಗೆ ಕೈ ಕೈ ಮೀಲಾಯಿಸಲು ಮುಂದಾದರು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ, ಲಘು ಲಾಠಿ ಪ್ರಹಾರ ನಡೆಸಿ ಬಿಗಿ ಭದ್ರತೆಯಲ್ಲಿ ಶ್ರೀಗಳನ್ನು ಮಠದ ಒಳಗೆ ಕರೆದೊಯ್ದರು.

ಮಾಸ್ಟರ್‌ಮೈಂಡ್‌ ಪ್ರವೀಣ್‌?
ಇಡೀ ರಾಸಲೀಲೆಯ ಮಾಸ್ಟರ್‌ ಮೈಂಡ್‌ ಚನ್ನಪಟ್ಟಣ ಮೂಲದ ಪ್ರವೀಣ್‌ ಎಂಬಾತ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹುಣಸಮಾರನಹಳ್ಳಿಯಲ್ಲಿ ಹೋಟೆಲ್‌ ನಡೆಸುತ್ತಿರುವ ಈತ, ಟ್ರಸ್ಟಿಯ ಸದಸ್ಯ ಹಿಮಾಚಲಪತಿಯ ಸ್ನೇಹ ಬೆಳೆಸಿದ್ದ.

ಈ ಇಬ್ಬರೂ ದಯಾನಂದಸ್ವಾಮೀಜಿಯ ಪರಸ್ತ್ರೀ ವ್ಯಾಮೋಹವನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಬ್ಲಾಕ್‌ವೆುಲ್‌ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಸ್ವಾಮೀಜಿಗೆ ಪರಿಚಯವಿರುವ ಸಿನಿಮಾ ನಟಿ ಎನ್ನಲಾದ ಯುವತಿಯನ್ನು ಮೈಸೂರಿನಿಂದ ಕರೆಸಿ ಸ್ವಾಮೀಜಿ ಜತೆ ರಾಸಲೀಲೆ ನಡೆಸುವುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದರು.

ತನ್ಮೂಲಕ ಸ್ವಾಮೀಜಿಯಿಂತ ಕನಿಷ್ಠ 20 ಲಕ್ಷ ರೂ.ಗೆ ಬೇಡಿಕೆ ಇಡಲು ಪ್ರವೀಣ್‌ಗೆ ಹಿಮಾಚಲಪತಿ ಸೂಚಿಸಿದ್ದ. ಆದರೆ, ಸ್ವಾಮೀಜಿಯಿಂದ 35 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಹಣದಿಂದ ಪ್ರವೀಣ್‌ ಮನೆ ಮತ್ತು ಕಾರು ಖರೀದಿಸಿದ್ದಾನೆಂದು ಮೂಲಗಳು ತಿಳಿಸಿವೆ.

ಪ್ರವೀಣ್‌ ಬಳಿಯಿದ್ದ ವಿಡಿಯೋ ಪಡೆದ ಹಿಮಾಚಲಪತಿ ಕಳೆದ ಎರಡು ವರ್ಷಗಳಿಂದ ಸ್ವಾಮೀಜಿಯನ್ನು ಬ್ಲಾಕ್‌ವೆುàಲ್‌ ಮಾಡುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ ಇದುವರೆಗೆ ಈ ವಿಡಿಯೋ ತೋರಿಸಿ ಸ್ವಾಮೀಜಿಯಿಂದ ಇನ್ನಷ್ಟು ಹಣವನ್ನು ಪಡೆಯುವಂತೆ ಆರೋಪಿತ ಸ್ವಾಮೀಜಿಯ ಆಪ್ತ ಹರೀಶ್‌ ಎಂಬಾತನಿಗೆ ಹಿಮಾಚಲಪತಿ ಸೂಚಿಸಿದ್ದರೆಂಬ ಆರೋಪ ಕೇಳಿಬಂದಿದೆ.

ಆದರೆ, ಮಠದ ಬಳಿಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್‌, ದಯಾನಂದ ಸ್ವಾಮೀಜಿಗೆ ಆಪ್ತನಾಗಿದ್ದ. ಹೀಗಾಗಿ ಪ್ರವೀಣ್‌ ಮತ್ತು ಹಿಮಾಚಲಪತಿ ಆಮಿಷಕ್ಕೆ ಒಳಗಾಗಿಲ್ಲ ಎಂದು ತಿಳಿದು ಬಂದಿದೆ.

ಸಮಸೈ ಬಗೆಹರಿಸಲು ನಾವು ಬಂದಿದ್ದೇವೆ. ಮಠದಲ್ಲಿ ನಡೆದಿರುವ ಬೆಳವಣಿಗೆಗಳಿಂದ ತುಂಬಾ ಬೇಸರವಾಗಿದೆ. ಮುಂದಿನ ಉತ್ತರಾಧಿಕಾರಿಯನ್ನು ಇನ್ನು 15 ದಿನಗಳಲ್ಲಿ ತಿಳಿಸಲಾಗುವುದು. ಉತ್ತರಾಧಿಕಾರಿ ನೇಮಕ ಮಾಡಲು 9 ಜನ ಸದಸ್ಯರ ಕಮಿಟಿ ರಚನೆ ಮಾಡಿದ್ದೇನೆ. ಹಗರಣ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ. 
-ಶ್ರೀಶೈಲ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಶ್ರೀಶೈಲ ಮಠ

ಟಾಪ್ ನ್ಯೂಸ್

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.