ಹುಂಡೈ ಮೋಟಾರ್ಗೆ ಬೆಳ್ಳಿಹಬ್ಬದ ಸಂಭ್ರಮ
Team Udayavani, Feb 18, 2021, 2:39 PM IST
ಬೆಂಗಳೂರು: “ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಟ್’ ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ್ದು, ತನ್ನ ಬೆಳ್ಳಿ ಆಚರಿಸಿಕೊಳ್ಳುತ್ತಿದೆ.
ಈ ಸಾರ್ಥಕ ಸಂಭ್ರಮದ ವೇಳೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎಸ್.ಎಸ್. ಕಿಮ್, ಭಾರತವು ತಯಾರಿಕಾ ಮತ್ತು ವಾಣಿಜ್ಯ ಕ್ಷೇತ್ರದ ಜಾಗತಿಕ ಹೃದಯ ಭಾಗವಾಗಿದೆ. 25 ವರ್ಷಗಳ ಹಿಂದೆ ಕಂಪನಿ ಭಾರತದಲ್ಲಿ ತನ್ನ ಪ್ರಯಾಣ ಆರಂಭಿಸಿತ್ತು. ತನ್ನ ವ್ಯವಹಾರಿಕ ಮತ್ತು ಪರಿಸರ ಸಂರಕ್ಷಣೆಯ ಬದ್ದತೆಯೊಂದಿಗೆ ಕಂಪನಿಯು ಬೃಹದಾಕಾರವಾಗಿ ಬೆಳೆದಿದೆ ಎಂದರು.
ನಮ್ಮ ಜಾಗತಿಕ ವಿಷನ್ “ಪ್ರೋಗ್ರೆಸ್ ಫಾರ್ ಹುಮ್ಯಾನಿಟಿ’ ಅಡಿಯಲ್ಲಿ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತಯಾರಿಕೆ ಮತ್ತು ಸೇವೆಯಲ್ಲಿ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿದೆ. ಆ ಮೂಲಕ ಭಾರತದ ಅತ್ಯಂತ ಪ್ರೀಯ ಮತ್ತು ವಿಶ್ವಾಸಾರ್ಹ ಅಟೋಮೋಟಿವ್ ಬ್ರಾಂಡ್ ಆಗುವ ಗುರಿ ಹೊಂದಲಾಗಿದೆ ಎಂದು ಕಿಮ್ ಹೇಳಿದ್ದಾರೆ.
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಇಂದು ಭಾರತದಲ್ಲಿ ಮನೆ ಮಾತಾಗಿದೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ಶೇ.17.4 ಮಾರುಕಟ್ಟೆ ಶೇರು ತನ್ನದಾಗಿಸಿಕೊಂಡಿದೆ. ಆರಂಭದಿಂದ ಇಲ್ಲಿವರೆಗೆ 9 ಮಿಲಿಯನ್ಗಿಂದ ಅಧಿಕ ಸೇಲ್, 4 ಬಿಲಿಯನ್ಗೂ ಅಧಿಕ ಹೂಡಿಕೆ ಆಗಿದ್ದು, 1,154 ಮಾರಾಟ ಮಳಿಗೆಗಳು, 1,298 ಸರ್ವಿಸ್ ಮಳಿಗೆಗಳು, ಎಸ್ ಯುವಿ ಬ್ರಾಂಡ್ನ ಅತ್ಯಧಿಕ ಮಾರಾಟ, 88 ದೇಶಗಳಿಗೆ ರಫ್ತು ಮಾಡಿದ ಹೆಗ್ಗಳಿಕೆಗೆ ಕಂಪನಿ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.