ಹ್ಯುಂಡೈ ಮೋಟರ್ ಇಂಡಿಯಾ ಮತ್ತೆ ನಂ.1
Team Udayavani, Oct 6, 2019, 3:05 AM IST
ಬೆಂಗಳೂರು: ದೇಶದ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ ಒದಗಿಸುವ ಮತ್ತು ಆರಂಭದಿಂದಲೂ ರಫ್ತುದಾರರಲ್ಲಿ ಪ್ರಥಮ ಸ್ಥಾನದಲ್ಲಿರುವ ಹ್ಯುಂಡೈ ಮೋಟರ್ ಇಂಡಿಯಾ ಲಿ., (ಎಚ್‌ಎಂಐಎಲ್) ಸತತ ಮೂರನೇ ವರ್ಷವೂ ನಂ.1 ಸ್ಥಾನ ಗಳಿಸಿದೆ.
2019ರ ಜೆಡಿ ಪವರ್ ಗ್ರಾಹಕ ಸೇವಾ ಸೂಚ್ಯಂಕ (ಸಿಎಸ್‌ಐ) ವರದಿ ಪ್ರಕಾರ ಮಾರಾಟದ ನಂತರ ಹ್ಯುಂಡೈ ಮೋಟರ್ ಸಾಮೂಹಿಕ ಮಾರುಕಟ್ಟೆ ವಿಭಾಗದಲ್ಲಿ ಗ್ರಾಹಕರ ಸೇವಾ ತೃಪ್ತಿ ಮತ್ತು ಬ್ರಾಂಡ್ ಕಾರ್ಯಕ್ಷಮತೆ ಪರಿಶೀಲಿಸಿದ ನಂತರ 903 ಅಂಕಗಳನ್ನು ಪಡೆದು ಮತ್ತೆ ಅಗ್ರ ಪಟ್ಟಕ್ಕೇರಿದೆ.
ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ -ಸಿಇಒ ಎಸ್.ಎಸ್.ಕಿಮ್ ಮಾತನಾಡಿ, ಜೆಡಿ ಪವರ್ ಸಿಎಸ್‌ಐನಿಂದ ಸತತ 3ನೇ ವರ್ಷವೂ ಮೊದಲ ರ್‍ಯಾಂಕ್ ಪಡೆದಿರುವುದು ಸಂರಸ ತಂದಿದೆ. ಹ್ಯುಂಡೈ ಸಂಸ್ಥೆ ಗ್ರಾಹಕ ಕೇಂದ್ರಿತ ಬ್ರಾಂಡ್ ಆಗಿ, ಗುಣಮಟ್ಟದ ಸೇವೆ ನೀಡುವ ಮೂಲಕ ಗ್ರಾಹಕನ್ನು ತೃಪ್ತಿಪಡಿಸಲು ಬದ್ಧವಾಗಿದೆ. ಅಲ್ಲದೆ, ತನ್ನ ವಾಹನಗಳ ಮೂಲಕ ಗ್ರಾಹಕರ ಜೀವನದಲ್ಲಿ ಜತೆಯಾಗಿ, ಅತ್ಯುತ್ತಮ ಸೇವಾ ಅನುಭವ ನೀಡುವುದು ನಮ್ಮ ಕರ್ತವ್ಯ ಎಂದರು.
ದೇಶದ ಎಲ್ಲ 1326 ಸೇವಾ ಔಟ್‌ಲೆಟ್‌ಗಳ ಮೂಲಕ 30 ಲಕ್ಷ ಗ್ರಾಹಕರನ್ನು ಪ್ರತಿ ವರ್ಷ ಸಂಪರ್ಕಿಸುತ್ತಿದ್ದೇವೆ. ಡಿಜಿಟಲ್ ಸರ್ವೀಸ್, ಮನೆ ಬಾಗಿಲಲ್ಲಿ ಸೇವೆ, ಪಿಕ್ ಅಪ್ ಮತ್ತು ಡ್ರಾಪ್ ಸೇವೆ ಹಾಗೂ ಉಚಿತ ಕಾರ್ ಕೇರ್ ಕ್ಲಿನಿಕ್ಸ್, ಗ್ರಾಹಕರನ್ನು ಭೇಟಿಯಾಗುವ ಮುನ್ನ ಸೇವಾ ಶಿಬಿರ ಮುಂತಾದ ಉಪಕ್ರಮಗಳನ್ನು ಪರಿಚಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.