ನಾನು ಸಿಎಂ ಅನ್ನೋದು ಜಸ್ಟ್ ಮಾತ್ ಮಾತಲ್ಲಿ: ಆರ್.ವಿ. ದೇಶಪಾಂಡೆ
Team Udayavani, Sep 2, 2018, 6:50 AM IST
ಬೆಂಗಳೂರು: “ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ, ಆ ರೇಸ್‌ನಲ್ಲೂ ಇಲ್ಲ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, “ಸಿಎಂ ಹುದ್ದೆಗೆ ನಿಮ್ಮ ಹೆಸರು ಕೇಳಿ ಬರುತ್ತಿದ್ದೆಯಲ್ಲ’ ಎಂದು ಕೇಳಿದ್ದಕ್ಕೆ, ಹಾಗೇನಿಲ್ಲ, ಸಿಎಂ ಆಗಬೇಕು ಎಂಬ ಆಕಾಂಕ್ಷೆ ಒಂದು ಕಾಲದಲ್ಲಿತ್ತು. ಈಗ ಅದು ಇಲ್ಲ. ದೇವೇಗೌಡರು ನನ್ನ ಸೂಚಿಸಿಲ್ಲ, ಕುಮಾರಸ್ವಾಮಿಯವರೂ ಶಿಫಾರಸು ಮಾಡಿಲ್ಲ. ಹಾಗೇ ಮಾತ್ ಮಾತಲ್ಲಿ ಹೇಳಿದ್ದು ಅದು. ಅಷ್ಟಕ್ಕೂ ನಾನು ಸಿಎಂ ಹುದ್ದೆಯ ಆಕಾಂಕ್ಷಿಯೂ ಅಲ್ಲ, ಅದರ ರೇಸ್‌ನಲ್ಲೂ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂಗೆ ಶುಭ ಹಾರೈಕೆ:
ಜನತಾ ದರ್ಶನದಲ್ಲಿ ಕೆಲ ಹೊತ್ತು ಮುಖ್ಯಮಂತ್ರಿಯರೊಂದಿಗೆ ಕುಳಿತು ಅವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದನ್ನು ಗಮನಿಸಿದ ಸಚಿವ. ಆರ್. ವಿ. ದೇಶಪಾಂಡೆ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜನತಾ ದರ್ಶನಕ್ಕೆ ಬರುವವರು ಹೆಚ್ಚಿನವರು ಬಡವರು, ಅದರಲ್ಲೂ ಆರೋಗ್ಯ ಸಂಬಂಧಿಸಿದ ಅಹವಾಲುಗಳೇ ಹೆಚ್ಚು. ಅವುಗಳನ್ನು ಅತ್ಯಂತ ತಾಳ್ಮೆ ಹಾಗೂ ಮಾನವೀಯತೆಯಿಂದ ಆಲಿಸಿ, ತಕ್ಷಣ ಸಂಬಂಧಪಟ್ಟವರಿಗೆ ಫೋನ್ ಮಾಡಿ ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದ್ದನ್ನು ನಾನು ನೋಡಿದ್ದೇನೆ. ಬಡವರ ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಕುಮಾರಸ್ವಾಮಿಯವರಿಗೆ ದೇವರು ಹೆಚ್ಚು ಆರೋಗ್ಯ ನೀಡಲೆಂದು ಹಾರೈಸುತ್ತೇನೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.