ನನಗೆ ಟಾರ್ಗೆಟ್‌ ಇಲ್ಲ, ಸತ್ಯವಷ್ಟೇ ಇರೋದು:  ಉಪೇಂದ್ರ


Team Udayavani, Aug 13, 2017, 7:10 AM IST

Upendra_.jpg

ಉಪೇಂದ್ರ ಮಾತನ್ನು ಕೇಳಿದವರು ಇದು ಸಾಧ್ಯವಾ ಎಂದು ಕೇಳುತ್ತಿದ್ದಾರೆ. ಯಾಕೆ ಸಾಧ್ಯವಿಲ್ಲ ಎಂದು ಉಪೇಂದ್ರ ಹೇಳುತ್ತಿದ್ದಾರೆ. ಉಪೇಂದ್ರ ಅವರು ರಾಜಕೀಯ ಸೇರುತ್ತಿರುವುದಕ್ಕೆ ಸಾಕಷ್ಟು ವಿಷಯಗಳು ಚರ್ಚೆಯಾಗುವುದರ ಜತೆಗೆ, ಸಾಕಷ್ಟು ಪ್ರಶ್ನೆಗಳು ಸಹ ಎದ್ದಿವೆ. ಆ ಪ್ರಶ್ನೆಗಳನ್ನು ಉಪೇಂದ್ರ ಅವರ ಎದುರೇ ನೇರವಾಗಿ ಇಡಲಾಗಿದೆ ಮತ್ತು ಉಪೇಂದ್ರ ಅವರು ಆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಿಮಗೂ, ನಮಗೂ ಎಲ್ಲರಿಗೂ ಗೊತ್ತಿದ್ದೂ ಮರೆತುಹೋಗಿರುವ ಸತ್ಯವನ್ನು ನಿಮ್ಮಲ್ಲಿ ಹಂಚಿಕೊಳ್ಳಬೇಕು ಎಂಬ ವಾಕ್ಯ ಆಹ್ವಾನ ಪತ್ರಿಕೆಯಲ್ಲಿದೆಯಲ್ಲಾ, ಏನದು ಸತ್ಯ?
      ಖಾಕಿ ಬಣ್ಣ ಅಥವಾ ಕಾರ್ಮಿಕರ ಯೂನಿಫಾರ್ಮ್ ನಿಜವಾದ ಸತ್ಯ. ನಾನು ಒಂದು ಸಂಸ್ಥೆಯಿಂದ ಸಂಬಳ ತಗೋತೀನಿ ಅಂದರೆ ನಾನು ಸರಿಯಾಗಿ ಕೆಲಸ ಮಾಡಬೇಕು. ಕೆಲಸ ಮಾಡುವಾಗ ಬೇರೆ ನಿರೀಕ್ಷೆಗಳು ಇರಬಾರದು. ಅದೇ ರೀತಿ ಅದೂ ಒಂದು ಕೆಲಸ. ಅದ್ಯಾಕೆ ರಾಜಕಾರಣ ಮಾಡುತ್ತಿದ್ದೀವಿ ಅಂತ ಹೇಳಬೇಕೋ ನನಗೆ ಗೊತ್ತಿಲ್ಲ. ಆ ಕೆಲಸವೇ ನಿಜವಾದ ಸತ್ಯ.

ಎಲ್ಲಾ ಬಿಟ್ಟು ಇದೇ  ಸಮಯದಲ್ಲಾಕೆ ರಾಜಕೀಯ ಪ್ರವೇಶ?
      ಗೊತ್ತಿಲ್ಲ. ಇನ್ನಷ್ಟು ತಯಾರಿ ಮಾಡಿಕೊಂಡು ಬರೋಣ ಅಂತ ಮನಸ್ಸಿನಲ್ಲಿತ್ತು. ಆದರೆ, ಅಷ್ಟರಲ್ಲಿ ಸುದ್ದಿಯಾಗಿತ್ತು. ಇನ್ನು ನಮ್ಮ ಕೈಯಲ್ಲಿ ಇಲ್ಲ ಅಂತ ಅರ್ಥವಾಯ್ತು. ಹಾಗಾಗಿ ಘೋಷಿಸಬೇಕಾಯ್ತು.

ಈ ಹೊಸ ವ್ಯವಸ್ಥೆ ಗೆಲ್ಲುತ್ತೆ ಅನ್ನೋ ನಂಬಿಕೆ ಇದೆಯಾ?
      ಇದು ಹೊಸ ಸಿಸ್ಟಂ ಅಲ್ಲ. ಹಳೆಯದ್ದೇ, ಆದರೆ ಬದಲಾಗಿದೆ ಅಷ್ಟೇ. ದುಡ್ಡು ಹಾಕಿದರೆ ಗೆಲ್ಲೋಕೆ ಸಾಧ್ಯ ಅಂತ ನಮ್ಮ ಜನರ ಮನಸ್ಸಿನಲ್ಲಿ ಬೇರೂರಿ ಬಿಟ್ಟಿದೆ. ಅದು ತಪ್ಪು ಅಂತ ತೋರಿಸುವ ಪ್ರಯತ್ನ ಇದು. ಇಲ್ಲಿ ಯಾರ ಹತ್ತಿರ ಒಳ್ಳೆಯ ಐಡಿಯಾಗಳಿರುತ್ತವೋ, ಅವರೇ ಅಭ್ಯರ್ಥಿಗಳು. ಪ್ರಮುಖವಾಗಿ ಐಡಿಯಾಗಳು ಜನರನ್ನು ಆಕರ್ಷಿಸಬೇಕು. ನಮ್ಮದೇ ಒಂದು ತಂಡ ಇದೆ. ನಾವು ಸಹ ಅದನ್ನು ಸ್ಟಡಿ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಸ್ವಲ್ಪ ಕಷ್ಟವಾಗಬಹುದು. ಕಷ್ಟಪಡಲೇಬೇಕು. ಕಾರ್ಪೊರೇಟ್‌ ಕಂಪನಿ ತರಹ ಮಾಡಬೇಕು ಎಂಬುದು ನಮ್ಮ ಐಡಿಯಾ. ಗೆದ್ದರೆ ಅವರಿಗೆ ಸಂಬಳ ಕೊಡುತ್ತೀವಿ. ಆ ಸಂಬಳಕ್ಕಾಗಿ ಅವರು ಕೆಲಸ ಮಾಡಬೇಕು. ಪ್ರಚಾರದ ಖರ್ಚು ಸಹ ಮಾಡಲ್ಲ. ಮೀಡಿಯಾ ಇದೆ. ಅದನ್ನು ಬಳಸಿಕೊಂಡು ಏನಾದರೂ ಮಾಡಬೇಕು.

ದುಡ್ಡಿಲ್ಲದೆ ರಾಜಕೀಯ ಮಾಡೋಕೆ ಸಾಧ್ಯವಾ?
       ಯಾಕೆ ಸಾಧ್ಯ ಇಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ಗಾಂಧಿ ಯಾವ ದುಡ್ಡು ಇಟ್ಕೊಂಡು ಹೋರಾಟ ಮಾಡಿದ್ದರು. ದುಡ್ಡಿಲ್ಲದೆ ಏನಾದರೂ ಮಾಡಬಹುದು ಎಂಬ ನಂಬಿಕೆ ಆಗಿತ್ತು, ಈಗಿಲ್ಲ. ದುಡ್ಡು ಬಳಸದೆ ಯಾಕೆ ಮಾಡಬಾರದು ಎಂಬುದು ನನ್ನ ಪ್ರಯತ್ನ.

ನಿಜಕ್ಕೂ ಇವೆಲ್ಲಾ ಸಾಧ್ಯ ಆಗುತ್ತದೆ ಅಂತ ನಂಬಿಕೆ ಇದೆಯಾ?
       ಯಾರನ್ನೂ ನಂಬಿಸೋದು ಕಷ್ಟ. ಅವರಿಗೇ ನಂಬಿಕೆ ಬರಬೇಕು. ಇದು ಆಗತ್ತೋ, ಇಲ್ವೋ ಅಂತ ಯೋಚಿಸುತ್ತಾ ಕೂತರೆ, ಕೆಲಸ ಮುಂದುವರೆಯುವುದಿಲ್ಲ. ಈ ವಿಷಯದ ಬಗ್ಗೆ ನಾನು ಯೋಚನೆ ಮಾಡಿರಲ್ವಾ? ಖಂಡಿತಾ ಮಾಡಿರಿ¤àನಿ. ನಿಜ ಹೇಳಬೇಕೆಂದ್ರೆ, ಈ ಬಗ್ಗೆ ತುಂಬಾ ಯೋಚನೆ ಮಾಡಿಯೇ ಹೆಜ್ಜೆ ಇಟ್ಟಿದ್ದೀನಿ. ಎಷ್ಟೋ ಜನ, “ನಿಮಗೆ ಬುದ್ಧಿಗಿದ್ಧಿ ಇದೆಯೇನ್ರೀ? ಸುಮ್ಮನೆ ಎಂಜಾಯ್‌ ಮಾಡಿಕೊಂಡು ಇರೋದು ಬಿಟ್ಟು ಇವೆಲ್ಲಾ ಬೇಕಾ?’ ಅಂತಾರೆ. ಆದರೆ, ನನ್ನೊಳಗೂ ಒಂದು ಕೂಗು ಇರುತ್ತಲ್ಲಾ, ಏನೋ ಮಾಡಬೇಕು ಅಂತ. ಆ ಕೂಗಿಗೆ ಬೆಲೆ ಕೊಟ್ಟು ಮಾಡುತ್ತಿದ್ದೀನಿ.

ಬೇರೆ ಪಕ್ಷಕ್ಕೆ ಸೇರಿ¤àರಾ ಅನ್ನೋ ಸುದ್ದಿ ಇತ್ತು. ನೀವು ನೋಡಿದರೆ, ಸ್ವಂತ ಪಾರ್ಟಿ ಶುರು ಮಾಡ್ತಿದ್ದೀರಲ್ಲಾ?
        ಬಹಳಷ್ಟು ಜನ ಕರೆದರು. ಆದರೆ, ನಾನು ಹೋಗಲಿಲ್ಲ. ನಿಜ ಹೇಳಬೇಕೆಂದ್ರೆ, ಒಂದು ದೊಡ್ಡ ಪಕ್ಷ ಈ ತರಹದ ಕಾರ್ಯಕ್ರಮ ಮಾಡಿದರೆ, ನಿಜಕ್ಕೂ ಜನರಿಂದ ದೊಡ್ಡ ಬೆಂಬಲ ಸಿಗುತ್ತೆ. ಏಕೆಂದರೆ, ಅವರಿಗೆ ಆಗಲೇ ಒಂದು ಹೆಸರಿದೆ. ಅವರು ಮಾಡಿದರೆ ಇನ್ನೂ ಚೆನ್ನಾಗಿರುತ್ತೆ. ಹಾಗಾಗಿ ಅವರು ಮಾಡಲಿ ಅಂತ ನನ್ನಾಸೆ. ಆದರೆ, ಯಾರೂ ಮಾಡಲಿಲ್ಲ. ಈಗಲೂ ಯಾರಾದರೂ ಮಾಡಲಿ, ಪಕ್ಕದಲ್ಲಿ ನಾನು ಇರಿ¤àನಿ. ನನಗೆ ಹೆಸರೂ ಬೇಡ, ಏನೂ ಬೇಡ. ಒಟ್ಟಿನಲ್ಲಿ ಒಂದು ವ್ಯವಸ್ಥೆ ಮುಂಚೆ ಏನಿತ್ತೋ, ಹಾಗಾಗಲಿ ಅನ್ನೋದಷ್ಟೇ ನನ್ನ ಉದ್ದೇಶ.

ಸಿನಿಮಾ ನಟರು ರಾಜಕೀಯದಲ್ಲಿ ಗೆದ್ದಿದ್ದು ಕಡಿಮೆಯೇ. ಅದು ನಿಮಗೆ ಗೊತ್ತಿದೇ ತಾನೇ?
        ನನ್ನ ಹೆಸರು ಸ್ಟೇಕ್‌ನಲ್ಲಿದೆ, ಸೋತರೆ ಹೆಸರು ಹಾಳಾಗಿ ಹೋಗುತ್ತೆ ಅಂದರೆ ಭಯ ಬರುತ್ತೆ. ಆದರೆ, ನಾನು ಹಾಗೆ ಅಂದುಕೊಂಡಿಲ್ಲ. ನಾನು ಸಹ ಒಬ್ಬ ಕಾಮನ್‌ ಮ್ಯಾನ್‌ ಆಗಿ ಇಂತಹ ಪ್ರಯತ್ನ ಮಾಡುತ್ತಿದ್ದೀನಿ. ನಾನು ಸಿನಿಮಾದಲ್ಲಿ ಹೀರೋ ಇರಬಹುದು. ಇಲ್ಲಿ ನಥಿಂಗ್‌. ಹಾಗಾಗಿ ನನಗೆ ಯಾವ ರಿಸ್ಕೂ ಇಲ್ಲ.

ಆದರೂ ಇದೊಂಥರಾ ರಿಸ್ಕಿ ಕೆಲಸ ಅಂತ ಅನಿಸುತ್ತಿಲ್ಲವಾ?
       ಇದರಲ್ಲಿ ರಿಸ್ಕ್ ಏನಿದೆ? ಅಬ್ಬಬ್ಟಾ ಅಂದರೆ ಸೋಲಬಹುದು. ಸತ್ಯ ಇಟ್ಕೊಂಡು ಸೋತರೂ, ಅದರಲ್ಲೊಂದು ಹೆಮ್ಮೆ ಇರುತ್ತದೆ. ಸತ್ಯದಲ್ಲಿ ಸೋತರೂ ತಲೆ ಎತ್ತಿಕೊಂಡೇ ಓಡಾಡುತ್ತೀನಿ. ಏಕೆಂದರೆ, ಅನಿಸಿದ್ದನ್ನು ಮಾಡಿದ್ದೀನಿ ಎಂಬ ಖುಷಿಯಾದರೂ ಇರುತ್ತೆ.

ಈ ಪ್ರಯತ್ನ ಬರೀ ಮುಂಬರುವ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿರುತ್ತದಾ?
       ಖಂಡಿತಾ ಇದು ಮುಂದುವರಿಯುತ್ತದೆ. ಸೋತರೂ ಮುಂದುವರಿಯುತ್ತೀನಿ. ನಾನು ಮಾಡದಿದ್ದರೂ ಜನ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ನನಗೆ ಇದೆ.

ನಿಮ್ಮ ಈ ಹೆಜ್ಜೆಗೆ, ಮನೆಯವರು ಏನಂತಿದ್ದಾರೆ?
       ಮನೇಲಿ ಒದ್ದಾಟ ನೋಡಿ, “ಮನಸ್ಸು ಏನು ಹೇಳುತ್ತೋ ಅದು ಮಾಡು’ ಅಂತ ಹೇಳಿದ್ದಾರೆ.
 
ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸಿಗುತ್ತಾರೆ ಎನ್ನುವ ನಂಬಿಕೆ ಇದೆಯಾ?
       100 ಇದ್ದರೆ ನೂರು, 10 ಇದ್ದರೆ 10. ಎಷ್ಟು ಅಭ್ಯರ್ಥಿಗಳು ಸಿಕ್ಕರೂ ಫೀಲ್ಡ್‌ ಮಾಡ್ತೀನಿ. ಒಟ್ಟಿನಲ್ಲಿ ಒಂದು ಸಂದೇಶ ರವಾನಿಸೋ ಆಸೆಯಂತೂ ಇದೆ. ಅದೇನೆಂದರೆ, ದುಡ್ಡಿಲ್ಲದೆ ಚುನಾವಣೆಗಳನ್ನು ಎದುರಿಸಬಹುದು ಅಂತ. ಇದನ್ನ ನೋಡಿ ನಾಳೆ ಬೇರೆ ಜನ ಸಹ ಬರಬಹುದು. ಅವರು ಸಹ ಸ್ಪರ್ಧೆ ಮಾಡಬಹುದು. ದುಡ್ಡು ಖರ್ಚು ಮಾಡದೆಯೇ, ಐಡಿಯಾ ಖರ್ಚು ಮಾಡಿ ಗೆಲ್ಲಬಹುದು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಟಾರ್ಗೆಟ್‌ ಇದೆಯಾ?
       ನನಗೆ ಟಾರ್ಗೆಟ್‌ ಅಂತೇನಿಲ್ಲ. ಬರೀ ಸತ್ಯ ಅಷ್ಟೇ.

ಅಲ್ಲ, ಚುನಾವಣೆಗಳಲ್ಲಿ ನಿಮ್ಮ ಪಕ್ಷ ಎಷ್ಟು ಸೀಟ್‌ ಪಡೆಯಬಹುದು?
      100 ಪರ್ಸೆಂಟ್‌ ನಂಬಿಕೆ ಇದೆ.

ಹಾಗಾದರೆ ಸಿನಿಮಾ?
      ಯಾವ ಸಿನಿಮಾನೂ ಒಪ್ಪಲ್ಲ. ಈಗ “ಹೋಂ ಮಿನಿಸ್ಟರ್‌’ ಅಂತ ಸಿನಿಮಾ ಮಾಡ್ತಿದ್ದೀನಿ. ಅದರ ಜೊತೆಜೊತೆಗೆ ಈಗ್ಲಿಂದಲೇ ಕೆಲಸ ಶುರು ಮಾಡಿದ್ದೀನಿ. ಸದ್ಯಕ್ಕೆ ಯಾವುದೇ ಸಿನಿಮಾನೂ ಒಪ್ಪಿಲ್ಲ. ಎಲೆಕ್ಷನ್‌ ಒಳಗಂತೂ ಯಾವ ಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲ. ಆ ನಂತರ ಗೊತ್ತಿಲ್ಲ.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

Will Rohit retire after the Sydney Test?

Rohit Sharma; ಸಿಡ್ನಿ ಟೆಸ್ಟ್‌  ಬಳಿಕ ರೋಹಿತ್‌ ವಿದಾಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

vidhana-Soudha

Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ

Nikhil-JDS

New Office Bearers: ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷ ಜತೆಗೆ ಮೂರು ಕಾರ್ಯಾಧ್ಯಕ್ಷ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.