ಗೆಲುವಿನ ಮೂಲಕ ವಿರೋಧಿಗಳಿಗೆ ಉತ್ತರಿಸುವೆ

Team Udayavani, Nov 24, 2019, 3:06 AM IST

geluvina

ಯಶವಂತಪುರ: ವೃಥಾ ಆರೋಪ ಮಾಡುವ ರಾಜಕೀಯ ವಿರೋಧಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ತಾವರೆಕೆರೆ ಹೋಬಳಿ ಮಾರೇನಹಳ್ಳಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚೋಳನಾಯಕನಹಳ್ಳಿ ಹಾಗೂ ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕನಾಗಿ ಮತದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಒಂದೇ ಕಾರಣಕ್ಕಾಗಿ ರಾಜೀನಾಮೆ ನೀಡಿದೆ. ಇದರಿಂದ ಕ್ಷೇತ್ರದ ಜನತೆಗೆ ಅನ್ಯಾಯವಾಗುವುದಿಲ್ಲ. ಬದಲಿಗೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.

“ಬಿಡಿಎ ಸದಸ್ಯನಾಗಿ 200 ಕೋಟಿ ರೂ. ಅನುದಾನ ತಂದಿದ್ದೆ. ಆದರೆ, ಅಧ್ಯಕ್ಷನಾಗಿ ನಯಾ ಪೈಸೆ ತರಲಾಗಲಿಲ್ಲ. ಜತೆಗೆ ಕೆಂಪೆಗೌಡ ಬಡಾವಣೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಟ್ಟ ರೈತರಿಗೆ ನಿವೇಶನ ಹಾಗೂ ಪರಿಹಾರದ ಹಣ ಕೊಡಿಸಲಾಗಲಿಲ್ಲ. ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರೂ ನ್ಯಾಯ ಒದಗಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಚನಬೆಲೆ ಜಲಾಶಯದಿಂದ 32 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಜಮೀನು ಮಂಜೂರು ಮಾಡಿಸಿದರೂ ಕಾಮಗಾರಿ ಶುರುವಾಗಲಿಲ್ಲ. ಈ ರೀತಿಯ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಹಕಾರ ಸಿಗದ ಕಾರಣ, ಸಮ್ಮಿಶ್ರ ಸರ್ಕಾರದಿಂದ ಹೊರ ಬರಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಎಸ್‌.ಟಿ.ಸೋಮಶೇಖರ್‌ ಸಚಿವರಾಗುವುದರಿಂದ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮತ್ತೆ ಚಾಲನೆ ದೊರೆಯಲಿದೆ. ಕ್ಷೇತ್ರದ ಅಭಿವೃದ್ಧಿಗೆ ಸಿಕ್ಕಿರುವ ಈ ಸದವಕಾಶವನ್ನು ಮತದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಿ.ಎಂ.ಮಾರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಹನುಮಂತಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.