ಶೀಘ್ರ ಬರಲಿದೆ ಸಂಚಾರಿ ಐಸಿಯು ಬಸ್‌!


Team Udayavani, May 18, 2021, 10:02 AM IST

ಶೀಘ್ರ ಬರಲಿದೆ ಸಂಚಾರಿ ಐಸಿಯು ಬಸ್‌!

ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ “ಆಕ್ಸಿ ಬಸ್‌’ ಪರಿಚಯಿಸುವ ಮೂಲಕ ಗಮನಸೆಳೆಯಿತು. ಈಗ ಕೆಎಸ್‌ಆರ್‌ಟಿಸಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಸೋಂಕಿತರಿಗಾಗಿ “ಸಂಚಾರಿ ಐಸಿಯು’ ಅಭಿವೃದ್ಧಿಪಡಿಸಿದೆ.

ಈ ವಿಶಿಷ್ಟ ಐಸಿಯು ಬಸ್‌ ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ, ವೆಂಟಿಲೇಟರ್‌ ಸೇರಿದಂತೆ ಸೋಂಕಿತರಿಗೆ ತುರ್ತು ಸೇವೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಗಳು ಇರಲಿದ್ದು, ನಿಗಮದಲ್ಲೇ  ಆಂತರಿಕವಾಗಿ ಈ ವಿನೂತನ ವ್ಯವಸ್ಥೆ ರೂಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಇದು ಸಿದ್ಧಗೊಳ್ಳಲಿದೆ. ಆಕ್ಸಿ ಬಸ್‌ನ ಮುಂದುವರಿದ ಭಾಗ ಇದಾಗಿದ್ದು, ಈ ರೀತಿಯ ಪ್ರಯತ್ನ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.

ಸುಮಾರು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಏಕಕಾಲದಲ್ಲಿಐದು ಜನ ರೋಗಿಗಳಿಗೆ ಇದರಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಸದ್ಯ ಬೆಂಗಳೂರಿನಲ್ಲಿ ವೆಂಟಿಲೇಟರ್‌ ಮತ್ತು ಆಮ್ಲಜನಕ ಕೊರತೆ ಹೆಚ್ಚು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿಇದು ಕಾರ್ಯಾಚರಣೆ ನಡೆಸಲಿದೆ. ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಮುಂದೆ ಇದನ್ನು ನಿಲುಗಡೆ ಮಾಡಲಾಗುತ್ತದೆ. ಒಂದು ವೇಳೆ ತಕ್ಷಣಕ್ಕೆ ಆಸ್ಪತ್ರೆಯಲ್ಲಿ ಪ್ರವೇಶ ಲಭ್ಯವಾಗದವರು, ಈ ಬಸ್‌ ಆ್ಯಂಬುಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ವಿಶೇಷವೆಂದರೆ ಇದು ಸಂಚಾರಿ ಐಸಿಯು ಆಗಿರುವುದರಿಂದ ಬೇಡಿಕೆ ಇರುವ ಕಡೆಗೆ ಬಸ್‌ ಅನ್ನು ತೆಗೆದುಕೊಂಡು ಹೋಗಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ : ಭಾರತ: ಕಳೆದ 24ಗಂಟೆಗಳಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಇಳಿಕೆ, ಸಾವಿನ ಪ್ರಮಾಣ ಹೆಚ್ಚಳ

ಸಂಚಾರಿ ಆಮ್ಲಜನಕ ಬಸ್‌ಗೆ ಚಾಲನೆ :

ಕೆಎಸ್‌ಆರ್‌ಟಿಸಿಯು ಫೌಂಡೇಶನ್‌ ಇಂಡಿಯಾ ಸಹಯೋಗದಲ್ಲಿ ಸಂಚಾರಿ ಆಮ್ಲಜನಕ ಬಸ್‌ (Oxygen on Wheels) ಮತ್ತು ಆ್ಯಂಬುಲೆನ್ಸ್‌ ಅನ್ನು ಆನೇಕಲ್‌ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀಡಲಾಯಿತು. ಬಸ್‌ ಆ್ಯಂಬುಲೆನ್ಸ್‌ನಲ್ಲಿ ಆರುಆಸನಗಳು ಹಾಗೂ ಎರಡು ಬೆಡ್‌ಗಳ ವ್ಯವಸ್ಥೆ ಇದ್ದು, 4ಆಕ್ಸಿಜನ್‌ ಸಿಲಿಂಡರ್‌ಮತ್ತು2ಆಕ್ಸಿಜನ್‌ಕಾನ್ಸಂಟ್ರೇಟರ್‌ ಗಳನ್ನು ಅಳವಡಿಸಲಾಗಿದೆ. ಸುಮಾರು 7ರಿಂದ 8 ರೋಗಿಗಳು ಒಂದು ಬಾರಿಗೆ ಎರಡರಿಂದ ನಾಲ್ಕು ಗಂಟೆವರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಆರೋಗ್ಯ ಸಿಬ್ಬಂದಿ ವ್ಯವಸ್ಥೆ ಮೇಲ್ವಿಚಾರಣೆಯನ್ನು ಫೌಂಡೇಶನ್‌ ಇಂಡಿಯಾ ನಿರ್ವಹಿಸಲಿದೆ. ಕೆಎಸ್‌ಆರ್‌ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಈ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಫೌಂಡೇಶನ್‌ ಇಂಡಿಯಾ ಗೌರವ ಕಾರ್ಯದರ್ಶಿ ಸಂಜಯ್‌ ಗುಪ್ತ ಇತರರು ಇದ್ದರು.

 ಸಂಚಾರಿಐಸಿಯುನಲ್ಲಿ ಏನು ಇರಲಿದೆ? :

„ ಐದು ಹಾಸಿಗೆಗಳುಳ್ಳ ಆ್ಯಂಬುಲೆನ್ಸ್‌ ಇದಾಗಿದೆ

„ ಪ್ರತಿ ಬೆಡ್‌ಗೆ ಆಮ್ಲಜನಕ ವ್ಯವಸ್ಥೆ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡಲು ಹೃದಯದೊತ್ತಡ, ರಕ್ತದಲ್ಲಿ ಆಮ್ಲಜನಕ ಪ್ರಮಾಣ, ಇಸಿಜಿ, ದೇಹದ ಉಷ್ಣಾಂಶ ಅಳೆಯುವ ಮಾಪನ, ಐವಿ, ವೆಂಟಿಲೇಟರ್‌ ಅಳವಡಿಸುವ ಸೌಲಭ್ಯ.

„ ತುರ್ತು ಔಷಧ, ಜನರೇಟರ್‌ ವ್ಯವಸ್ಥೆ ಲಭ್ಯ

ಟಾಪ್ ನ್ಯೂಸ್

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kidnap Case: ವ್ಯಕ್ತಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ

Kidnap Case: ವ್ಯಕ್ತಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ

6

CCB: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಗೆ 7 ತಾಸು ಸಿಸಿಬಿ ಗ್ರಿಲ್‌

Suspension: ಯುವತಿಗೆ ಕಿರುಕುಳ; ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಮಾನತು

Suspension: ಯುವತಿಗೆ ಕಿರುಕುಳ; ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಮಾನತು

Head Constable: ಅಪಘಾತದಲಿ ಗಾಯಗೊಂಡಿದ್ಲ ಪೊಲೀಸ್‌ ಸಾವು

Head Constable: ಅಪಘಾತದಲಿ ಗಾಯಗೊಂಡಿದ್ಲ ಪೊಲೀಸ್‌ ಸಾವು

Bengaluru: ಬೆಕ್ಕಿನ ಮೇಲೆ ಹಲ್ಲೆ: ರೂಮ್‌ಮೇಟ್‌ ವಿರುದ್ದ ಕೇಸ್‌

Bengaluru: ಬೆಕ್ಕಿನ ಮೇಲೆ ಹಲ್ಲೆ: ರೂಮ್‌ಮೇಟ್‌ ವಿರುದ್ದ ಕೇಸ್‌

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

de

Karkala: ಕೌಟುಂಬಿಕ ಹಿಂಸೆ ಆರೋಪ; ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು

5

Karkala: ಅಪರಿಚಿತ ಬೈಕ್‌ ಸವಾರನಿಂದ ಚಿನ್ನದ ಸರ ಸುಲಿಗೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.