ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಗುರುತಿಸಿ
Team Udayavani, Dec 15, 2018, 12:30 PM IST
ಬೆಂಗಳೂರು: “ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಗುರುತಿಸಿ ಅವರ ನೈಜ ಪ್ರತಿಭೆಯ ಅನಾವರಣಕ್ಕೆ ನಾವು ಗಮನಹರಿಸಬೇಕು. ಇದಕ್ಕಾಗಿ ನಮ್ಮ ಪಠ್ಯಕ್ರಮದಲ್ಲಿ ಕೇವಲ ಬೋಧನೆಗೆ ಒತ್ತು ಕೊಡದೆ ಪ್ರಾತ್ಯಕ್ಷಿಕೆಗಳ ಮೂಲಕ ಶಿಕ್ಷಣ ನೀಡಲು ಆದ್ಯತೆ ಕೊಡಬೇಕು,’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್.ಶೆಟ್ಟಿ ಹೇಳಿದರು.
ಯಲಹಂಕದ ನಿಟ್ಟೆ ಸ್ಕೂಲ್ ಆಫ್ ಫ್ಯಾಶನ್ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್ ಹಮ್ಮಿಕೊಂಡಿದ್ದ ಬೃಹತ್ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ತಾವು ಕಲಿತದ್ದನ್ನು ಕೃತಿ ರೂಪದಲ್ಲಿ ಅನಾವರಣ ಮಾಡುವ ಅಭಿಲಾಷೆ ವಿದ್ಯಾರ್ಥಿಗಳಿಗೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಮಾದರಿಗಳನ್ನು ಪ್ರದರ್ಶಿಸಲು ಇಂತಹ ವಸ್ತು ಪ್ರದರ್ಶನಗಳು ಸುಕ್ರ ವೇದಿಕೆ ಒದಗಿಸುತ್ತವೆ ಎಂದರು.
ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಫ್ಯಾಶನ್ ತಂತ್ರಜ್ಞಾನ ಹಾಗೂ ಒಳಾಂಗಣ ವಿನ್ಯಾಸ ಕುರಿತಂತೆ ನೂರಾರು ಮಾದರಿಗಳನ್ನು ಪ್ರದರ್ಶಿಸಿದರು. ಫ್ಯಾಶನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳೇ ಆಯೋಜಿಸಿದ್ದ ಫ್ಯಾಷನ್ ಶೋ ಗಮನಸೆಳೆಯಿತು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾದ್ಯಾಲಯದ ಪ್ರಿನ್ಸಿಪಾಲ್ ಡಾ.ಎಚ್.ಸಿ.ನಾಗರಾಜ್, ಸಂಸ್ಥೆ ಆಡಳಿತಾಧಿಕಾರಿ ರೋತ್ ಪೂಂಜ ಹಾಗೂ ಫ್ಯಾಶನ್ ತಂತ್ರಜ್ಞಾನ ಸಂಸ್ಥೆಯ ಪ್ರಿನ್ಸಿಪಾಲ್ ಡಾ.ಸಂಧ್ಯಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.