ಕಾವೇರಿ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯ

Team Udayavani, Mar 13, 2018, 12:00 PM IST

kaveri-mandali.jpg

ಕೆಂಗೇರಿ: “ಯಾವುದೆ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬಾರದು. ಒಂದು ವೇಳೆ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯವಾಗಲಿದೆ,’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು.

ಮಾಗಡಿ ಮುಖ್ಯ ರಸ್ತೆಯ ಸೀಗೇಹಳ್ಳಿಯಲ್ಲಿ ಆಯೋಜಿಸಿದ್ದ ಮಾಗಡಿ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು, “ರಾಷ್ಟ್ರೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವೆಸಗುತ್ತಾ ಬಂದಿವೆ. ಈ ಬಾರಿ ಜೆಡಿಎಸ್‌ ಪಕ್ಷವನ್ನು ಬಹುಮತದ ಮೂಲಕ ಬೆಂಬಲಿಸಿದರೆ ಕಾವೇರಿ ನದಿ ನೀರು ಹಂಚಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. 

ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್‌ ಅಪಾರ ಕೊಡುಗೆ ನೀಡಿದ ಪರಿಣಾಮ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಪಕ್ಷಕ್ಕೆ ದ್ರೋಹವೆಸಗಿ ಅನ್ಯ ಪಕ್ಷದತ್ತ ಮುಖ ಮಾಡಿರುವ ಶಾಸಕ ಎಚ್‌.ಸಿ.ಬಾಲಕೃಷ್ಣರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಗೆ ತಕ್ಕ ಉತ್ತರ ನೀಡಿ. ಜತೆಗೆ ಮಾಗಡಿ ಜನತೆಯ ಬೆಂಬಲ ಎಂದೆಂದಿಗೂ ಜೆಡಿಎಸ್‌ಗೆ ಎಂಬುದನ್ನು ಮತ್ತೂಮ್ಮೆ ಖಾತ್ರಿಪಡಿಸಿ ಎಂದು ಕರೆ ನೀಡಿದರು. 

ಒಂದೆಡೆ ಪ್ರಧಾನಿ ಮೋದಿ, ಅಮಿತ್‌ ಶಾ ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ “ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಸಿಎಂ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕಕ್ಕೆ ನೀಡಿರುವ ಕೊಡುಗೆಯೇನು ಎಂಬುದು ಜನರಿಗೆ ಗೊತ್ತು ಎಂದರು. 

ಪುತ್ರ ವ್ಯಾಮೋಹವಿಲ್ಲ: “ನನ್ನ ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಪುತ್ರ ವ್ಯಾಮೋಹ ನನಗಿಲ್ಲ. ಜನರ ಸೇವೆಗಾಗಿಯೇ ನಾವು ನಮ್ಮ ಇಡೀ ಜೀವನವನ್ನು ಮೀಸಲಿಟ್ಟಿದ್ದೇವೆ. ಅದೇ ರೀತಿ ಜನಹಿತಕ್ಕಾಗಿ, ಅಭಿವೃದ್ಧಿಯ ಚಿಂತನೆಗಾಗಿ, ಬಡವರ ಅಭ್ಯುದಯಕ್ಕಾಗಿ ಎಚ್‌.ಡಿ.ಕುಮಾರ ಸ್ವಾಮಿ ಅಧಿಕಾರಕ್ಕೆ ಬರಬೇಕೆಂಬ ಹಂಬಲ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಾವು ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಬಾರಿ ರಾಜ್ಯದ ಮತದಾರರು ಜೆಡಿಎಸ್‌ಗೆ ಅವಕಾಶ ನೀಡಲಿದ್ದಾರೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಗಡಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ಮಾತನಾಡಿದರು. ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ, ಬೆಂಗಳೂರು ನಗರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಪ್ರಕಾಶ್‌, ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಡಿ.ನಾಗರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಜಿ.ಪಂ ಸದಸ್ಯೆ ಚಂದ್ರಮ್ಮ ನಂಜಯ್ಯ, ಪುರಸಭಾ ಸದಸ್ಯರಾದ ಬಿ.ರಮೇಶ್‌ಕುಮಾರ್‌, ದೇವರಾಜ್‌ ಭಾಗವಹಿಸಿದ್ದರು.

ಟಾಪ್ ನ್ಯೂಸ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

012

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!

4

Crime: ಹೆಂಡತಿಯನ್ನು ಮಾಂಸ ಕತ್ತರಿಸುವ  ಮಚ್ಚಿನಿಂದ ಕೊಂದ ಕೋಳಿ ವ್ಯಾಪಾರಿ

Bengaluru: ತಂದೆ ಬೈದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ತಂದೆ ಬೈದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

ಮುನಿರತ್ನ ವಿರುದ್ಧ ವೋಟರ್‌ ಐಡಿ ಪ್ರಕರಣ: ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ದೂರು

ಮುನಿರತ್ನ ವಿರುದ್ಧ ವೋಟರ್‌ ಐಡಿ ಪ್ರಕರಣ: ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ದೂರು

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.