6 ತಿಂಗಳಲ್ಲಿ ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ಬೃಹತ್ ಸಮಾವೇಶ: ಜಯಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಮೀಸಲಾತಿ ವಿಚಾರ
Team Udayavani, Mar 17, 2021, 12:33 PM IST
ಬೆಂಗಳೂರು: ಕೂಡಲ ಸಂಗಮದಿಂದ ಸಂಕ್ರಾಂತಿ ದಿನ ಆರಂಭಿಸಿ 39 ದಿನಗಳ ಹೋರಾಟ ಯಶಸ್ವಿಯಾಗಿ ತಲುಪಿದೆ. ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಆರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಸದನದಲ್ಲಿ ಸರ್ಕಾರ, ನಮ್ಮ ಸಮುದಾಯದ ಪರವಾಗಿ ಮಾತು ಕೊಟ್ಟಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಪೀಠದ ಸ್ವಾಮೀಜಿ, ಸಿಎಂ ನಮ್ಮ ವಾಸ ಸ್ಥಳಕ್ಕೆ ಬಂದು ಭರವಸೆ ನೀಡುವುದಾಗಿ ಹೇಳಿದ್ದರು. ನಾವು ವಿಧಾನಸಭೆಯಲ್ಲಿಯೇ ಮಾತು ಕೊಡಬೇಕು ಎಂದು ಹೇಳಿದ್ದೆವು. ಅದರಂತೆ ಸರ್ಕಾರ ಆರು ತಿಂಗಳು ಭರವಸೆ ನೀಡಿದೆ. ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೂ ರಾಜ್ಯ ಪ್ರವಾಸ ಕೈಗೊಂಡು ಜನಜಾಗೃತಿ ಮೂಡಿಸುತ್ತೇವೆ.
ಇದನ್ನೂ ಓದಿ: ಪ್ಲ್ಯಾಸ್ಟಿಕ್ ನೀತಿ ಬೆಂಬಲಿಸಿ : ಹ್ಯಾರಿಸ್ ಗೆ ಭಾರತಿಯ ಅಮೇರಿಕನ್ ಮಹಿಳಾ ಉದ್ಯಮಿಗಳ ಮನವಿ
ಸೆಪ್ಟೆಂಬರ್ 15ಕ್ಕೆ ಸರ್ಕಾರ ಆದೇಶ ನೀಡದಿದ್ದರೆ, ಅಕ್ಟೋಬರ್ 15 ರಿಂದ ಮತ್ತೆ ವಿಶ್ಬ ಪಂಚಮಸಾಲಿ ಸಮುದಾಯದ ಹೋರಾಟವನ್ನು 20 ಲಕ್ಷ ಜನ ಸೇರಿ ಬೃಹತ್ ಸಮಾವೇಶ ನಡೆಸಲಾಗುವುದು. ಮಾರ್ಚ್ 23 ರಿಂದ ಬೆಂಗಳೂರಿನಿಂದ ಕೂಡಲಸಂಗಮಕ್ಕೆ ಶರಣು ಶರಣಾರ್ಥಿ ಯಾತ್ರೆ ಕೈಗೊಳ್ಳಲಾಗುವುದು.
ರಾವ್ ಬಹದ್ದೂರು ಅರಟಾಳ್ ರುದ್ರಗೌಡ ಅವರ ಜಯಂತಿ ಮಾರ್ಚ್ 23 ರಂದು ಇದೆ. ಅವರು ಉತ್ತರ ಕರ್ನಾಟಕದ ಅಕ್ಷರ ಗೌಡ ಎಂದೇ ಪ್ರಸಿದ್ಧರಾಗಿದ್ದಾರೆ. ಅವರ ಜಯಂತಿಯನ್ನು ಬೆಂಗಳೂರಿನಲ್ಲಿ ಆವರಿಸುವ ಮೂಲಕ ಶರಣು ಶರಣಾರ್ಥಿ ಯಾತ್ರೆ ಆರಂಭಿಸುತ್ತೇವೆ. ನಮ್ಮ ಪಾದಯಾತ್ರೆಗೆ ಬೆಂಬಲ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಶರಣು ಶರಣಾರ್ಥಿ ಹೇಳಿ ಹೇಳುತ್ತೇವೆ. ಏಪ್ರಿಲ್ 11 ರಂದು ಕೂಡಲ ಸಂಗಮದಲ್ಲಿ ಯಾತ್ರೆ ಅಂತ್ಯಗೊಳಿಸಲಾಗುವುದು.
ಮೀಸಲಾತಿ ಆದೇಶ ಬರುವವರೆಗೂ ಪೀಠಕ್ಕೆ ಮರಳಬಾರದು ಎಂದು ತೀರ್ಮಾನಿಸಿದ್ದೆ, ಆದರೆ, ಆರು ತಿಂಗಳು ಹೊರಗೆ ಇರುವ ಬದಲು ಸಮಾಜದಲ್ಲಿ. ಜಾಗೃತಿ ಮೂಡಿಸಲು ಪೀಠಕ್ಕೆ ತೆರಳಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಪೀಠಕ್ಕೆ ತೆರಳಿ ಸಮುದಾಯದ.ಜನರಿಗೆ ಜಾಗೃತಿ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯಗಳು GST ಪರಿಹಾರದ ಕೊರತೆ ಎದುರಿಸಲಿವೆಯೇ..!? : ವರದಿ
ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಂಚಮಸಾಲಿ ಸಮುದಾಯದ 62 ದಿನಗಳ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಆರು ತಿಂಗಳ ಭರವಸೆ ನೀಡಿದೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸದನದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಸೆಪ್ಟಂಬರ್ 15 ಕ್ಕ ಮೀಸಲಾತಿ ನೀಡದಿದ್ದರೆ 20 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು.
ಈ ಹೋರಾಟ ಯಶಸ್ವಿಯಾಗಲು ಸಹಕಾರ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಸಿ ಪಾಟೀಲ್, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು. ಮಾರ್ಚ್ 22 ರಂದು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಹಾಜರಾಗಿ ನಮ್ಮ ದಾಖಲೆಗಳನ್ನು ಸಲ್ಲಿಸುತ್ತೆವೆ. ವಿಚಾರಣೆ ಹಾಜರಾಗಲು ನನಗೆ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಮಾತ್ರ ಇದೆ. ಬೇರೆಯವರಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ನಮ್ಮ ಹೋರಾಟವನ್ನು ಸ್ಥಗಿತಗೊಳಿಸಲು ನಮ್ಮವರೇ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಜನರ ಬೆಂಬಲ ಇದ್ದದ್ದರಿಂದ ಅದು ಯಶಸ್ವಿಯಾಗಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಉಪಚುನಾವಣೆ : ಲೋಕಸಭೆಗೆ ಜೆಡಿಎಸ್ ಡೌಟು: ವಿಧಾನಸಭೆ ಸ್ಪರ್ಧೆಗೆ ರೆಡಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.