ನೀರಿನ ಬಿಲ್ ಕಟ್ಟದಿದ್ದರೆ ಬರಲಿದೆ ಮನೆಗೆ ಬಿಎಂಟಿಎಫ್ ನೋಟಿಸ್
Team Udayavani, Jul 16, 2022, 12:46 PM IST
ಬೆಂಗಳೂರು: ಜಲ ಮಂಡಳಿಗೆ ನೀರಿನ ಬಿಲ್ ಪಾವತಿ ಮಾಡದಿರುವ ಗ್ರಾಹಕರಿಂದ ಕಳೆದ 5 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) 19.34 ಕೋಟಿ ರೂ. ವಸೂಲಿ ಮಾಡಿಕೊಡಲು ನೆರವಾಗಿದೆ.
ಕಾವೇರಿ ನೀರು ಸರಬರಾಜಿಗೆ ಜಲ ಮಂಡಳಿಯಿಂದ ನೀರಿನ ಶುಲ್ಕ ವಸೂಲಿ ಮಾಡುತ್ತಿದೆ. ಅದರಂತೆ ನಗರದಲ್ಲಿ 10.5 ಲಕ್ಷ ಕುಡಿಯುವ ನೀರಿನ ಸಂಪರ್ಕ ಒದ ಗಿಸಲಾಗಿದೆ. ಇದರಿಂದವಾರ್ಷಿಕ 1,600 ಕೋಟಿ ರೂ. ಆದಾಯ ಪಡೆಯುತ್ತಿದೆ.ಆದರೆ, ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಗ್ರಾಹಕರು ನೀರಿನ ಬಿಲ್ ಸಮರ್ಪಕ ವಾಗಿ ಪಾವತಿಸದಿರುವ, ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದ ಮತ್ತು ನೀರಿನ ಕಳ್ಳತನ ಮಾಡುವವರ ವಿರುದ್ಧ ಕ್ರಮಕ್ಕೆ ಜಲಮಂಡಳಿ ಬಿಎಂಟಿಎಫ್ಗೆ ದೂರು ನೀಡುತ್ತಿದೆ. ಅದರಂತೆ 2018 ರಿಂದ 2022ರ ಜೂನ್ ಅಂತ್ಯಕ್ಕೆ ಒಟ್ಟು 551 ದೂರುಗಳು ದಾಖಲಿಸಲಾಗಿದೆ. ಆ ದೂರಿನಹಿನ್ನೆಲೆಯಲ್ಲಿ ಬಿಎಂಟಿಎಫ್ ಕೈಗೊಂಡ ಕ್ರಮಗಳಿಂದಾಗಿ ಜಲಮಂಡಳಿಗೆ ಒಟ್ಟು 19.34 ಕೋಟಿ ರೂ. ವಸೂಲಿಯಾಗಿದೆ.
ಜಲಮಂಡಳಿಯಿಂದ ನೀರಿನ ಬಿಲ್ ಪಾವತಿ ವಿಚಾರದಲ್ಲಿ ದಾಖಲಾದ ದೂರು ಗಳಲ್ಲಿ 347 ಗಂಭೀರವಲ್ಲದ (ಎನ್‌ಸಿಆರ್) ಮತ್ತು 204 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದವು. ನೀರಿನಬಿಲ್ ಪಾವತಿ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ಆಧರಿಸಿ ಬಿಎಂಟಿಎಫ್ ನೋಟಿಸ್ ಜಾರಿಗೊಳಿಸುತ್ತದೆ. ಎರಡು ಬಾರಿ ನೋಟಿಸ್ ಜಾರಿಗೊಳಿಸಿದ ನಂತರವೂ ನೀರಿನ ಬಿಲ್ ಪಾವತಿ ಮಾಡದವರ ಮೇಲೆ ನ್ಯಾಯಾ ಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲಿ ವಿಚಾರಣೆ ನಡೆಸಿ ಬಾಕಿ ಬಿಲ್ ಜತೆಗೆ, ದುಬಾರಿ ದಂಡವನ್ನು ವಿಧಿಸಿ ಕೂಡಲೇ ಪಾವತಿಸುವಂತೆ ಆದೇಶ ಹೊರಡಿಸಲಾಗುತ್ತದೆ.
ನೀರಿನ ಬಿಲ್ ಬಾಕಿ ಉಳಿಸಿಕೊಂಡವರ ಬಗ್ಗೆ ಜಲಮಂಡಳಿ ನೀಡಿದ ದೂರನ್ನಾಧರಿಸಿ ಬಿಎಂಟಿಎಫ್ ನೋಟಿಸ್ ಜಾರಿಗೊಳಿಸಲಿದೆ.ನೋಟಿಸ್ ಪಡೆದ ಬಹುತೇಕರು ಕೂಡಲೇ ಬಾಕಿಬಿಲ್ ಪಾವತಿಸುತ್ತಾರೆ. ನೋಟಿಸ್ ಜಾರಿ ನಂತರವೂಬಿಲ್ ಪಾವತಿಸದವರಿಗೆ ನ್ಯಾಯಾಲಯ ದಂಡ ವಿಧಿಸುತ್ತದೆ. -ಡಾ.ಕೆ.ರಾಮಚಂದ್ರರಾವ್, ಎಡಿಜಿಪಿ ಬಿಎಂಟಿಎಫ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.