ದೌರ್ಜನ್ಯ ವೇಳೆ “ಮೂಕಪ್ರೇಕ್ಷಕ’ರಾಗಬೇಡಿ
Team Udayavani, Jan 9, 2017, 12:08 PM IST
ಬೆಂಗಳೂರು: ಮಹಿಳಾ ದೌರ್ಜನ್ಯ ತಡೆ ಬರೀ ಪೊಲೀಸ್ ಮತ್ತು ಸರ್ಕಾರದ ಕರ್ತವ್ಯವೇ? ಸ್ಥಳದಲ್ಲಿರುವ ನಾಗರಿಕರ ಜವಾಬ್ದಾರಿಯೂ ಅಲ್ಲವೇ? – ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ನಗರದಲ್ಲಿ ನಡೆದ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸ್ಥಳದಲ್ಲಿದ್ದ “ಮೂಕಪ್ರೇಕ್ಷಕ’ರ ಕರ್ತವ್ಯವನ್ನೂ ಪ್ರಶ್ನಿಸುವಂತೆ ಮಾಡಿದೆ.
ಘಟನೆ ನಂತರ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡುತ್ತಾರೆ. ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಘಟನಾ ಸ್ಥಳದಲ್ಲಿದ್ದವರೂ ಮಹಿಳೆಯ ರಕ್ಷಣೆಗೆ ಧಾವಿಸುವುದರಿಂದ ಇದು ಮತ್ತಷ್ಟು ಪರಿಣಾಮಕಾರಿ ಆಗಲಿದೆ. ಈ ನಿಟ್ಟಿನಲ್ಲಿ ನಾಗರಿಕರಿಂದಲೇ ಪ್ರಮಾಣ ಸ್ವೀಕರಿಸುವ ಅಭಿಯಾನವನ್ನು ಮಹಿಳಾ ಸಂಘಟನೆಯೊಂದು ಆರಂಭಿಸಿದೆ.
ರಿಯಲ್ ಹೀರೋಗಳಿಗೆ ಸನ್ಮಾನ: ಅಲ್ಲದೆ, ಹೀಗೆ ಮಹಿಳೆಯರ ರಕ್ಷಣೆಗೆ ಧಾವಿಸಿದವ ರನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಸನ್ಮಾನ ಅಥವಾ ಸಂಭ್ರಮಾ ಚರಣೆ ಮಾಡಬೇಕು. ಆ ಮೂಲಕ ಇತರರಿಗೆ ಪ್ರೇರಣೆ ಸಿಗಲಿದ್ದು, ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಲು ಮಹಿಳೆಯರ ಹಕ್ಕು ಮತ್ತು ರಕ್ಷಣೆಗಾಗಿ ಕೆಲಸ ಮಾಡುತ್ತಿರುವ “ದುರ್ಗಾ ಇಂಡಿಯಾ’ ಸಂಸ್ಥೆ ನಿರ್ಧರಿಸಿದೆ. ಹಾಗೊಂದು ವೇಳೆ, ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ, ಕಾರ್ಪೋರೇಟ್ ಸಂಸ್ಥೆಗಳ ಸಹಯೋಗದಲ್ಲಿ “ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್) ಅಡಿ “ರಿಯಲ್ ಹೀರೋ’ಗಳನ್ನು ಸನ್ಮಾನಿಸಲು ಚಿಂತನೆ ನಡೆಸಿದೆ.
ಸಾರ್ವಜನಿಕ ಜವಾಬ್ದಾರಿ: ಹೊಸ ವರ್ಷಾಚರಣೆ ಸಂದರ್ಭದಲ್ಲೇ ಬ್ರಿಗೇಡ್ ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ಯುವತಿಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದವು. ಇವೆರಡೂ ಪ್ರಕರಣಗಳು ನಡೆದಾಗಲೂ ಸ್ಥಳದಲ್ಲಿದ್ದ ಜನ ಮೂಕಪ್ರೇಕ್ಷಕರಾಗಿದ್ದರು. ಇಂತಹ ಇನ್ನೂ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಘಟನೆಗಳು ವರದಿಯಾದಾಗ ಮಾತ್ರ ಪೊಲೀಸರು ಮತ್ತು ರಾಜಕಾರಣಿಗಳತ್ತ ಬೊಟ್ಟು ಮಾಡುತ್ತೇವೆ. ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ ಒಂದು ಭಾಗವಾದರೆ, ಘಟನೆಗೆ ಸಾಕ್ಷಿಯಾಗುವ ಸಾರ್ವಜನಿಕರ ಜವಾಬ್ದಾರಿ ಸಹ ಮತ್ತೂಂದು ಭಾಗವಾಗಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ದೌರ್ಜನ್ಯ ತಡೆಯಲ್ಲಿ ಜನರ ಸಹಭಾಗಿತ್ವಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ದುರ್ಗಾ ಇಂಡಿಯಾ ಸಂಸ್ಥಾಪಕಿ ಪ್ರಿಯಾ ವರದರಾಜನ್ ತಿಳಿಸುತ್ತಾರೆ. ಒಂದೇ ದಿನದಲ್ಲಿ ನೂರಾರು ಜನ ಫೇಸ್‌ಬುಕ್‌ನಲ್ಲಿ ಕಳುಹಿಸಿದ ಲಿಂಕ್ ಅನ್ನು ಲೈಕ್ ಮಾಡಿ, ತಮ್ಮ ಸುತ್ತ ಮಹಿಳೆಯರ ಮೇಲೆ ದೌರ್ಜನ್ಯ ನಡೆದದ್ದು ಕಂಡುಬಂದರೆ, ರಕ್ಷಣೆಗೆ ಧಾವಿಸುವುದಾಗಿ ಪ್ರಮಾಣ ಸ್ವೀಕರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಏನು ಮಾಡಬೇಕು ಎಂಬ ಗೊಂದಲ: ಆದರೆ, ಅನೇಕರಲ್ಲಿ ಹಲವು ಗೊಂದಲಗಳಿವೆ. ಈ ರೀತಿಯ ಘಟನೆಗಳು ನಡೆದಾಗ, ಮೊದಲನೇಯದಾಗಿ ಏನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ. ರಕ್ಷಣೆಗೆ ಧಾವಿಸುವುದರಿಂದ ನಮಗೇನು ಸಿಗುತ್ತದೆ? ಅಥವಾ ಯಾರು ಏನಾದರೂ ಮಾಡಿಕೊಳ್ಳಲಿ ನಮಗ್ಯಾಕೆ ಎಂಬ ಪ್ರಶ್ನೆಗಳು ಜನರಲ್ಲಿವೆ. ಇವುಗಳನ್ನು ಹಂತ-ಹಂತವಾಗಿ ಜನರ ಮನಸ್ಸಿನಿಂದ ದೂರ ಮಾಡಬೇಕು. ಇದಲ್ಲದೆ, ಅಕ್ಕಪಕ್ಕದಲ್ಲಿದ್ದವರು ಯಾವುದಾದರೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕಂಡುಬಂದರೆ, ಹೋಗಿ ಕೇಳುವುದು ಸೇರಿದಂತೆ ಕಾನೂನಾತ್ಮಕ ದೃಷ್ಟಿಯಿಂದಲೂ ಸಲಹೆಗಳನ್ನು ಪಡೆಯಲು ಚಿಂತನೆ ನಡೆದಿದೆ ಎಂದರು.
ಹೀಗೆ ಪ್ರಮಾಣ ಮಾಡಿದವರ ಸಂಖ್ಯೆ 25 ಸಾವಿರ ತಲುಪಿದ ನಂತರ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ, ರಕ್ಷಿಸಿದವರನ್ನು ಗುರುತಿಸಿ, ಸರ್ಕಾರದಿಂದಲೇ ಸನ್ಮಾನಿಸುವಂತೆ ಗೃಹ ಸಚಿವರಿಗೂ ಮನವಿ ಸಲ್ಲಿಸಲಾಗುವುದು. ಇದರ ಉದ್ದೇಶ ಮತ್ತೂಬ್ಬರಿಗೆ ಪ್ರೇರಣೆ ನೀಡುವುದಾಗಿದೆ. “ರಿಯಲ್ ಹೀರೋ’ಗಳ ನಾಮನಿರ್ದೇಶನ ಮಾಡಿದರೆ, ಅದರಲ್ಲಿ 20ರಿಂದ 25 ಜನರನ್ನು ಆಯ್ಕೆ ಮಾಡಿ ಸಂಭ್ರಮಾಚರಣೆ ಮಾಡಬಹುದು ಎಂದು ಹೇಳಿದರು.
ಅಲಾರಾಂ ಪರಿಚಯಿಸಿದ್ದ ದುರ್ಗಾ ಇಂಡಿಯಾ: ಅಂದಹಾಗೆ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಅಳವಡಿಸಿದ “ಅಲಾರಾಂ’ಗಳನ್ನು ಪರಿಚಯಿಸಿದ್ದು ದುರ್ಗಾ ಇಂಡಿಯಾ. ಈಗ 500 ಬಸ್‌ಗಳಲ್ಲಿ ಈ ಅಲಾರಾಂಗಳನ್ನು ಅಳವಡಿಸಲು ಬಿಎಂಟಿಸಿ ನಿರ್ಧರಿಸಿದೆ.
ಬೇಕಾದರೆ ನೀವು ವೋಟ್ ಮಾಡಿ
ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಮಗೆ ಕಂಡುಬಂದರೆ, ರಕ್ಷಣೆಗೆ ಧಾವಿಸುವುದಾಗಿ ನೀವು ವೋಟ್ ಮಾಡಿ. ಇದಕ್ಕಾಗಿ http://m.facebook.com/questions.php?question_id=1038025162997899 ಕ್ಲಿಕ್ ಮಾಡಿ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.