ಬಹುತೇಕ ಜೈಲಿನಲ್ಲಿ ಅಕ್ರಮ ಚಟುವಟಿಕೆ: ಅಶೋಕ್‌


Team Udayavani, Jul 18, 2017, 11:54 AM IST

r-ahok.jpg

ದೇವನಹಳ್ಳಿ: ರಾಜ್ಯದ ಬಹುತೇಕ ಸೆರೆಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹತ್ಯೆ, ದೌರ್ಜನ್ಯದಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಕಿಡಿಕಾರಿದರು.

ತಾಲೂಕಿನ ಚನ್ನಹಳ್ಳಿ ಮತ್ತು ಟಿ-ಅಗ್ರಹಾರ ಗ್ರಾಮದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ದೀನದಯಾಳ್‌ ಪಂಡಿತ್‌ ಜನ್ಮ ಶತಾಬ್ಧಿ ವರ್ಷಾಚರಣೆ ವಿಸ್ತಾರಕರ ಸಭೆಯಲ್ಲಿ ಸಸಿಯನ್ನು ನಡೆಯುವುದರ ಮೂಲಕ ಚಾಲನೆ ನೀಡಿ ಹಾಗೂ ತಾಲೂಕು ಬಿಜೆಪಿ ರೈತಮೊರ್ಚಾ ಅದ್ಯಕ್ಷ  ಟಿ.ಅಗ್ರಹಾರ ರಾಜಣ್ಣ ನಿವಾಸದಲ್ಲಿ ಭೋಜನ ಸ್ವೀಕರಿಸಿ ಮಾತನಾಡಿದ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಡಿಐಜಿಪಿ ರೂಪಾ ಅವರ ಹೇಳಿಕೆ 100ರಷ್ಟು ಸತ್ಯವಾಗಿದೆ,

ತಮಿಳುನಾಡಿನ ಶಶಿಕಲಾ ಅವರಿಂದ 2 ಕೋಟಿ ಹಾಗೂ ಕರೀಂಲಾಲ್‌ ತೆಲಗಿ ಅವರಿಗೆ ಐಶಾರಾಮಿ ಸೌಲಭ್ಯವನ್ನು ಕಲ್ಪಿಸಿರುವುದು ಹಾಗೂ ಜೈಲಿನಲ್ಲಿ ಮಧ್ಯ, ಗಾಂಜಾ, ಇಸ್ಪಿಟ್‌, ಇನ್ನೂ ಮುಂತಾದ ಮನರಂಜನೆಗಳು ನಡೆಯುತ್ತಿದೆ. ಜೈಲಿಗೆ ಹೋದವರು ಖುಷಿಯಿಂದ ಇರುವುದಕ್ಕೆ ಜೈಲಿಗೆ ಹೋಗುತ್ತಾರೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರ ಗೃಹ ಖಾತೆ ಇಲಾಖೆ ಸಂಪೂರ್ಣವಾಗಿ ಸತ್ತು ಹೋಗಿದೆ. ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನನ್ನು ಮಾಡಿದ್ದಾರೆ.

ಈ ಸರ್ಕಾರದಲ್ಲಿ ಸತ್ಯವಂತರಿಗೆ ಪ್ರಾಮಾಣಿಕ ಅಧಿಕಾರಿಗಳಿಗೆ ಮಾನ್ಯತೆ ಇಲ್ಲ, ಅಧಿಕಾರಿಗಳು ನಿಜವನ್ನು ಹೇಳಿದರೆ ವರ್ಗಾವಣೆ, ಅಮಾನತ್ತು, ಆತ್ಮಹತ್ಯೆ, ಇಂತಹ ಮೂರು ಭಾಗ್ಯಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೊಟ್ಟಿದ್ದಾರೆ. ಈಗಾಗಲೇ ಡಿಐಜಿಪಿ ಸತ್ಯ ಹೇಳಿದಕ್ಕೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಸತ್ಯ ಹೇಳಿದವರಿಗೆ ನೊಟೀಸ್‌ ಹೇಳುತ್ತಾರೆ. ಅದರ ಹಿಂದೆ ಇರುವವರಿಗೆ ನೊಟೀಸ್‌ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಲು ಇಡೀ ರಾಜಾಧ್ಯಂತ ವಿಸ್ತಾರಕರ ಸಭೆ ಮಾಡಿ ಮನೆಮನೆಗೆ ತೆರಳಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮಗಳನ್ನು ಮನೆಮನೆಗೆ ತಿಳಿಸುವುದು, ರಾಜ್ಯಸರ್ಕಾರದ ವೈಫ‌ಲ್ಯದ ಬಗ್ಗೆ ಜನರಿಗೆ ಮನದಟ್ಟು ಮಾಡುವುದು. ಸಸಿ ನಡೆಸುವ ಮೂಲಕ ಪರಿಸರ ಉಳಿಸುವುದು. ಸ್ವತ್ಛತಾ ಆಂದೋಲನ ಮಾಡುತ್ತಿದ್ದೇವೆ. ಪ್ರತಿ ಬೂತ್‌ನಲ್ಲೂ ಕಮಿಟಿ ರಚಿಸಿ ಪಕ್ಷಸಂಘಟನೆ ಮಾಡಲಾಗುವುದು. ತಾಲೂಕಿನ ಸಾವಕನಹಳ್ಳಿ ಗ್ರಾಪಂ ಸದಸ್ಯ ಎಸ್‌.ಎನ್‌. ಮುನಿರಾಜು ಮನೆಯಲ್ಲಿ ವಾಸ್ತವ್ಯವನ್ನು ಮಾಡಲಾಗುತ್ತಿದೆ ಎಂದರು.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೆ ತಂದು ಅಣೇಕಟ್ಟು ಕಟ್ಟದೆ ಪೈಪ್‌ ಲೈನ್‌ ಅಳವಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇವಲ ಅವಧಿಯ ಒಳಗೆ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತದೆ ಎಂದು ಹೇಳುತ್ತಾರೆ. ಈಗ ಇನ್ನೂ 2 ವರ್ಷ ಕಾಲಾವಧಿಯಾಗುತ್ತದೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಈ ಯೋಜನೆಯಿಂದ ಕೋಟ್ಯಾಂತರ ರೂಪಾಯಿ ಹಣ ಕಳ್ಳಕಾಕರ ಪಾಲಾಗುತ್ತಿದೆ. ಎತ್ತಿನ ಹೊಳೆ ಯೋಜನೆಯು ಕೇವಲ ಚುನಾವಣಾ ಗಿಮಿಕ್ಸ್‌ ಆಗಿದೆ ಎಂದರು.

ಹೆಬ್ಟಾಳ ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರವು ಬಡವರಿಗೆ ಉಜ್ವಲಯೋಜನೆಯಡಿ ಉಚಿತ ಗ್ಯಾಸ್‌ಸಂಪರ್ಕ ಕಲ್ಪಿ$ಸುತ್ತಿದ್ದು ತಾಲೂಕಿನ ಸುಮಾರು 6 ಸಾವಿರ ಮಂದಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಗರ್ಭಿಣಿಯರಿಗೆ ಮಾಸಿಕ 6 ಸಾವಿರ ರೂ, ಹೆರಿಗೆ ನಂತರ 6 ತಿಂಗಳವರೆಗೆ ಹಾರೈಕೆಗಾಗಿ ಧನಸಹಾಯ ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಬೇಟಿ ಪಡಾವೋ ಕಾರ್ಯಕ್ರಮದಡಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಯೋಜನೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಫ‌ಸಲ್‌ಬಿಮಾ ಯೋಜನೆಯಡಿಯಲ್ಲಿ ರೈತರ ಬೆಳೆಗಳು ಶೇ.33 ರಷ್ಟು ಹಾನಿಯೊಳಗಾದರೂ ವಿಮೆ ಸೌಲಭ್ಯ ನೀಡುವ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ರಾಜ್ಯ ಬಿಜೆಪಿ ಮುಖಂಡ ಎಂ.ನಾರಾಯಣಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್‌.ಎಂ.ರವಿಕುಮಾರ್‌, ವಿಸ್ತಾರಕ್‌ ಪ್ರಭಾರಿ ರಘುನಾಥ್‌, ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಡಿ.ಆರ್‌.ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜ್‌ ಗೌಡ, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಬೊಮ್ಮವಾರ ಸುನೀಲ್‌,

ಚನ್ನಕೇಶವ, ರಾಷ್ಟ್ರೀಯ ಪರಿಷತ್‌ ಸದಸ್ಯ ಎ.ಸಿ.ಗುರುಸ್ವಾಮಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಟಿ.ಅಗ್ರಹಾರ ರಾಜಣ್ಣ, ಉಪಾಧ್ಯಕ್ಷ ಗೋಖರೆ ಜಿ.ಎನ್‌.ಗೋಪಾಲ್‌, ಜಿಲ್ಲಾ ಸಂಚಾಲಕ ಎಸ್‌.ರಮೇಶ್‌ ಕುಮಾರ್‌, ಜಿಲ್ಲಾ ಉಪಾಧ್ಯಕ್ಷ ಆರ್‌.ಪ್ರಭಾಕರ್‌, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಚನ್ನರಾಯಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಾಂಜಿನೇಯ, ಗ್ರಾಪಂ ಮಾಜಿ ಅಧ್ಯಕ್ಷ ರಾಧಕೃಷ್ಣ, ಮತ್ತಿತರರು ಇದ್ದರು.

ಟಿ-ಅಗ್ರಹಾರ ಗ್ರಾಮದ ತಾಲೂಕು ರೈತ ಮೋರ್ಚಾ ಅಧ್ಯಕ್ಷ ರಾಜಣ್ಣ ನಿವಾಸದಲ್ಲಿ ಮಧ್ಯಾಹ್ನದ ಊಟದಲ್ಲಿ ಸೊಪ್ಪಿನ ಸಾರು ಮತ್ತು ಮುದ್ದೆ ಊಟವನ್ನು ಸವಿದರು.
ಚನ್ನಹಳ್ಳಿ ಗ್ರಾಮಕ್ಕೆ ಹೋಗುವ ಮೊದಲು ದೇವನಹಳ್ಳಿ ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಕಾರ್ಯಕರ್ತರಿಂದ ಹಾರ ಹಾಕಿ ಸ್ವಾಗತಿಸಿದರು.

ಟಾಪ್ ನ್ಯೂಸ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.