ಅಕ್ರಮ ವಿದೇಶಿಗರ ಪತ್ತೆ ಶುರು


Team Udayavani, Feb 18, 2019, 6:18 AM IST

akrama.jpg

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ ವಿದೇಶಿಗರ ಪತ್ತೆ ಕಾರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಸಿಸಿಬಿ ಪೊಲೀಸರು, ಇದೀಗ ವಿಶೇಷ ಕಾರ್ಯಾಚರಣೆಗೆ ಮರು ಚಾಲನೆ ನೀಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಮಾದಕ ವಸ್ತು ಮಾರಾಟ, ಆನ್‌ಲೈನ್‌ ವಂಚನೆ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡುಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸಿಸಿಬಿ ಪೊಲೀಸರು, ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳ ಪತ್ತೆಗೆ ಸಿದ್ಧತೆ ನಡೆಸಿದ್ದಾರೆ.

ಈ ಸಂಬಂಧ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ(ಎಫ್ಆರ್‌ಆರ್‌ಓ) ಅಧಿಕಾರಿಗಳೊಂದಿ ಚರ್ಚಿಸಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿರುವ ವಿದೇಶಿಗರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಮತ್ತೂಂದೆಡೆ ನಗರದ ಎಂಟು ವಲಯಗಳ ಠಾಣಾಧಿಕಾರಿಗಳಿಗೂ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿಗರ ಕುರಿತು ಮಾಹಿತಿ ಸಂಗ್ರಹಿಸುವಂತೆ ಮೌಖೀಕವಾಗಿ ಸೂಚನೆ ನೀಡಲಾಗಿದೆ.

ಠಾಣಾಧಿಕಾರಿಗಳು ಹಾಗೂ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ವಶಕ್ಕೆ ಪಡೆದು ಗಡಿಪಾರು ಮಾಡಲು ಚಿಂತಿಸಲಾಗುವುದು. ಇದಕ್ಕೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಬೇಕೆಂಬ ಇರಾದೆಯೂ ಇದೆ. ಆದರೆ, ಸಿಸಿಬಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವೀಸಾ ಅವಧಿ ಮುಗಿದ ಬಳಿಕವೂ ನೆಲೆಸಿರುವ ವಿದೇಶಿಗರನ್ನು ಸರ್ಕಾರದ ಸೂಚನೆ ಮೇರೆಗೆ ಪೊಲೀಸ್‌ ಇಲಾಖೆ ಗಡಿಪಾರು ಮಾಡುತ್ತದೆ. ಆದರೆ, ಒಂದೆರಡು ತಿಂಗಳ ನಂತರ ನಕಲಿ ಪಾಸ್‌ಪೋರ್ಟ್‌ ಮೂಲಕ ಕೆಲವರು ನಗರ ಪ್ರವೇಶಿಸುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚುವುದೇ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಅಕ್ರಮವಾಗಿ ನೆಲೆಸಿರುವ ಕೆಲ ವಿದೇಶಿಗರು ಜೀವನ ನಿರ್ವಹಣೆಗಾಗಿ ಅಕ್ರಮ ದಂಧೆಗಳಲ್ಲಿ ತೊಡಗುತ್ತಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

ವಿಳಾಸ ಬದಲು: ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳ ಮಾಹಿತಿ ಆಧರಿಸಿ ಈ ಹಿಂದೆ 200ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿತ್ತು. ಆದರೆ, ಕೆಲ ವಿದೇಶಿಯರು ನಕಲಿ ಪಾಸ್‌ಪೋರ್ಟ್‌ ಮೂಲಕ ಮತ್ತೆ ನಗರಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಇಂತಹವರ ಪತ್ತೆ ಕಷ್ಟ. ಕೆಲವೊಮ್ಮೆ ವಿದ್ಯಾರ್ಥಿ, ವ್ಯವಹಾರ ವೀಸಾದಡಿ ನಗರಕ್ಕೆ ಆಗಮಿಸುವ ವಿದೇಶಿಯರು ಪ್ರಾದೇಶಿಕ ಕಚೇರಿಯಲ್ಲಿ ನೊಂದಾಯಿಸುವ ವಿಳಾಸ ಹಾಗೂ ಹಾಲಿ ವಾಸಿಸುವ ವಿಳಾಸ ಬೇರೆ ಇರುತ್ತದೆ.

ಈ ನಡುವೆ ವಿದೇಶಿಗರ ವಿರುದ್ಧ ದಾಖಲಾಗುವ ಕಾನೂನು ಬಾಹಿರ ಚಟುವಟಿಕೆಗಳಿಂದ ಕೆಲ ವಿದೇಶಿಯರು ಇಲ್ಲಿಯೇ ವಾಸವಾಗಿದ್ದಾರೆ. ಒಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದರೆ, ಅದು ಇತ್ಯರ್ಥವಾಗುವವರೆಗೂ ಆತ ತನ್ನ ದೇಶಕ್ಕೆ ತೆರಳುವಂತಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಕೆಲವರು ಅಕ್ರಮವಾಗಿ ವಾಸ್ತವ್ಯ ಮುಂದುವರಿಸುವುದಲ್ಲದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ: ಮೂರು ವರ್ಷಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗಟ್ಟುವ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿತ್ತು. ಇದರೊಂದಿಗೆ ಆಗಾಗ್ಗೆ ಪತ್ತೆಯಾಗುವ ಮಾದಕ ವಸ್ತು ಸಾಗಣೆ, ಸ್ಥಳೀಯರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ವಿದೇಶಿಗರ ವೀಸಾ ಪರಿಶೀಲಿಸಿದಾಗ ಬಹುತೇಕ ಮಂದಿಯ ವೀಸಾ ಅವಧಿ ಮೀರಿರುತ್ತಿತ್ತು.

ಆ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ನಗರದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, 600ಕ್ಕೂ ಹೆಚ್ಚು ಮಂದಿ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿದ್ದು, ಗಡಿಪಾರಿಗೂ ಚಿಂತನೆ ನಡೆಸಿದ್ದರು. ಆದರೆ, ನಂತರ ಸಿಸಿಬಿಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪತ್ತೆ ಕಾರ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.

ಇದಕ್ಕೆ ಸಿಬ್ಬಂದಿ ಕೊರತೆ, ಕಾರ್ಯದೊತ್ತಡ ಎಂಬೆಲ್ಲ ಕಾರಣಗಳನ್ನು ನೀಡಿ ಅಕ್ರಮ ವಿದೇಶಿಗರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಕಳೆದ ವರ್ಷ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್ಆರ್‌ಆರ್‌ಓ) ಮಾಹಿತಿ ಮೇರೆಗೆ  107 ಮಂದಿಯನ್ನು ವೈಟ್‌ಫೀಲ್ಡ್‌, ಈಶಾನ್ಯ ಮತ್ತು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದು ಹೊರತುಪಡಿಸಿದರೆ, ಇತರೆ ಯಾವುದೇ ಪ್ರಗತಿ ಕಂಡಿಲ್ಲ.

ಸಿಬ್ಬಂದಿ ಕೊರತೆ: ಮೂಲಗಳ ಪ್ರಕಾರ ಸಿಸಿಬಿಯಲ್ಲಿ ರೌಡಿ ನಿಗ್ರಹ ಪಡೆ, ಮಹಿಳೆ ಮತ್ತು ಮಾದಕ ದ್ರವ್ಯ ದಳ, ವಿಶೇಷ ತನಿಖಾ ದಳ ಸೇರಿ ಐದು ವಿಭಾಗಗಳಿವೆ. ಆದರೆ, ಇವುಗಳಲ್ಲಿ ಕೇವಲ 50-60 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆಯೂ ಹೆಚ್ಚಿನ ಒತ್ತಡದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಬಾಂಗ್ಲಾ ಪ್ರಜೆಗಳ ಪತ್ತೆ ಕಷ್ಟ: ವಿದೇಶಿಗರು ಮಾತ್ರವಲ್ಲದೆ, ಬಾಂಗ್ಲಾದೇಶದಿಂದ ವಲಸೆ ಬಂದಿರುವ ನೂರಾರು ಮಂದಿ ಕೂಡ ನಗರದಲ್ಲಿ ವಾಸವಾಗಿದ್ದಾರೆ. ಆದರೆ, ಇವರ ಪತ್ತೆ ಕಾರ್ಯ ಕಷ್ಟದಾಯಕ. ಕೆಲ ವಲಸಿಗರು, ಸುಳ್ಳು ಮಾಹಿತಿ ನೀಡಿ ಜೀವನ ನಿರ್ವಹಣೆಗಾಗಿ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ.

ಕೆಲವೊಮ್ಮೆ ಮಾಹಿತಿ ಆಧರಿಸಿ ದಾಳಿ ನಡೆಸಿದರೆ, ಪಶ್ಚಿಮ ಬಂಗಾಳ ಮೂಲದವರು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಬಾಂಗ್ಲಾದೇಶದಿಂದ ಬರುವ ವಲಸಿಗರು, ರಸ್ತೆ ಮಾರ್ಗದಿಂದ ಗಡಿಪ್ರದೇಶಗಳನ್ನು ದಾಟುವುದರಿಂದ ಸೂಕ್ತ ದಾಖಲೆಗಳು ಸಿಗುವುದಿಲ್ಲ ಎಂದು ಪೊಲೀಸರು ಹೇಳಿದರು.

ಅಕ್ರಮ ವಿದೇಶಿಗರ ಪತ್ತೆ ಕಾರ್ಯಕ್ಕೆ ಸಿಸಿಬಿ ಮುಂದಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಿದ್ದೇವೆ. ಇದಕ್ಕೆ ಕಾಲಾವಕಾಶ ಬೇಕಿದೆ.
-ಎಸ್‌.ಗಿರೀಶ್‌, ಕೇಂದ್ರ ಅಪರಾಧ ವಿಭಾಗದ ಡಿಸಿಪಿ

* ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.