E-cigarettes: ನಗರದಲ್ಲಿ ಇ-ಸಿಗರೆಟ್‌ ಅಕ್ರಮ ಮಾರಾಟ ಹೆಚ್ಚಳ

Team Udayavani, Mar 4, 2024, 10:36 AM IST

E-cigarettes: ನಗರದಲ್ಲಿ ಇ-ಸಿಗರೆಟ್‌ ಅಕ್ರಮ ಮಾರಾಟ ಹೆಚ್ಚಳ

ಬೆಂಗಳೂರು: ನಿಷೇಧಿತ ಇ-ಸಿಗರೆಟ್‌ ಬೆಂಗಳೂರಿನ ಎಲ್ಲೆಡೆ ಚಿಲ್ಲರೆ ಅಂಗಡಿ, ಆನ್‌ಲೈನ್‌ನಲ್ಲಿ ಸಲೀಸಾಗಿ ಸಿಗುತ್ತಿದ್ದು, ಬೆಂಗಳೂರು ಪೊಲೀಸರು ಇ-ಸಿಗರೆಟ್‌ ಮಾರಾಟಗಾರರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇ-ಸಿಗರೆಟ್‌ ಚಟಕ್ಕೆ ಒಳಗಾಗುವವರ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಈ ಸಂಬಂಧ 2021ರಲ್ಲಿ ದಾಖಲಾಗಿದ್ದ 1 ಪ್ರಕರಣವು 2023ರಲ್ಲಿ 48ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತು ಕೊಂಡಿರುವ ಬೆಂಗಳೂರು ಪೊಲೀಸರು ಸರ್ಕಾರದ ಸೂಚನೆ ಮೇರೆಗೆ ಅಕ್ರಮವಾಗಿ ಇ-ಸಿಗರೆಟ್‌ ಮಾರಾಟ ಮಾಡುವ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇ-ಸಿಗರೆಟ್‌ ಮಾರಾಟ ಕಂಡುಬಂದಲ್ಲಿ ತಕ್ಷಣ ದಾಳಿ ಮಾಡಿ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿಯಾದ್ಯಂತ ಇ-ಸಿಗರೆಟ್‌ ಜಾಲ: ಇ-ಸಿಗರೆಟ್‌ ಆನ್‌ಲೈನ್‌ ಮಾರಾಟ ಜಾಲವು ದೊಡ್ಡದಿದ್ದು, ವಿವಿಧ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ ಮೂಲಕ ಇ-ಸಿಗರೆಟ್‌ ಖರೀದಿ ಭರಾಟೆಯೂ ಜೋರಾಗಿದೆ. ಚಿಲ್ಲರೆ, ತಂಬಾಕು ಅಂಗಡಿಗಳು, ಗಿಫ್ಟ್ ಸೆಂಟರ್‌ಗಳಲ್ಲೂ ಅಕ್ರಮವಾಗಿ ಮಾರಾಟ ನಡೆಯುತ್ತಿದೆ. ಟೆಕ್ಕಿಗಳು, ಉನ್ನತ ಹುದ್ದೆಯಲ್ಲಿರುವವರು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಇ-ಸಿಗರೆಟ್‌ ಚಟಕ್ಕೆ ಬಿದ್ದಿದ್ದಾರೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

400ಕ್ಕೂ ಹೆಚ್ಚಿನ ಬಗೆಯ ಇ-ಸಿಗರೆಟ್‌ಗಳು ವಿವಿಧ ಬ್ರ್ಯಾಂಡ್‌ಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಎಂಜಿ ರಸ್ತೆ, ಬ್ರಿಗೆಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರಮಂಗಲ, ವೈಟ್‌ ಫೀಲ್ಡ್, ಕೊತ್ತನೂರು, ಹೆಣ್ಣೂರು, ಸರ್ಜಾಪುರ ರಸ್ತೆಯ ವಿವಿಧೆಡೆ ಇ-ಸಿಗರೆಟ್‌ ಮಾರಾಟ ಹೆಚ್ಚಿದೆ ಎಂಬ ಆರೋಪ ಕೇಳಿ ಬಂದಿದೆ. ‌

ಇ-ಸಿಗರೆಟ್‌ ಸೇವನೆ ಏಕೆ ಅಪಾಯ?: ಇ-ಸಿಗರೆಟ್‌ನ ರಾಸಾಯನಿಕಗಳು ಕ್ಯಾನ್ಸರ್‌ ಕಾರಕ ಎಂಬುದು ದೃಢಪಟ್ಟಿದೆ. ಇದರ ಸೇವನೆಯಿಂದ ಶ್ವಾಸಕೋಶದ ತೊಂದರೆಗಳು, ಹೃದಯ ಸಂಬಂಧಿ ಖಾಯಿಲೆಗಳು, ನರ ದೌರ್ಬಲ್ಯ, ಉಸಿರಾಟದ ಸಮಸ್ಯೆ, ರೋಗ ನಿರೋಧಕ ಶಕ್ತಿ ಕುಂಟಿತ ಸೇರಿದಂತೆ ದೀರ್ಘ‌ಕಾಲದ ಕಾಯಿಲೆಗಳು ಉಂಟಾಗುತ್ತವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ವಿವಿಧ ರಾಸಾಯನಿಕ ಬಳಕೆ: ಇ-ಸಿಗರೆಟ್‌ ದ್ರವ್ಯದಲ್ಲಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್‌ ಅಂಶ, ಪ್ರೊಪಿಲೀನ್‌, ಗ್ಲಿಸರೀನ್‌ ವಸ್ತುಗಳಿರುತ್ತವೆ. ಇದನ್ನು ಬಿಸಿ ಮಾಡುವಾಗ ಏರಸಾಲ್‌ ಉತ್ಪತ್ತಿಯಾಗುತ್ತದೆ. ಸಾಮಾನ್ಯ ಸಿಗರೆಟ್‌ಗಳಲ್ಲಿ ತಂಬಾಕು ಸುಡುವುದರಿಂದ ಹಾನಿಕಾರ ಅಂಶಗಳು ಕಡಿಮೆ ಇರುತ್ತವೆ. ಇ-ಸಿಗರೆಟ್‌ಗಳನ್ನು ವೇಪ್ಸ್‌, ವೇಪ್‌ ಪೆನ್‌, ಹುಕ್ಕ ಪೆನ್‌ ಎಂದೂ ಕರೆಯುತ್ತಾರೆ.

ಖಾಕಿ ಬಲೆಗೆ ಬಿದ್ದಿದ್ದ ಇ-ಸಿಗರೆಟ್‌ ಮಾರಾಟಗಾರರು : ಕೊತ್ತನೂರು ಠಾಣಾ ವ್ಯಾಪ್ತಿ ಗಿಫ್ಟ್ ಸೆಂಟರ್‌ನಲ್ಲಿ ಇ-ಸಿಗರೆಟ್‌ ಮಾರಾಟ ಮಾಡಿದ್ದ ಕೇರಳ ಮೂಲದ ಐವರು ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಪ್ರಕರಣದ ಕಿಂಗ್‌ಪಿನ್‌ ಮುಜಾಮಿಲ್‌ ಎಂಬಾತ ವಿದೇಶದಲ್ಲಿರುವ ತನ್ನ ಸ್ನೇಹಿತರ ಮೂಲಕ ಅಕ್ರಮವಾಗಿ ಇ-ಸಿಗರೇಟ್‌ ಹಾಗೂ ವಿದೇಶಿ ಸಿಗರೆಟ್‌ಗಳನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದ. ಕೋರಮಂಗಲದಲ್ಲಿರುವ ತನ್ನ ಗೋದಾಮಿನಲ್ಲಿ ಅದನ್ನು ಸಂಗ್ರಹಿಸಿಟ್ಟಿದ್ದ. ಆತನ ಸೂಚನೆ ಮೇರೆಗೆ ಇತರೆ ನಾಲ್ವರು ಆರೋಪಿಗಳು ಕೊತ್ತನೂರಿನಲ್ಲಿ ಎರಡು ಗಿಫ್ಟ್ ಸೆಂಟರ್‌ ತೆರೆದು, ಇ-ಸಿಗರೆಟ್‌ ಗಳನ್ನು ಸಲೀಸಾಗಿ ಗ್ರಾಹಕರಿಗೆ ಸುಮಾರು 300-400 ರೂ.ಗೆ ಮಾರಾಟ ಮಾಡುತ್ತಿದ್ದರು. ಗೋದಾಮಿನಲ್ಲಿ 23.67 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೆಟ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಟಾಪ್ ನ್ಯೂಸ್

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.