ನಾನು ಮಾಜಿ ಎಂಪಿ ಎಂದ ಜಯಪ್ರದಾ!
Team Udayavani, Nov 27, 2018, 11:39 AM IST
ಬೆಂಗಳೂರು: ನಟ ಅಂಬರೀಶ್ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ಹಿರಿಯ ನಟಿ ಜಯಪ್ರದಾ ಅವರು ಹೊರಡುವ ವೇಳೆ ಸರಿಯಾದ ಭದ್ರತೆ ಸಿಗಲಿಲ್ಲ ಎಂದು ಆರೋಪಿಸಿ ಕೂಗಾಡಿದ ಘಟನೆ ನಡೆಯಿತು.
ಅಂತ್ಯಸಂಸ್ಕಾರ ಪೂರ್ಣಗೊಂಡ ಬಳಿಕ ಜಯಪ್ರದಾ ಅವರು ಕಂಠೀರವ ಸ್ಟುಡಿಯೋನ ಮುಖ್ಯದ್ವಾರದ ಕಡೆಗೆ ಬಂದು ಹೊರ ಹೋಗಲು ಮುಂದಾದರು. ಅವರ ಹಿಂದೆಯೇ ನೂರಾರು ಜನ ನಡೆದು ಬಂದರು. ಆಗ ಜಯಪ್ರದಾ ಅವರು ಹೊರ ಹೋಗಲು ಅವಕಾಶ ನೀಡುವಂತೆ ಕೋರಿದಾಗ ಡಿಸಿಪಿ ಅಣ್ಣಾಮಲೈ, ಕೆಲ ಕ್ಷಣ ನಿಲ್ಲುವಂತೆ ಮನವಿ ಮಾಡಿದರು.
ಆಗ ಸಿಟ್ಟಾದ ಜಯಪ್ರದಾ, ನಾನು ಮಾಜಿ ಎಂಪಿ. ನನಗೆ ಈ ರೀತಿ ಹೇಳುತ್ತೀರಾ. ನನಗೆ ಸರಿಯಾದ ಭದ್ರತೆ ನೀಡುತ್ತಿಲ್ಲ’ ಎಂದು ಅಲ್ಲಿದ್ದ ರಾಜಕೀಯ ಮುಖಂಡರ ಬಳಿ ಹೇಳತೊಡಗಿದರು. ಆಗ ಅಣ್ಣಾಮಲೈ, “ನಾನು ಅಣ್ಣಾಮಲೈ. ನಿಮಗೆ ಈಗ ಏನಾಗಬೇಕಿದೆ ಹೇಳಿ’ ಎಂದು ಕೇಳಿದರು.
ಮತ್ತೆ ಮಾತು ಮುಂದುವರಿಸಿದ ಜಯಪ್ರದಾ, ಅವರು ಡಿಸಿಪಿ ಇರಬಹುದು. ನಾನು ಮಾಜಿ ಎಂಪಿ. ಅದಕ್ಕಿಂತ ಮಿಗಿಲಾಗಿ ನಾನೊಬ್ಬ ಮಹಿಳೆ. ನನಗೆ ಹೊರಗೆ ಹೋಗಲು ಅವಕಾಶ ಹಾಗೂ ಭದ್ರತೆ ನೀಡಬೇಕು ತಾನೇ’ ಎಂದರು. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳು ಜಯಪ್ರದಾ ಅವರನ್ನು ಸಮಾಧಾನಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.