ಕೃಷಿಕರ ಕಷ್ಟ ಅರಿಯುವ ಶಕ್ತಿ ನನಗಿಲ್ಲ!
Team Udayavani, Dec 14, 2017, 12:55 PM IST
ಬೆಂಗಳೂರು: “ರೈತರ ಕಷ್ಟ ಅರ್ಥ ಮಾಡಿಕೊಳ್ಳುವಷ್ಟು ಶಕ್ತಿ, ಯುಕ್ತಿ ಎರಡೂ ನನಗಿಲ್ಲ. ಒಬ್ಬ ರೈತನಿಗೆ ಮಾತ್ರ ಆತನ ಕಷ್ಟು-ಸುಖ ಗೊತ್ತು. ಮಳೆ ಬರಿಸಲು ನಮ್ಮಿಂದ ಆಗಲ್ಲ. ಪರಿಸರದ ಜತೆ ಜಗಳವಾಡಲಂತೂ ಸಾಧ್ಯವಿಲ್ಲ. ರೈತರ ಸಮಸ್ಯೆ ಏನೆಂದು ಸತ್ಯವಾಗಲೂ ನನಗೆ ಗೊತ್ತಿಲ್ಲ. ರೈತರ ಬಗ್ಗೆ ಕಾಳಜಿ ಇದೆ. ಆದರೆ, ಅವರಿಗೇಸ್ಕರ ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಇದೇ ನಿಜವಾದ ಸತ್ಯ…’
ಹೀಗೆ ರಾಜ್ಯದ ಕೃಷಿಕರ ಕುರಿತು, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗಿರುವ ಅರಿವಿನ ಕುರಿತು ಮನದಾಳದ ಮಾತು ಬಿಚ್ಚಿಟ್ಟಿದ್ದು ಚಿತ್ರನಟ ಕಿಚ್ಚ ಸುದೀಪ್. ಅಂದಹಾಗೆ ಸುದೀಪ್ ರೈತಕ ಕುರಿತು ಮಾತನಾಡಲು ವೇದಿಕೆಯಾದದ್ದು “ವಿ ರೆಸ್ಪೆಕ್ಟ್ ಫಾರ್ಮರ್’ (ನಾವು ರೈತರನ್ನು ಗೌರವಿಸುತ್ತೇವೆ) ಟ್ರಸ್ಟ್ ವತಿಯಿಂದ ಬುಧವಾರ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ.
ಪ್ರೀತಿಯ ಕಾರು ಮಾರುವೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಸುದೀಪ್, “ರೈತರೊಂದಿಗೆ ಪರಸ್ಪರ ಸಂವಾದದಿಂದ ಸಮಸ್ಯೆ ಅರಿತು ನಿವಾರಿಸಲು ಪ್ರಯತ್ನಿಸಬೇಕೇ ಹೊರತು ಭಾಷಣದಿಂದ ಯಾವ ಪರಿಹಾರವೂ ಸಿಗಲು ಸಾಧ್ಯವಿಲ್ಲ. ನಾನು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ನಾನು ರಾಜಕೀಯಕ್ಕೆ ಇಳಿಯುತ್ತಿಲ್ಲ. ನನಗೆ ಯಾರ ಮತವೂ ಬೇಡ ಅಥವಾ ಈ ಮೂಲಕ ಹೆಸರು ಮಾಡುವ ಆಸೆಯೂ ನನಗಿಲ್ಲ. ರೈತರು ಅಭಿವೃದ್ಧಿಯಾಗುವಂತೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಈ ನಿಟ್ಟಿನಲ್ಲಿ ನನ್ನ ಪ್ರೀತಿಯ ಕಾರೊಂದನ್ನು ಮಾರಿ, ಅದರಿಂದ ಬಂದ ಹಣವನ್ನ ಟ್ರಸ್ಟ್‌ಗೆ ಕೊಡುತ್ತೇನೆ,’ ಎಂದರು.
ರೈತರಿಗೆ ಗೌರವ ಸಿಗುತ್ತಿಲ್ಲ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ಹೆಗ್ಡೆ ಅವರು ಮಾತನಾಡಿ, ನಮ್ಮ ಸಮುದಾಯದಲ್ಲಿ ರೈತರಿಗೆ ಸಿಗಬೇಕಾದ ಗೌರವ ಮತ್ತು ಆದ್ಯತೆ ಸಿಗುತ್ತಿಲ್ಲ. ರೈತರು ಮಧ್ಯವರ್ತಿಗಳಿಂದ ವಂಚಿತರಾಗುತ್ತಿದ್ದು, ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಅನ್ನದಾತರನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು ಎಂದರು.
ಶ್ರೀಮಂತಿಕೆ ಪೂಜೆ: ಶ್ರೀಮಂತಿಕೆಯನ್ನು ಪೂಜಿಸುವ ಈ ಸಮಾಜದಲ್ಲಿ ರೈತರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ರೈತರು ಕೂಡ ಆಡಂಬರ ಜೀವನ ಬಿಟ್ಟು, ಸರಳ ಜೀವನದ ಮೊರೆ ಹೋಗಬೇಕು. ಇದ್ದುದರಲ್ಲಿ ಜೀವನ ಸಾಗಿಸುವ ಮೂಲಕ ಸಾಲದಿಂದ ಮುಕ್ತರಾಗಿ ಬದುಕುವಂತಾದಾಗ ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದು ಸಲಹೆ ನೀಡಿದರು.
ನಿವೃತ್ತ ನ್ಯಾ.ಎ.ಜೆ.ಸದಾಶಿವ ಮಾತನಾಡಿ, ಸಾಧಕ ರೈತರಷ್ಟೇ ಬೆಳೆ ಬೆಳೆದರೆ ಸಾಲದು. ಅವರ ಸುತ್ತಮುತ್ತ ಇರುವವರಿಗೆ ಪ್ರೇರಕ ಶಕ್ತಿಯಾಗಿ ಅವರನ್ನೂ ಕೂಡ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಕೆ.ನಾರಾಯಣಗೌಡ, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ನಾನು ಚಿತ್ರರಂಗಕ್ಕೆ ಬಂದು ತುಂಬಾ ವರ್ಷವಾಯ್ತು. ವಾಸ್ತವ ಏನೆಂದರೆ ನಾನು ದುಡಿದಿರೋದು ತುಂಬಾ ಕಮ್ಮಿ. ಚಿತ್ರರಂಗಕ್ಕೆ ತುಂಬಾ ದುಡಿದಿದ್ದೇನೆ. ಆದರೂ, ನಮ್ಮ ಮನೆಯಲ್ಲಿ ಅಲ್ಪಸ್ವಲ್ಪ ಇದ್ದರೆ, ಮೂರ್‍ನಾಲ್ಕು ಕಾರುಗಳನ್ನು ತೆಗೆದುಕೊಂಡಿದ್ದೇನೆ. ಅದರಲ್ಲಿ ಪ್ರಿಯವಾಗಿರುವ ಒಂದು ಕಾರನ್ನು ಮಾರಿ ಅದರಿಂದ ಬಂದ ಹಣವನ್ನು ಈ ಟ್ರಸ್ಟ್‌ಗೆ ಕೊಡುತ್ತೇನೆ. ಮಿಕ್ಕಿದ್ದು ಭಗವಂತ ಶಕ್ತಿ ಕೊಟ್ಟರೆ ಮುಂದೆ ನನ್ನ ಕೈಲಾದ ಸಹಾಯ ಮಾಡುತ್ತೇನೆ.
-ಸುದೀಪ್, ಚಿತ್ರ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.