22 ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ
Team Udayavani, Sep 11, 2018, 12:28 PM IST
ಬೆಂಗಳೂರು: ಗಣೇಶೋತ್ಸವದ ಹಿನ್ನೆಲೆಯಲ್ಲಿ ಹಲಸೂರು, ಯಡಿಯೂರು, ಸ್ಯಾಂಕಿ ಸೇರಿ 22 ಕೆರೆಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ನೀಡಲು ಪಾಲಿಕೆ ಮುಂದಾಗಿದೆ.
ಸಣ್ಣ ಮೂರ್ತಿಗಳ ವಿಸರ್ಜನೆಗಾಗಿ ವಲಯದ ಪ್ರಮುಖ ಜಂಕ್ಷನ್‌ಗಳು, ಪ್ರಮುಖ ದೇವಾಲಯಗಳು ಸೇರಿದಂತೆ 282 ಸ್ಥಳಗಳಲ್ಲಿ ಪಾಲಿಕೆಯಿಂದ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 32 ಮೊಬೈಲ್ ಟ್ಯಾಂಕರ್‌ಗಳ ಇರಿಸಲು ಉದ್ದೇಶಿಸಿದ್ದು, 63 ಕಡೆಗಳಲ್ಲಿ ತಾತ್ಕಾಲಿಕ ಟ್ಯಾಂಕರ್ ಸ್ಥಾಪಿಸಲು ಪಾಲಿಕೆ ಮುಂದಾಗಿದೆ.
ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಂಘ-ಸಂಸ್ಥೆಗಳಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಬಿಬಿಎಂಪಿ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರಂತೆ ಬಿಬಿಎಂಪಿ, ಪೊಲೀಸ್, ಅಗ್ನಿಶಾಮಕ ಹಾಗೂ ಬೆಸ್ಕಾಂ ಇಲಾಖೆಗಳಿಂದ ಒಂದೆ ಬಾರಿ ನಿರಾಪೇಕ್ಷಣಾ ಪತ್ರ ಪಡೆಯಬಹುದಾಗಿದೆ.
ವಿಸರ್ಜನಾ ಸ್ಥಳಗಳಲ್ಲಿ ಸಿದ್ಧತೆ: ಕೆರೆ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ಸೂಕ್ತ ಮಾರ್ಗದರ್ಶಕ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಜತೆಗೆ ಪ್ರತಿಯೊಂದು ವಿಸರ್ಜನಾ ಕೇಂದ್ರಗಳಲ್ಲೂ ರಾತ್ರಿ ವೇಳೆ ಪಾಳಿಯಲ್ಲಿ ಹತ್ತು ಮಂದಿ ನುರಿತ ಈಜುಗಾರರು ಹಾಗೂ ಪಾಲಿಕೆಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಆಯಾ ಸ್ಥಳಗಳಲ್ಲಿ ಸೂಕ್ತ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯವಾದ ವಿದ್ಯುತ್ ದ್ವೀಪಗಳು ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಇಂಜಿನಿಯರ್‌ಗಳ ನೇಮಕ: ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ಪೂಜಾ ಸಾಮಗ್ರಿಗಳಾದ ಹೂವು, ಬಾಳೆ ಕಂದು, ತೋರಣ, ಮತ್ತಿತರ ತ್ಯಾಜ್ಯ ಸಂಗ್ರಹಿಸಿ ನಿಗದಿತ ಕಾಂಪ್ಯಾಕ್ಟರ್‌ಗಳ ಮೂಲಕ ಹೊರಗೆ ಸಾಗಿಸಲು ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದ್ದು, ಮೇಲ್ವಿಚಾರಣೆಗಾಗಿ ಎಂಜಿನಿಯರುಗಳನ್ನು ನೇಮಿಸಲಾಗಿದೆ. ಅಲ್ಲದೆ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಅಗತ್ಯವಾದಲ್ಲಿ ಮೋಟಾರು ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗ್ಳ ವ್ಯವಸ್ಥೆ, ಕ್ರೇನ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಡಿಮದ್ದು ನಿಷೇಧ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಿಡಿಮದ್ದು, ಪಟಾಕಿಗಳನ್ನು ಸಿಡಿಸುವುದು ಹಾಗೂ ಧ್ವನಿ ವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ ರಾತ್ರಿ 11 ಗಂಟೆಯ ಬಳಿಕ ಮೂರ್ತಿಗಳ ವಿಸರ್ಜನೆಗೆ ಅವಕಾಶವಿರುವುದಿಲ್ಲ.
ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ದೊರೆಯುವುದೆಲ್ಲಿ?
ಪೂರ್ವ ವಲಯ: ದೊಮ್ಮಲೂರು, ಶಿವಾಜಿನಗರ, ಶಾಂತಿನಗರ, ಜೆಪಿ ನಗರ, ವಸಂತ ನಗರ, ಸಿ ವಿ ರಾಮನ್ ನಗರ, ಮಾರುತಿ ಸೇವಾನಗರ, ಕೆಜಿ ಹಳ್ಳಿ, ಪುಲಿಕೇಶಿನಗರ, ಜೆಸಿ ನಗರ, ಹೆಬ್ಟಾಳ ಹಾಗೂ ಎಚ್‌ಬಿಆರ್ ಬಡಾವಣೆ.
ಪಶ್ಚಿಮ ವಲಯ: ಗೋವಿಂದರಾಜನಗರ, ಮಲ್ಲೇಶ್ವರ, ನಾಗಾಪುರ, ಚಂದ್ರಾ ಬಡಾವಣೆ, ರಾಜಾಜಿನಗರ, ಶ್ರಿರಾಮಮಂದಿರ, ಗಾಂಧಿನಗರ, ಮಹಾಲಕ್ಷ್ಮೀಪುರ, ಕಾಟನ್‌ಪೇಟೆ, ಮತ್ತಿಕೆರೆ, ಜಗಜೀವನರಾಮನಗರ ಹಾಗೂ ಚಾಮರಾಜಪೇಟೆ.
ದಕ್ಷಿಣ ವಲಯ: ವಿಜಯನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಗಿರಿನಗರ, ಪದ್ಮನಾಭನಗರ, ಬನಶಂಕರಿ, ಜಯನಗರ, ಕೆಂಪೇಗೌಡನಗರ, ಬಿಟಿಎಂ ಬಡಾವಣೆ, ಹೊಂಬೇಗೌಡ ನಗರ, ಕೋರಮಂಗಲ ಹಾಗೂ ಜೆಪಿ ನಗರ.
ಬೊಮ್ಮನಹಳ್ಳಿ ವಲಯ: ಅಂಜನಪುರ, ಬೊಮ್ಮನಹಳ್ಳಿ, ಉತ್ತರಹಳ್ಳಿ, ಬೇಗೂರು, ಅರಕೆರೆ, ಎಚ್‌ಎಸ್‌ಆರ್ ಬಡಾವಣೆ.
ಮಹದೇವಪುರ ವಲಯ: ಹೂಡಿ, ವೈಟ್‌ಫೀಲ್ಡ್, ಮಾರತಹಳ್ಳಿ, ಕೆಆರ್‌ಪುರ, ಎಚ್‌ಎಎಲ್ ಹಾಗೂ ಹೊರಮಾವು.
ದಾಸರಹಳ್ಳಿ ವಲಯ: ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯಾ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ.
ಆರ್‌ಆರ್‌ನಗರ ವಲಯ: ಆರ್‌ಆರ್ ನಗರ, ಲಗ್ಗೆರೆ, ಗೊರಗುಂಟೆಪಾಳ್ಯ, ಯಶವಂತಪುರ, ಕೆಂಗೇರಿ ಹೇರೋಹಳ್ಳಿ.
ಯಲಹಂಕ ವಲಯ: ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ಉಪನಗರ, ಯಲಹಂಕ ಹಾಗೂ ಬ್ಯಾಟರಾಯಪುರ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗಳಲ್ಲಿ ಅನುಮತಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.