ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ
Team Udayavani, Oct 28, 2021, 4:56 PM IST
ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಅಂಚೆ ಕಚೇರಿಯಲ್ಲಿ ಇ-ಬೈಕ್‍ಗಳ ಮೂಲಕ ಪೋಸ್ಟ್ ಗಳನ್ನು ವಿತರಣೆ ಮಾಡಿ, ಸಿಲಿಕಾನ್ ಸಿಟಿಯಲ್ಲಿ ಹೊಸತನಕ್ಕೆ ನಾಂದಿ ಹಾಡಲಾಗಿದೆ.
ಬೆಂಗಳೂರಿನ ಜೆ.ಪಿ ನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಎಲೆಕ್ಟ್ರಿಕ್ ಬೈಕ್ ಒದಗಿಸಲಾಗಿದ್ದು, ಪೋಸ್ಟ್ ಮ್ಯಾನ್‍ಗಳು ಅದರ ಮೂಲಕ ಪೋಸ್ಟ್ ಗಳನ್ನು ಡೆಲಿವರಿ ಮಾಡಲಿದ್ದಾರೆ.
ಈ ಅಂಚೆ ಕಚೇರಿಯಲ್ಲಿ ಒಟ್ಟು 15 ಪೋಸ್ಟ್ ಮೆನ್ ಹಾಗೂ ಪೋಸ್ಟ್ ವುಮೆನ್‍ಗಳು 15 ದಿನಗಳಿಂದ ನೀಲಿ ಬಣ್ಣದ ಯುಲು ಬೈಕ್‍ಗಳಲ್ಲಿ ಅಂಚೆಯನ್ನು ಸಂಬಂಧಪಟ್ಟವರಿಗೆ ವಿತರಣೆ ಮಾಡುತ್ತಿದ್ದಾರೆ.
ಅಕ್ಟೋಬರ್ 14ರಂದು ನಾವು ಅಂಚೆ ದಿನಾಚರಣೆಯ ವಾರದ ಪ್ರಯುಕ್ತ ಇ-ಪೋಸ್ಟ್ ಅನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾದರೆ ಮುಂದೆ ಇತರ ಅಂಚೆ ಕಚೇರಿಗಳಿಗೂ ವಿಸ್ತರಿಸಲಿದ್ದೇವೆ. ಎಂದು ಬೆಂಗಳೂರು ವಲಯದ ಜನರಲ್ ಪೋಸ್ಟ್ ಮಾಸ್ಟರ್ ಎಲ್.ಕೆ ಡ್ಯಾಶ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್
ಸದ್ಯ, ಈ ವಾಹನಗಳನ್ನು ರಿಚಾರ್ಜ್ ಮಾಡಲು ಪ್ರತಿದಿನ ಯುಲು ಸಂಸ್ಥೆಗೆ ಕಳುಹಿಸಲಾಗುತ್ತಿದೆ. ಈ ಯೋಜನೆ ಇಂಧನ ಬಳಕೆಯ ದ್ವಿಚಕ್ರ ವಾಹನಕ್ಕೆ ಹೋಲಿಸಿ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ ಅವುಗಳ ಮೂಲಕ ಅಂಚೆಯನ್ನು ವಿತರಣೆ ಮಾಡಲಾಗುವುದು. ಈ ಯೋಜನೆ ಯಶಸ್ವಿಯಾದರೆ ಅಂಚೆ ಕಚೇರಿಯಲ್ಲಿಯೇ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಯುಲು ಸಂಸ್ಥೆ ಹೇಳಿದೆ ಎಂದು ಡ್ಯಾಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.