ಬೆಂಗಳೂರಿನ ನಡುರಸ್ತೆಯಲ್ಲಿ ಮತ್ತೂಂದು ಕೀಚಕ ಚೇಷ್ಟೆ!

Team Udayavani, Jan 8, 2017, 3:45 AM IST

rape-in-public-toilet.jpg

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ರಾಜಧಾನಿಯಲ್ಲಿ ಆರಂಭವಾದ ಲೈಂಗಿಕ ಕಿರುಕುಳದ ಸರಣಿ ಇನ್ನೂ ಮುಂದುವರೆದಿದ್ದು, ಮನೆಗೆ ಹೋಗುತ್ತಿದ್ದ ಯುವತಿಯೊಬ್ಬಳ ಮೇಲೆ ರಸ್ತೆಯಲ್ಲೇ ದೌರ್ಜನ್ಯ ನಡೆಸಲು ದುಷ್ಕರ್ಮಿಗಳು ಯತ್ನಿಸಿದ ಮತ್ತೂಂದು ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

ಎಂ.ಜಿ.ರಸ್ತೆಯಲ್ಲಿ ಡಿ.31ರಂದು ನಡೆದಿದೆ ಎನ್ನಲಾದ ಸಾಮೂಹಿಕ ಲೈಂಗಿಕ ದೌರ್ಜನ್ಯ, ನಂತರ ಕಮ್ಮನಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಪ್ರಕರಣಗಳ ಬಳಿಕ ಇದೀಗ ಬಾಣಸವಾಡಿಯಲ್ಲಿ ಯುವತಿಯೊಬ್ಬಳ ಮೇಲೆ ದೌರ್ಜನ್ಯಕ್ಕೆ ಯತ್ನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ನಾಲ್ಕು ದಿನಗಳ ಹಿಂದೆ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಬಾಣಸವಾಡಿ ಹತ್ತಿರದ ಜಿಮ್‌ನಿಂದ ರಾತ್ರಿ ಮನೆಗೆ ಮರಳುವಾಗ ಇಬ್ಬರು ದುಷ್ಕರ್ಮಿಗಳು ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಇದರಿಂದ ಬೆದರಿದ ಯುವತಿ ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದಂತೆ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಅದೇ ದಿನ ಯುವತಿ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದು, ಶನಿವಾರ ಬೆಳಕಿಗೆ ಬಂದಿದೆ.

ಜಿಮ್‌ನಿಂದ ಹೊರ ಬಂದಾಗ ಕಿರುಕುಳ:
ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸಂತ್ರಸ್ತ ಯುವತಿ ಬಾಬುಸಾಪಾಳ್ಯ ಸಮೀಪ ವಾಸವಿದ್ದಾರೆ. ಪ್ರತಿದಿನ ಕೆಲಸ ಮುಗಿದ ನಂತರ ಅವರು ಜಿಮ್‌ನಲ್ಲಿ ಒಂದು ತಾಸಿಗೂ ಹೆಚ್ಚು ವಕೌìಟ್‌ ಮಾಡಿ ಮನೆಗೆ ತೆರಳುತ್ತಿದ್ದರು. ಅದೇ ರೀತಿ ಜ.4ರಂದು ಕೂಡ ಜಿಮ್‌ಗೆ ಬಂದಿದ್ದ ಆಕೆ ರಾತ್ರಿ 9 ಗಂಟೆ ವೇಳೆ ಮನೆಗೆ ಮರಳಲು ಕ್ಯಾಬ್‌ ಬುಕ್‌ ಮಾಡಿದ್ದರು. ವ್ಯಾಯಾಮ ಮುಗಿಸಿದ ನಂತರ ಜಿಮ್‌ನಿಂದ ಹೊರಬಂದು ರಸ್ತೆ ಬದಿ ಯುವತಿ ಕ್ಯಾಬ್‌ಗ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಆಕೆ ಧರಿಸಿದ್ದ ಟಿ-ಶರ್ಟ್‌ಗೆ ಕೈಹಾಕಿ ಎಳೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಆತಂಕಗೊಂಡ ಆಕೆ ರಕ್ಷಣೆಗೆ ಕೂಗಿಕೊಳ್ಳುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಈ ಚೀರಾಟದಿಂದ ಭಯಗೊಂಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಯುವತಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಾಸಣವಾಡಿ ಠಾಣೆಯಲ್ಲಿ ಐಪಿಸಿ 354 ರಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿದ ಆಕ್ರೋಶ: ಎಂ.ಜಿ.ರಸ್ತೆ, ಕಮ್ಮನಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ರಾಷ್ಟ್ರ ಮಟ್ಟದಲ್ಲಿ ತೀವ್ರ ಜನಾಕ್ರೋಶ ಎದುರಿಸುತ್ತಿರುವ ಬೆಂಗಳೂರು ಪೊಲೀಸರನ್ನು ಈಗ ಬಾಣಸವಾಡಿ ಸಮೀಪ ನಡೆದಿರುವ ಮತ್ತೂಂದು ಘಟನೆಯೂ ಟೀಕೆಗಳಿಗೆ ಗುರಿಯಾಗಿಸಿದೆ.

ರಾಜಧಾನಿಯ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂಬ ಧ್ವನಿ ಜನರಿಂದ ಮೊಳಗಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖಾ ಪ್ರಗತಿಯ ಮಾಹಿತಿ ಪಡೆಯಲು ಠಾಣೆಗೆ ಖುದ್ದು ನಗರ ಪೊಲೀಸ್‌ ಆಯುಕ್ತರು ತೆರಳಿದ್ದಾರೆ.

ಟಾಪ್ ನ್ಯೂಸ್

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Kundapura: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

Kundapura: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

Exam

PDA; ನಾಳೆ ಮುಖ್ಯ ಪರೀಕ್ಷೆ

ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ: ರೇವಣ್ಣ

H.D. Revanna: ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ

JDS: ಶಾಸಕ ರೇವಣ್ಣ ವಿರುದ್ಧದ ಚುನಾವಣ ಅಕ್ರಮ ವಿಚಾರಣೆ ಮುಂದಕ್ಕೆ

JDS: ಶಾಸಕ ರೇವಣ್ಣ ವಿರುದ್ಧದ ಚುನಾವಣ ಅಕ್ರಮ ವಿಚಾರಣೆ ಮುಂದಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

1-ewwwe

KTR ವಿರುದ್ಧದ ಪೋಸ್ಟ್‌ ತೆಗೆಯಿರಿ: ಸಚಿವೆಗೆ ಕೋರ್ಟ್‌

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.