ನ.10ರ ಜಿಎಸ್‌ಟಿ ಸಭೆಯಲ್ಲಿ ಸರಕುಗಳ ತೆರಿಗೆ ಇಳಿಕೆ ಸಾಧ್ಯತೆ
Team Udayavani, Oct 29, 2017, 6:40 AM IST
ಬೆಂಗಳೂರು: “ಮುಂದಿನ ತಿಂಗಳ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಯ್ದ ಸರಕು ಸೇವೆಗಳ ತೆರಿಗೆ ಪ್ರಮಾಣ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಜಿಎಸ್‌ಟಿ ನೆಟ್‌ವರ್ಕ್‌ಅನ್ನು ಬಳಕೆದಾರ ಸ್ನೇಹಿಯನ್ನಾಗಿಸಿ ಸರಳಗೊಳಿಸುವಂತೆ ಇನ್ಫೋಸಿಸ್ ಸಂಸ್ಥೆಗೆ ಸೂಚಿಸಲಾಗಿದೆ’ ಎಂದು ಜಿಎಸ್‌ಟಿ ನೆಟ್‌ವರ್ಕ್‌ನ ಸಚಿವರ ತಂಡದ ಮುಖ್ಯಸ್ಥರಾದ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದರು.
ಶನಿವಾರ ಸಮಿತಿಯ 3ನೇ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, “ಜಿಎಸ್‌ಟಿಯಡಿ ವ್ಯವಹರಿಸುವಲ್ಲಿ ಎದುರಾಗಿರುವ ಸಮಸ್ಯೆ, ತಾಂತ್ರಿಕ ಸವಾಲು, ಅನುಷ್ಠಾನದಲ್ಲಿನ ದೋಷಗಳ ಬಗ್ಗೆ ಸಲ್ಲಿಕೆಯಾಗುವ ಮಾಹಿತಿ, ಸಲಹೆಗಳನ್ನು ಜಿಎಸ್‌ಟಿ ಮಂಡಳಿ ಸಭೆಯ ಗಮನಕ್ಕೆ ತರಲಾಗುತ್ತಿದೆ. ಅ.6ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಲವು ಸರಕುಗಳ ತೆರಿಗೆ ಪ್ರಮಾಣ ಇಳಿಕೆ ಮಾಡಲಾಗಿದೆ. ಅದೇ ರೀತಿ ನ.10ರಂದು ನಡೆಯಲಿರುವ ಸಭೆಯಲ್ಲಿ ಆಯ್ದ ಸರಕು, ಸೇವೆಗಳ ತೆರಿಗೆ ಪ್ರಮಾಣ ಶೇ.28ರಿಂದ ಶೇ.18ಕ್ಕೆ ಇಳಿಕೆ ಸೇರಿ ನಾನಾ ಹಂತದ ತೆರಿಗೆ ಪರಿಷ್ಕರಣೆ ಸಾಧ್ಯತೆ ಇದೆ ಎಂದು ಹೇಳಿದರು.
ಈ ಹಿಂದೆ ಜಾರಿಯಲ್ಲಿದ್ದ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ತೆರಿಗೆ ವ್ಯವಸ್ಥೆಯಡಿ ಏಕರೂಪದಲ್ಲಿ ಒಗ್ಗೂಡಿಸುವ ಕೆಲಸ ಸಾಕಷ್ಟು ಸವಾಲಿನದ್ದಾಗಿದೆ. ಹಾಗಾಗಿ ನೆಟ್ ವರ್ಕ್‌ಗೆ ಸಂಬಂಧಪಟ್ಟಂತೆ ಸಮಸ್ಯೆ, ಸವಾಲು ವ್ಯಾಪಕವಾಗಿವೆ. ಪ್ರಮುಖವಾದ 47 ತಾಂತ್ರಿಕ ಸವಾಲು, ಸಮಸ್ಯೆಗಳನ್ನು ಗುರುತಿಸಿ ಇದರಲ್ಲಿ 27 ಸವಾಲುಗಳ ನ್ನು ಅ.31ರೊಳಗೆ ಬಗೆಹರಿಸುವಂತೆ ಇನ್ಫೋಸಿಸ್ ಸಂಸ್ಥೆಗೆ ಗಡುವು ನೀಡಲಾಗಿತ್ತು. ಆದರೆ ಅ.28ರವರೆಗೆ 18 ಮಾತ್ರ ಬಗೆಹರಿದಿದ್ದು, ಶೇ.67.7ರಷ್ಟು ಗುರಿ ಸಾಧನೆಯಾದಂತಾಗಿದೆ. ಬಾಕಿಯಿರುವ ತಾಂತ್ರಿಕ ಸವಾಲುಗಳ ಜತೆಗೆ ಇನ್ನೂ ಕೆಲವು ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುವಂತೆಯೂ ಸೂಚಿಸಲಾಗಿದೆ ಎಂದು ವಿವರಿಸಿದರು.ಸಮಿತಿಯಲ್ಲಿರುವ ಸಚಿವ ಕೃಷ್ಣ ಬೈರೇಗೌಡ, ತೆಲಂಗಾಣ ಸಚಿವ ಚೆಲ್ಲಂ ರಾಜೇಂದ್ರ, ಜಿಎಸ್‌ಟಿ ನೆಟ್‌ವರ್ಕ್‌ನ
ಎ.ಬಿ.ಪಾಂಡೆ ಇತರರು ಉಪಸ್ಥಿತರಿದ್ದರು.
ತೆರಿಗೆ ಪಾವತಿಸಿದವರ ಸಂಖ್ಯೆ ಇಳಿಕೆ
ಜುಲೈ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ 56 ಲಕ್ಷ ಮಂದಿ ಜಿಎಸ್‌ಟಿ ತೆರಿಗೆ ಪಾವತಿಸಿದ್ದರೆ, ಆಗಸ್ಟ್ ವಹಿವಾಟಿಗೆ ಸಂಬಂಧಪಟ್ಟಂತೆ 53 ಲಕ್ಷ ಮಂದಿ ತೆರಿಗೆ ಪಾವತಿಸಿದ್ದಾರೆ. ಆದರೆ ಸೆಪ್ಟೆಂಬರ್ ವಹಿವಾಟು ಕುರಿತಂತೆ 45.84 ಲಕ್ಷ ಮಂದಿಯಷ್ಟೇ ತೆರಿಗೆ ಪಾವತಿಸಿದ್ದಾರೆ. ತೆರಿಗೆದಾರರ ಸಂಖ್ಯೆ ಇಳಿಕೆಗೆ ಕಾರಣವಾದ ಅಂಶಗಳನ್ನು ಗುರುತಿಸಿ ಪರಿಶೀಲಿಸುವ ಕಾರ್ಯ ನಡೆದಿದೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದರು. ಜುಲೈ, ಆಗಸ್ಟ್‌ನಲ್ಲಿ ಜಿಎಸ್‌ಟಿ ತೆರಿಗೆಯಿಂದ 15,060 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಅರುಣಾಚಲ ಪ್ರದೇಶ, ರಾಜಸ್ತಾನ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಜುಲೈ, ಆಗಸ್ಟ್ ತಿಂಗಳ ಪರಿಹಾರವಾಗಿ 8698 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ತೆರಿಗೆ ವಿಳಂಬ ಪಾವತಿಗೆ ದಂಡ ವಿಧಿಸುವುದನ್ನು ಈಗಾಗಲೇ ಕೈಬಿಡಲಾಗಿದೆ. 6 ತಿಂಗಳ ನಂತರ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಾಗುವುದು.
– ಸುಶೀಲ್ ಕುಮಾರ್ ಮೋದಿ,
ಜಿಎಸ್‌ಟಿ ನೆಟ್‌ವರ್ಕ್ ಸಚಿವರ ತಂಡದ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.