ಡಾಲರ್ ಹೆಸರಲ್ಲಿ ಖಾಲಿ ಹಾಳೆ ನೀಡಿ ವಂಚನೆ
Team Udayavani, Nov 25, 2021, 9:34 AM IST
Representative Image used
ಬೆಂಗಳೂರು: ಡಾಲರ್‌ನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಕೊಡಲು ಮುಂದಾದ ವ್ಯಕ್ತಿಗೆ ಮಹಿಳೆ ಯೊಬ್ಬರು ಯಾಮಾರಿಸಿ ಸುಮಾರು 98 ಸಾವಿರ ರೂ. ವಂಚನೆ ನಡೆಸಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
ಕುಮಾರ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ವಂಚನೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ತಾನು ಕೆಲಸ ಮಾಡುವ ಜಾಗದಲ್ಲಿ ಕಸ ಗುಡಿಸುವಾಗ ಯುಎಸ್‌ಎ ಮುಖಬೆಲೆಯ 800 ಡಾಲರ್ ನೋಟುಗಳು ಸಿಕ್ಕಿವೆ ಎಂದಿರುವ ಮಹಿಳೆ ತನ್ನ ಬಳಿಯಿದ್ದ ನೋಟುಗಳನ್ನು ಸ್ಥಳೀಯ ನಿವಾಸಿ ಕುಮಾರ್ ಎಂಬಾತನಿಗೆ ತೋರಿಸಿದ್ದಾಳೆ.
ಅದನ್ನು ನೋಡಿದ ಕುಮಾರ್ ಅವರು ಫಾರಿನ್ ಎಕ್ಸ್ ಚೇಂಜ್ ಸೆಂಟರ್ ಗೆ ಹೋಗಿ ಪರಿಶೀಲಿಸಿದ್ದಾರೆ. ಆಗ ಅವು ಅಸಲಿ ನೋಟುಗಳೆಂದು ತಿಳಿದುಬಂದಿದೆ. ಅನಂತರ ಆಕೆ ನನ್ನ ಬಳಿಯಿರುವ ಡಾಲರ್‌ಗಳನ್ನು ಭಾರತೀಯ ನೋಟುಗಳಾಗಿ ಪರಿವರ್ತಿಸಿ 1 ಲಕ್ಷ ರೂ. ನೀಡುವಂತೆ ಕೇಳಿದ್ದಾಳೆ.
ಇದನ್ನೂ ಓದಿ:- ಬೋಲ್ಡ್ ಲುಕ್ ನಲ್ಲಿ ನಿಶ್ವಿಕಾ ನಾಯ್ಡು: ‘ದಿಲ್ ಪಸಂದ್’ ನಲ್ಲಿ ರೊಮ್ಯಾಂಟಿಕ್ ಜೋಡಿ
ಆಕೆಯ ಮಾತನ್ನು ನಂಬಿದ ಕುಮಾರ್ ಮಾತುಕತೆಯಂತೆ ನ.17ರಂದು ಯಶವಂತಪುರಕ್ಕೆ ಹಣದ ಸಮೇತ ಬಂದಿದ್ದು ಬಟ್ಟೆಯಲ್ಲಿ ಸುತ್ತಿದ ವಸ್ತುವನ್ನು ಹಣವೆಂದು ಮಹಿಳೆ ನೀಡಿದ್ದಾಳೆ. ಕುಮಾರ್ 98 ಸಾವಿರ ರೂ. ನೀಡುತ್ತಿದ್ದಂತೆ ವಂಚಕಿ ಕ್ಷಣಾರ್ಧದಲ್ಲಿ ತಲೆಮರೆಸಿ ಕೊಂಡಿದ್ದಾಳೆ. ಕುಮಾರ್ ಬಂಡಲ್ ಬಿಚ್ಚಿ ನೋಡಿದಾಗ ಖಾಲಿ ಹಾಳೆಗಳಿದ್ದು ಮೋಸ ಹೋಗಿರುವುದು ಗೊತ್ತಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.