ವೀರ ಸಾವರ್ಕರ್‌ ಮೇಲ್ಸೇತುವೆ ಲೋಕಾರ್ಪಣೆ

ಸಾವರ್ಕರ್‌ ಹೆಸರು ಸೂಕ್ತ ಎಂದ ಸಿಎಂ ಯಡಿಯೂರಪ್ಪ

Team Udayavani, Sep 9, 2020, 9:52 AM IST

ವೀರ ಸಾವರ್ಕರ್‌ ಮೇಲ್ಸೇತುವೆ ಲೋಕಾರ್ಪಣೆ

ಯಲಹಂಕ: ಯಲಹಂಕದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆಯಲ್ಲಿರುವ ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್‌ ಹೆಸರಿಟ್ಟಿರುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ. ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನವನಗರೋತ್ಥಾನ ಯೋಜನೆಯಡಿ 34ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಸೇತುವೆಗೆ ಸಾವರ್ಕರ್‌ ನಾಮಕರಣ ಮಾಡಿ, ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿ, ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿಗೆ 7,300 ಕೋಟಿ ಅನುದಾನ ಒದಗಿಸಲಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ. ನವ ನಗರೋತ್ಥಾನ, ಸಾಗರೋತ್ಥಾನ ಯೋಜನೆಯಡಿ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳ ಅಭಿ ವೃದ್ಧಿಗೆ ಸರ್ಕಾರ ಆದ್ಯತೆ ನೀಡಲಾಗುತ್ತಿದೆ ಎಂದರು.

ಈ ಅನುದಾನದಲ್ಲಿ ಗ್ರೇಡ್‌ ಸಪರೇಟರ್‌ ನಿರ್ಮಾಣ, ಕೆರೆ ಅಭಿವೃದ್ಧಿ , ರಸ್ತೆ ಹಾಗೂ ಪಾದಚಾರಿ ರಸ್ತೆ, ನೀರುಕಾಲುವೆ, ಬಿಬಿಎಂಪಿಗೆ ಸೇರಿದ ಹೊಸ ಗ್ರಾಮಗಳ ಅಭಿವೃದ್ಧಿ, ಉದ್ಯಾನವನ, ಸ್ಟೇಡಿಯಂ ನಿರ್ಮಾಣ ಇತರ ಕಾಮಗಾರಿ ನಡೆಯಲಿದೆ ಎಂದರು. ಶುಭ್ರ

ಬೆಂಗಳೂರು ಯೋಜನೆಗೆ 999 ಕೋಟಿ: ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರ ಸ್ಮಾರ್ಟ್‌ಸಿಟಿ ಯೋಜನೆಯಡಿ 30ಕಿ.ಮೀ. ಉದ್ದದ ಪ್ರಮುಖ 36 ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳ ಅಡಿಯಲ್ಲಿ 455 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಸಾವರ್ಕರ್‌ ಆತ್ಮಾಹುತಿ ಪುಸ್ತಕವನ್ನು ಓದಬೇಕು ಅದಕ್ಕಾಗಿ ಉದ್ಘಾಟನೆ ದಿನದಂದೆ 5ಸಾವಿರ ಜನರಿಗೆ ಹಂಚಲಾಗಿದೆ ಎಂದರು.

ಎರಡು ಭಾರಿ ಮುಂದೂಡಿಕೆ: ಮೇಲ್ಸೇತುವೆಗೆ ಮೇ.28ರಂದೇ ಸಾವರ್ಕರ್‌ ಹೆಸರಿಡಲು ದಿನ ನಿಗದಿಪಡಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷಗಳು, ಸಂಘಟನೆಗಳು ಅಡ್ಡಿಯುಂಟು ಮಾಡಿದ್ದವು. ಜತೆಗೆ ಗೆಜೆಟ್‌ ನೋಟಿಫಿಕೇಷನ್‌ ಘೋಷಿಸದ ಕಾರಣ ಸರ್ಕಾರ ಕಾರ್ಯಕ್ರಮ ರದ್ದುಮಾಡಿತ್ತು. ನಿಯಮದಂತೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡ ಮೇಲೆ ಹೆಸರಿಡಲು ದಾರಿ ಸುಗಮವಾಯಿತು. ಬಳಿಕ ಸೆ. 1ಕ್ಕೆ ಮಾಜಿ ರಾಷ್ಟ್ರಪತಿಪ್ರಣಬ್‌ ಮುಖರ್ಜಿ ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮತ್ತೂಮ್ಮೆ ಮುಂದೂಡಲಾಗಿತ್ತು. ವಿವಿಧ ರಸ್ತೆಗಳಿಗೆ ಮಾರ್ಗ: 800 ಮೀ. ಉದ್ದದ ನಾಲ್ಕು ಪಥದ ಮೇಲ್ಸೆತುವೆ ರಸ್ತೆ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಯಶವಂತಪುರ, ಜಾಲಹಳ್ಳಿ ವಿದ್ಯಾರಣ್ಯಪುರ ಕಡೆಯಿಂದ ದೊಡ್ಡಬಳ್ಳಾಪುರ ಹಾಗೂ ಏರ್‌ಪೋರ್ಟ್‌ ಕಡೆಯ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ.

ಟಾಪ್ ನ್ಯೂಸ್

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.