Bangalore: ಆಕಳುಗಳ ಮೇಲೆ ಆ್ಯಸಿಡ್ ಎರಚಿದ ಅಜ್ಜಿ!
Team Udayavani, Dec 12, 2023, 12:13 PM IST
ಬೆಂಗಳೂರು: ಮನೆಯ ಬಳಿ ಮೇಯಲು ಬಂದ 9 ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದ ವೃದ್ಧೆಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋದೇವನಹಳ್ಳಿಯ ಗುಣಿ ಅಗ್ರಹಾರ ಗ್ರಾಮದ ನಿವಾಸಿ ಜೋಸೆಫ್ ಗ್ರೇಸ್ (76) ಬಂಧಿತ ವೃದ್ಧೆ. ರಾಜಣ್ಣ, ನಾಗಣ್ಣ, ಪ್ರಕಾಶ್, ಗಂಗಮ್ಮ, ಕೃಷ್ಣ, ಶ್ರೀರಾಮ, ಮದನ್ ಎಂಬುವರಿಗೆ ಸೇರಿದ 9 ಹಸುಗಳಿಗೆ ಗಾಯಗಳಾಗಿವೆ.
ಸೋದೇವನ ಹಳ್ಳಿಯ ಗುಣಿ ಅಗ್ರ ಹಾರ ಗ್ರಾಮದ ನಿವಾಸಿ ಜೋಸೆಫ್ ಗ್ರೇಸ್ ಒಂಟಿಯಾಗಿ ವಾಸಿಸು ತ್ತಿದ್ದರು. ಅವರ ಮನೆ ಮುಂದೆ ಒಂದಿಷ್ಟು ಖಾಲಿ ಜಾಗವಿತ್ತು. ಅಲ್ಲಿಗೆ ಪ್ರತಿದಿನ ಒಂದಷ್ಟು ಹಸುಗಳು ಹುಲ್ಲು ಮೇಯಲು ಬರುತ್ತಿದ್ದವು. ಹಲವು ದಿನಗಳಿಂದ ತಮ್ಮ ಖಾಸಗಿ ಜಾಗಕ್ಕೆ ಪ್ರವೇಶಿಸಿದ ಹಸುಗಳನ್ನು ಜೋಸೆಫ್ ಗ್ರೇಸ್ ಓಡಿಸುತ್ತಿದ್ದಳು. ಹಸುಗಳು ಮತ್ತೆ ಹುಲ್ಲು ಮೇಯಲು ಇದೇ ಪ್ರದೇಶಕ್ಕೆ ಬರಲಾರಂಭಿಸಿದ್ದವು. ಇದರಿಂದ ಆಕ್ರೋಶ ಗೊಂಡ ವೃದ್ಧೆ ಕಳೆದ 15 ದಿನಗಳ ಹಿಂದೆ ಮನೆ ಯಲ್ಲಿದ್ದ ಟೈಲ್ಸ್, ಸ್ನಾನದ ಕೋಣೆ ಶುಚಿ ಗೊಳಿಸುವ ಆ್ಯಸಿಡ್ ಅನ್ನು 9 ಹಸುಗಳ ಮೇಲೆ ಎರಚಿ ದ್ದಳು. ಪರಿಣಾಮ ಹಸುಗಳ ಚರ್ಮ ಕಿತ್ತು ಬಂದು ಅರಚುತ್ತಾ ಓಡಿ ಹೋಗಿದ್ದವು. ಎರಡು ದಿನಗಳ ಬಳಿಕ ಹಸು ಮಾಲೀಕರು ಹಸುಗಳ ಮೈ ಯಲ್ಲಿ ಚರ್ಮ ಕಿತ್ತು ಬಂದಿರುವುದನ್ನು ಗಮನಿಸಿ ಯಾವುದೋ ಕಾಯಿಲೆಗೆ ಒಳಗಾಗಿದೆ ಎಂದು ಭಾವಿಸಿ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದರು.
ತಪ್ಪೊಪ್ಪಿಕೊಂಡ ವೃದ್ಧೆ: ನಮ್ಮ ಖಾಸಗಿ ಜಾಗದಲ್ಲಿ ಹಸುಗಳನ್ನು ಬಿಡುವುದು ಸರಿಯಲ್ಲ. ಹಲವು ದಿನಗಳಿಂದ ನಮ್ಮ ಜಾಗಕ್ಕೆ ಪ್ರವೇಶಿಸಿದ ಹಸುಗಳನ್ನು ಓಡಿಸಿ ನನಗೆ ಸಾಕಾಗಿ ಹೋಗಿತ್ತು. ಹೀಗಾಗಿ ಬಾತ್ ರೂಂ ಶುಚಿಗೊಳಿಸಲು ಬಳಸುವ ಆ್ಯಸಿಡ್ ಅನ್ನು ಹಸುಗಳ ಮೇಲೆ ಎರಚಿದ್ದೇನೆ ಎಂದು ಪೊಲೀಸರ ವಿಚಾರಣೆ ವೇಳೆ ಗ್ರೇಸಿ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಇದೀಗ ಸೋಲದೇವನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಣ್ಣೀರು ಹಾಕಿದ ಹಸು ಮಾಲೀಕರು: ಮೊದಲಿಗೆ ಹಸುಗಳಿಗೆ ಚರ್ಮ ಸಂಬಂಧಿತ ಕಾಯಿಲೆ ಬಂದಿರಬಹುದು ಎಂದುಕೊಂಡಿದ್ದೆವು. ಆ್ಯಸಿಡ್‌ನಿಂದ ಚರ್ಮ ಸುಟ್ಟ ಜಾಗದಲ್ಲಿ ಇನ್‌ಫೆಕ್ಷನ್ ಆಗಿದೆ. ಮುಂದೆ ಇದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸ ಬೇಕಿದೆ. ಸುಟ್ಟ ಗಾಯಗಳಿಂದಾಗಿ ಸರಿಯಾಗಿ ಹಾಲು ಕೊಡುತ್ತಿಲ್ಲ. ನೋವಿನಿಂದಾಗಿ ನಮ್ಮ ಹಸು ಗಳು ರೋದಿಸುತ್ತಿವೆ. ನ್ಯಾಯ ಕೊಡಿಸಿ ಎಂದು ಹಸುಗಳು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.
ವೃದ್ಧೆ ಸಿಕ್ಕಿ ಬಿದ್ದಿದ್ದು ಹೇಗೆ?:
ಭಾನುವಾರ ಸಂಜೆ ಜೋಸೆಫ್ ಗ್ರೇಸ್ ಮನೆ ಮುಂದಿನ ಖಾಲಿ ಜಾಗದಲ್ಲಿದ್ದ ಹುಲ್ಲುಗಳಿಗೆ ಯಾವುದೋ ರಾಸಾಯನಿಕ ಸಿಂಪಡಿಸಿದ್ದರು. ಆ ವೇಳೆ ಹುಲ್ಲು ಸುಟ್ಟು ಹೋಗಿತ್ತು. ಇದನ್ನು ಸ್ಥಳೀಯ ನಿವಾಸಿಗಳು ಗಮನಿಸಿದ್ದರು. ಈ ಬಗ್ಗೆ ವೃದ್ಧೆಯ ಬಳಿ ಹೋಗಿ ವಿಚಾರಿಸಿದಾಗ ಇಲ್ಲಿಗೆ ಪ್ರತಿದಿನ ಹಸುಗಳು ಹುಲ್ಲು ಮೇಯಲು ಬರುತ್ತವೆ. ಹೀಗಾಗಿ ಹುಲ್ಲಿಗೆ ಆ್ಯಸಿಡ್ ಹಾಕಿದ್ದೇನೆ. 15 ದಿನಗಳ ಹಿಂದೆ ಹಸುಗಳ ಮೇಲೂ ಆ್ಯಸಿಡ್ ಎರಚಿದ್ದೆ ಎಂದು ಹೇಳಿದ್ದರು. ಈ ಸಂಗತಿಯನ್ನು ಸ್ಥಳೀಯರು ಹಸುಗಳ ಮಾಲೀಕರ ಗಮನಕ್ಕೆ ತಂದಿದ್ದರು. ತಮ್ಮ ಹಸುಗಳ ಮೈಗೆ ಹೇಗೆ ಗಾಯವಾಗಿದೆ ಎಂಬ ಚಿಂತೆಯಲ್ಲಿದ್ದ ಮಾಲೀಕರಿಗೆ ಇದು ಜೋಸೆಫ್ ಗ್ರೇಸ್ ಕೃತ್ಯ ಎಂಬುದು ದೃಢಪಟ್ಟಿತ್ತು. ಕೂಡಲೇ ಸೋಲದೇವನಹಳ್ಳಿ ಠಾಣೆಗೆ ಬಂದು ವೃದ್ಧೆಯ ಕೃತ್ಯ ವಿವರಿಸಿ ಆಕೆಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಜೋಸೆಫ್ ಗ್ರೇಸ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಹಸುಗಳ ಆಕ್ರಂದನ ಕೇಳ್ಳೋರ್ಯಾರು?:
ಗಾಯಗೊಂಡ ಹಸುಗಳು ನೋವಿನಿಂದ ನರಳಾಡುತ್ತಿವೆ. ಮೈ ಮೇಲಿನ ಗಾಯಕ್ಕೆ ಸರಿಯಾಗಿ ಮೇಯಲೂ ಆಗದೇ, ಆಹಾರ ತಿನ್ನಲು ಆಗದೇ ಒದ್ದಾಡುತ್ತಿದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಅಗತ್ಯವಿದೆ. ಕೆಲವು ಹಸುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಕ್ರಿಮಿ, ಕೀಟಗಳು ಗಾಯಗಳ ಮೇಲೆ ತಾಗಿ ಇನ್ನಷ್ಟು ಸ್ಥಂದಿಗª ಪರಿಸ್ಥಿತಿಯಲ್ಲಿದೆ. ಮತ್ತೂಂದೆಡೆ ಈ ವಿಚಾರ ತಿಳಿದ ಸ್ಥಳೀಯರು, ಸಾರ್ವಜನಿಕರು ವೃದ್ಧೆಯ ಅಮಾನವೀಯ ಕೃತ್ಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಹಸುಗಳು ಮೇಯಲು ಬಂದಾಗ ಅವುಗಳ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಿರುವುದು ತಪ್ಪು ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.