ಪತ್ನಿ ಜತೆ ಅಕ್ರಮ ಸಂಬಂಧ: ಸ್ನೇಹಿತನ ಕೊಲೆ
Team Udayavani, Feb 10, 2022, 11:58 AM IST
ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಆಟೋ ಚಾಲಕ ನೊಬ್ಬ ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯ ನರಸಿಂಹಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.
ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ್ ಅಲಿಯಾಸ್ ಕುಳ್ಳ ವಿಶ್ವ(39) ಕೊಲೆಯಾದ. ಕೃತ್ಯ ಎಸಗಿದ ಆತನ ಸ್ನೇಹಿತ ಆಟೋ ಚಾಲಕ ರವಿಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ರವಿಕುಮಾರ್ ಪತ್ನಿ ಗಾಯತ್ರಿ ಜತೆ ವಿಶ್ವನಾಥ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋ ಪದ ಮೇಲೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ. ವಿಶ್ವನಾಥ್ ವಿರುದ್ಧ ನಂದಿನಿಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ನಂದಿನಿಲೇಔಟ್‌ನ ನರಸಿಂಹಸ್ವಾಮಿ ಲೇಔಟ್ ನಿವಾಸಿ ಆಟೋ ಚಾಲಕ ರವಿಕುಮಾರ್ ಹಾಗೂ ಕೊಲೆಯಾದ ವಿಶ್ವನಾಥ್ ಸ್ನೇಹಿತರಾಗಿದ್ದಾರೆ. ವಿಶ್ವನಾಥ್ ಕೌಟುಂಬಿಕ ವಿಚಾರ ಸಂಬಂಧ ಪತ್ನಿ, ಇಬ್ಬರು ಮಕ್ಕಳನ್ನು ನಾಲ್ಕು ವರ್ಷಗಳಿಂದ ಬಿಟ್ಟು ಪ್ರತ್ಯೇಕವಾಗಿ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದಾನೆ. ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ರವಿಕುಮಾರ್ ಕೂಡ ಗಾಯತ್ರಿಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಈ ಮಧ್ಯೆ ರವಿಕುಮಾರ್ ಮನೆಗೆ ಬರುತ್ತಿದ್ದ ವಿಶ್ವನಾಥ್, ಆತನ ಪತ್ನಿ ಗಾಯತ್ರಿ ಜತೆ ಸಲುಗೆ ಬೆಳೆಸಿಕೊಂಡಿದ್ದ. ಮತ್ತೂಂದೆಡೆ ಆಕೆ ಕೂಡ ಮದ್ಯ ವ್ಯಸನಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕುಮಾರ್ ಇಲ್ಲದ ವೇಳೆಯಲ್ಲಿ ಆಕೆ ಜತೆ ಆತ ಹೆಚ್ಚು ಸಲುಗೆಯಿಂದ ಇರುತ್ತಿದ್ದ. ಈ ವಿಚಾರ ತಿಳಿದ ರವಿಕುಮಾರ್, ಸ್ನೇಹಿತ ಮತ್ತು ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರು ಬದಲಾಗಿರಲಿಲ್ಲಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಸಾರ್ವಜನಿಕವಾಗಿ ಕೊಲೆ: ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರವಿಕುಮಾರ್ ಮನೆಗೆ ಬಂದ ವಿಶ್ವ ನಾಥ್, ಮದ್ಯದ ಅಮಲಿನಲ್ಲಿದ್ದ ಗಾಯತ್ರಿ ಜತೆ ಮಾತನಾಡುತ್ತಿದ್ದ. ಆಟೋ ಬಾಡಿಗೆಗೆ ಹೊರಗಡೆ ಹೋಗಿದ್ದ ರವಿಕುಮಾರ್ ಕೂಡ ಅದೇ ವೇಳೆ ಬಂದಿದ್ದು, ಇಬ್ಬರಿಗೂ ಇದೇ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು.ನಂತರ ಹೊರಗಡೆ ಬಂದು ವಾಗ್ವಾದ ನಡೆಸುತ್ತಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿದ್ದು, ಚಾಕು ಹಾಗೂ ಬ್ಲೇಡ್‌ನಿಂದ ವಿಶ್ವನಾಥ್‌ನ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸಂಜೆ ವೇಳೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.