ಮಿಶ್ರ ಕಸ ಸುರಿಯುವ ಮಿಟ್ಟಗಾನಹಳ್ಳಿ ಭೂಭರ್ತಿಯಲ್ಲಿ ಆಕಸ್ಮಿಕ ಬೆಂಕಿ
Team Udayavani, Mar 21, 2021, 9:02 PM IST
ಬೆಂಗಳೂರು: ನಗರದ ಮಿಶ್ರ ಕಸ ಸುರಿಯುವ ಮಿಟ್ಟಗಾನಹಳ್ಳಿ ಭೂಭರ್ತಿಯಲ್ಲಿ ಭಾನುವಾರ ಸಂಜೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ನಗರದಲ್ಲಿ ಕಸ ವಿಲೇವಾರಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನಗರದಲ್ಲಿ ಹಸಿಕಸ ಸಂಸ್ಕರಣಾ ಘಟಕಗಳಿಗೆ ಸಾಗಾಣಿಕೆ ಆಗುವ ಹಸಿಕಸ ಹೊರತುಪಡಿಸಿ, ಮಿಶ್ರಕಸ ಸುರಿಯಲು ಇರುವ ಏಕೈಕ ಭೂಭರ್ತಿ (ಕ್ವಾರಿ) ಇದಾಗಿದೆ. ಭಾನುವಾರ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲಿನ ಒಣಗಿದ ಗಿಡ ಗಂಟಿಗಳು ಮಾತ್ರ ಬೆಂಕಿಗಾಹುತಿಯಾಗಿವೆ.
ಸಂಜೆ ನಾಲ್ಕು ಗಂಟೆ ವೇಳೆಗೆ ಭೂಭರ್ತಿ ಕ್ವಾರಿಯ ಬಳಿ ಒಣಗಿದ ಗಿಡಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ಹೆಚ್ಚಾಗಿದ್ದ ಕಾರಣ ಬೆಂಕಿ ಹೆಚ್ಚಾಗಿ ಆವರಸಿದ್ದು, ಅದನ್ನು ತಕ್ಷಣ ನಂದಿಸಲಾಗಿದೆ. ಆದರೆ, ಭೂಭರ್ತಿ ಮಾಡಲಾದ ತ್ಯಾಜ್ಯಕ್ಕೆ ಬೆಂಕಿ ಕಾಣಿಸಿಕೊಂಡಿಲ್ಲ. ಇನ್ನು ಭೂ ಭರ್ತಿ ಮಾಡಲಾದ ತ್ಯಾಜ್ಯವನ್ನು ಬೆಳ್ಳೂರು ಕ್ವಾರಿಯಂತೆ ತೆರೆದಿಡದೇ, ತ್ಯಾಜ್ಯದ ಮೇಲೆ 2 ಅಡಿ ಎತ್ತರದಷ್ಟು ಮಣ್ಣು ಮುಚ್ಚಲಾಗುತ್ತದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಪಾಲಿಕೆ ಘನ ತ್ಯಾಜ್ಯ ವಿಭಾಗದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಹೆಚ್ಚಳ ಹಿನ್ನೆಲೆ: ಹೋಳಿ ಆಚರಣೆಗೆ ನಿರ್ಬಂಧ ಹೇರಿದ ಒಡಿಶಾ ಸರ್ಕಾರ
ನಗರದಲ್ಲಿ ಶನಿವಾರ ಉತ್ಪತ್ತಿಯಾದ ಮಿಶ್ರಕಸವನ್ನು ಬಹುತೇಕ ಭಾನುವಾರ ವಿಲೇವಾರಿ ಮಾಡಲಾಗಿದೆ. ಸೋಮವಾರದ ಬೆಳಗ್ಗೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದೆ ಇದ್ದಲ್ಲಿ, ನಗರದಲ್ಲಿ ಭಾನುವಾರ ಉತ್ಪತ್ತಿ ಆಗುವ ಮಿಶ್ರಕಸ ವಿಲೇವಾರಿ ತೊಡಕಾಗಲಿದ್ದು, ನಗರದಲ್ಲಿ ಕಸ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.