ಇಂಟರ್‌ನೆಟ್ ಪ್ರೇರಣೆ ಪಡೆದು ಟೆಕ್ಕಿ ಆತ್ಮಹತ್ಯೆ
Team Udayavani, Mar 22, 2021, 11:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಅಮೆಜಾನ್ ಕಂಪನಿ ಉದ್ಯೋಗಿಯೊಬ್ಬ ಯುಟ್ಯೂಬ್ ನೋಡಿ ನೈಟ್ರೋಜನ್ ಗ್ಯಾಸ್ ಅನ್ನು ಆಕ್ಸಿಜನ್ ಮಾಸ್ಕ್ ಮೂಲಕ ತನ್ನ ಮೂಗಿಗೆ ಹಾಗೂ ಬಾಯಿಗೆ ತೆಗೆದುಕೊಂಡು ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಕೊಂಡು ಆತ್ಮಹತ್ಯೆಗೀಡಾದ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ.
ಮಹದೇವಪುರ ನಿವಾಸಿ ಜೀವನ್ ಅಂಬಟೆ (29) ಮೃತವ್ಯಕ್ತಿ. ಮಾ.13ರಂದು ಮಹದೇವಪುರದ ಲಕ್ಷ್ಮೀ ನಗರ ಲೇಔಟ್‌ಟ್ ಬಾಡಿಗೆ ಮನೆ ಯ ಲ್ಲಿ ಅಸುನೀಗಿದ್ದಾನೆ. ಬೀದರ್ ಮೂಲದ ಜೀವನ್ ಅಂಬಟೆ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಐದು ವರ್ಷಗಳಿಂದ ಅಮೆಜಾನ್ ಕಂಪನಿ ನೌಕರನಾಗಿದ್ದ. ಇತ್ತೀಚೆಗೆ ತಾನೂ ಕೈಗೊಂಡ ಯಾವುದೇ ಕೆಲಸ ಆಗು ತ್ತಿಲ್ಲವೆಂದು ಖನ್ನತೆಗೊಳಗಾಗಿದ್ದ. ಪೋಷಕರು, ಸಂಬಂಧಿಕರು ಬುದ್ಧಿ ಹೇಳಿದ್ದರು. ಆದರೂ ಆತ ಬದಲಾಗದೆ ತಪ್ಪು ನಿರ್ಧಾರಕ್ಕೆ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಯುಟ್ಯೂಬ್ ನೋಡಿ ಆತ್ಮಹತ್ಯೆ: ಆತ್ಮಹತ್ಯೆಗೂ ಮೊದಲು ಜೀವನ್ ಯುಟ್ಯೂಬ್ ಮತ್ತು ಇಂಟರ್ ನೆ ಟ್‌ನಲ್ಲಿ ಸಾಯು ವುದು ಹೇಗೆ? ಎಂದು ಸರ್ಚ್ ಮಾಡಿದ್ದಾನೆ. ಈ ವೇಳೆ ಸಿಲಿಂಡರ್‌ನಲ್ಲಿ ಬರುವ ಮೊನಾ ಕ್ಸೈಡ್ ಮೂಲಕ ಸುಲಭವಾಗಿ ಸಾಯಬಹುದು ಎಂಬ ಅಂಶ ಗೊತ್ತಾಗಿದೆ. ನಂತರ ಸಿಲಿಂಡರ್‌ಗೆ ಬೇಕಾದ ಪೈಪ್ ಹಾಗೂ ಅದಕ್ಕೆ ಅಳವಡಿಸಬೇಕಾದ ಉಪಕರಣಗಳನ್ನು ಖರೀದಿಸಿ , ರೂಮ್‌ನಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತ ಸ್ಥಿತಿಯಲ್ಲಿ ನೈಟ್ರೋಜನ್ ಗ್ಯಾಸ್‌ನ್ನು ಆಕ್ಸಿಜನ್ ಮಾಸ್ಕ್ ಮೂಲಕ ಸೇವಿಸಿ, ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಡೆತ್‌ನೋಟ್ ಪತ್ತೆ: ನಾಲ್ಕೈದು ದಿನಗಳಿಂದ ಮನೆಯಿಂದ ಜೀವನ್ ಹೊರಗಡೆ ಬಂದಿಲ್ಲ. ಮಾ.17ರಂದು ಜೀವನ್ ಕೊಠ ಡಿ ಯಿಂದ ಕೊಳೆತ ವಾಸನೆ ಬರು ತ್ತಿತ್ತು. ಅದನ್ನು ಗಮನಿಸಿದ ಸ್ಥಳೀಯರು ಆತನ ಕೊಠಡಿ ಬಳಿ ಬಂದು ನೋಡಿದಾಗ ಆತ್ಮ ಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕರು ಈತನ ಸಹೋದರ ಪವನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪವನ್ ಈ ಬಗ್ಗೆ ಮಹದೇವಪುರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ಡೆತ್‌ನೋಟ್ ಪತ್ತೆಯಾಗಿತ್ತು. “ನಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ನಾನು ಯಂತ್ರದ ರೀತಿ ಜೀವಿಸಿದ್ದೇನೆ. ಅದು ನನಗೆ ಇಷ್ಟವಿಲ್ಲ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳು ತ್ತಿ ದ್ದೇನೆ.ಇದಕ್ಕೆ ಯಾರೂ ಕಾರಣರಲ್ಲ’ ಎಂದು ಡೆತ್ ನೋಟಿನಲ್ಲಿ ತಿಳಿಸಿದ್ದಾನೆ.
ಸೂಚನಾ ಫಲಕ ಅಂಟಿ ಸಿದ್ದ ಜೀವನ್ :
ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಮಾತ್ರವಲ್ಲದೆ, ಮನೆ ಬಾಗಿಲಿಗೆ ಸೂಚನಾ ಫಲಕವನ್ನೂ ಜೀವನ್ ಅಂಟಿಸಿದ್ದಾನೆ. ಮನೆಯೊಳಗೆ ಯಾರಾ ದರೂ ಏಕಾ ಏಕಿ ಬಂದರೆ ಅನಾಹುತವಾಗಬಹುದು. ಯಾರು ಬಾಗಿಲು ಬಡಿಯಬೇಡಿ ಎಂದು ಬರೆದಿದ್ದಲ್ಲದೆ, ಯಾವ ರೀತಿ ಮನೆಯೊಳಗೆ ಬರಬೇಕು ಎಂದು ಡೈಯಾಗ್ರಾಮ್ ಹಾಕಿದ್ದ. ಮನೆ ಬಾಗಿಲು ತೆಗೆದ ಕೂಡಲೇ ಕಿಟಕಿಗಳನ್ನು ತೆರೆಯಿರಿ. ಯಾರೂ ಕೂಡ ಲೈಟ್ಸ್ ಆನ್ ಮಾಡಬೇಡಿ. ಅದ ರಿಂದ ತೊಂದರೆಯಾಗಬಹುದು ಎಂದು ಬರೆದಿದ್ದ. ಅದರಿಂದ ಸ್ಥಳೀಯರು ಯಾರು ಒಳಗಡೆ ಹೋಗಿಲ್ಲ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.