ಬಲೂನ್ ವ್ಯಾಪಾರ ಮಾಡುತ್ತಿದ್ದ 15 ಬಡ ಕುಟುಂಬಗಳನ್ನು ಎತ್ತಂಗಡಿ ಮಾಡಿದ ಪೊಲೀಸರು
Team Udayavani, May 30, 2021, 4:48 PM IST
ಬೆಂಗಳೂರು : ಬಲೂನ್ ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್‌ಗೇಟ್ ಮೆಟ್ರೋ ಕೆಳಗೆ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳನ್ನು ಪೊಲೀಸರು ನಿನ್ನೆ ರಾತ್ರಿ ಅಲ್ಲಿಂದ ಎತ್ತಂಗಡಿ ಮಾಡಿಸಿದ್ದಾರೆ.
ದಿಕ್ಕು ಕಾಣದ ಆ ವಲಸೆ ಕಾರ್ಮಿಕ ಕುಟುಂಬಗಳು ಸದ್ಯ ಕಾರ್ಡ್ ರೋಡ್‌ನಲ್ಲಿರುವ ದೋಬಿ ಘಾಟ್ ಸಿಗ್ನಲ್‌ನಲ್ಲಿರುವ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಅಲ್ಲಿಂದಲೂ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ.. ಎಲ್ಲಾದರೂ ಹೋಗಿ 15 ದಿನ ಈ ಕಡೆ ಕಾಣಿಸಿಕೊಳ್ಳಬೇಡಿ ಎಂದು ಬೆದರಿಸಿದ್ದಾರೆ.
ಇದನ್ನೂ ಓದಿ: ಸುಳ್ಯ: ಕಳ್ಳನ ಹೊಟ್ಟೆಯಲ್ಲಿತ್ತು 35 ಗ್ರಾಂ ಚಿನ್ನಾಭರಣ
ಈ ಲಾಕ್‌ಡೌನ್, ಕೋವಿಡ್ ಹರಡುವ ಭಯದ ಸಂದರ್ಭದಲ್ಲಿ ಈ ಬಡಕುಟುಂಬಗಳು ಎಲ್ಲಿಗೆ ಹೋಗಲು ಸಾಧ್ಯ? ಅವರು ಮಾಡಿದ ಅಪರಾಧವಾದರೂ ಏನು? ಅವರಿಗೆ ಯಾಕೆ ಈ ಶಿಕ್ಷೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.
ದಯವಿಟ್ಟು ಪೊಲೀಸರು ಮತ್ತು ಬಿಬಿಎಂಪಿಯವರು ಈ ಬಡಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಮಾನವೀಯತೆಯ ದೃಷ್ಟಿಯಿಂದ ಆ ಜನರಿಗೆ ಕೂಡಲೇ ಸರ್ಕಾರದ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಮಳೆ ಗಾಳಿಯಿಂದ ರಕ್ಷಿಸಬೇಕು. ಆಹಾರದ ಕಿಟ್‌ಗಳನ್ನು ಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.