Bengaluru, ಸುತ್ತಲಿನ 3 ಜಿಲ್ಲೆಯಲ್ಲಿ ಅಪಘಾತ ಹೆಚ್ಚಳ
3 ವರ್ಷಗಳಲ್ಲಿ 5335 ಸಾವು; ರಾಜ್ಯದ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.25ರಷ್ಟು ಮಂದಿ ಬೆಂಗ್ಳೂರಿನವರೇ
Team Udayavani, Sep 11, 2024, 5:52 PM IST
ರಾಮನಗರ: ರಾಜಧಾನಿ ಬೆಂಗಳೂರು ಹಾಗೂ ಇದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳು ರಸ್ತೆ ಅಪಘಾತದ ಹಾಟ್‌ಸ್ಪಾಟ್ ಆಗಿದೆಯಾ..?
ಹೌದು ಎನ್ನುತ್ತಿದೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಮಾಹಿತಿ!. ಕಳೆದ 3 ವರ್ಷಗಳ ಆಗಸ್ಟ್‌ವರೆಗಿನ ಅಪಘಾತ ಪ್ರಮಾಣ ಪರಿಶೀಲಿಸಿದರೆ ಬೆಂಗಳೂರು ನಗರ ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಬೆಂ. ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲೇ ಹೆಚ್ಚು ರಸ್ತೆ ಅಪಘಾತ ಸಂಭವಿಸಿವೆ. ಇಡೀ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಈ 4 ಜಿಲ್ಲೆಗಳಲ್ಲೇ ಶೇ.25ರಷ್ಟು ಮಂದಿ ಸಾವಿಗೀಡಾಗಿದ್ದಾರೆ.
3 ವರ್ಷಗಳಲ್ಲಿ 5 ಸಾವಿರ ಮಂದಿ ಸಾವು:
ಬೆಂಗಳೂರು ನಗರ, ರಾಜಧಾನಿಗೆ ಹೊಂದಿಕೊಂಡ 3 ಜಿಲ್ಲೆಗಳಲ್ಲಿ ಕಳೆದ 3 ವರ್ಷದ ಅವಧಿಯ ಆಗಸ್ಟ್ ಅಂತ್ಯಕ್ಕೆ ರಸ್ತೆ ಅವಘಡದಲ್ಲಿ 5,335 ಮಂದಿ ಸಾವಿಗೀಡಾಗಿದ್ದರೆ, ಇಡೀ ರಾಜ್ಯದಲ್ಲಿ ಈ ಅವಧಿಗೆ 23,738 ಮಂದಿ ಮೃತಪಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ವಾಹನ ದಟ್ಟಣೆಯೇ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.
ಕಮಿಷನರೇಟ್‌ಗಳಲ್ಲಿ ಅಪಘಾತ ಹೆಚ್ಚು:
ರಾಜ್ಯದಲ್ಲಿ ಬೆಂಗಳೂರು ನಗರ ಸೇರಿ 6 ಪೊಲೀಸ್ ಕಮಿಷನ ರೇಟ್‌ಗಳಿವೆ. ಕಳೆದ 3 ವರ್ಷಗಳಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿ ಕಮಿಷನರೇಟ್ ಹೊರತುಪಡಿಸಿದರೆ ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ವ್ಯಾಪ್ತಿಯಲ್ಲಿ ಅಪಘಾತ ಪ್ರಮಾಣ ಈ ಹಿಂದಿನ ಸಾಲಿಗಿಂತ ಈ ಬಾರಿ ಹೆಚ್ಚಾಗಿದೆ. ರಾಜ್ಯದ 32 ಪೊಲೀಸ್ ವಿಭಾಗಗಳ ಪೈಕಿ (ರೈಲ್ವೆ, ಕೆಜಿಎಫ್) ಸೇರಿ 15ರಲ್ಲಿ ಅಪಘಾತ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಉಳಿದಂತೆ 17 ವಿಭಾಗಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತರ ಪ್ರಮಾಣ ಕಡಿಮೆಯಾಗಿದೆ.
ಅತಿ ಹೆಚ್ಚು, ಕಡಿಮೆ ಅಪಘಾತದ ವಿವರ:
ಪ್ರಸಕ್ತ ವರ್ಷದ ಆಗಸ್ಟ್ ವರೆಗೆ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸಿದ ವಿಭಾಗಗಳ ಈ ವಿವರ ಇಂತಿದೆ. ಬೆಂಗಳೂರು ನಗರ 564, ತುಮಕೂರು 470, ಬೆಂಗಳೂರು ಗ್ರಾಮಾಂತರ . 454, ಬೆಳಗಾವಿ 450, ಮಂಡ್ಯ 340 ರಸ್ತೆ ಅಪಘಾತಗಳು ಸಂಭವಿಸಿವೆ.
ರಾಜ್ಯದಲ್ಲಿ ತಗ್ಗಿದ ಅಪಘಾತ ಮರಣ ಸಂಖ್ಯೆ
ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗು ವವರ ಸಂಖ್ಯೆ ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕಡಿಮೆಯಾಗಿದೆ. 2022ರಲ್ಲಿ ಆಗಸ್ಟ್‌ವರೆಗೆ 7,996 ಮಂದಿ, 2023ರಲ್ಲಿ ಈ ಸಂಖ್ಯೆ 8,146 ಇತ್ತು. ಈ ವರ್ಷದ ಆಗಸ್ಟ್ ಅಂತ್ಯಕ್ಕೆ 7,596 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 550 ಸಾವಿನ ಪ್ರಮಾಣ ಕಡಿಮೆಯಾಗಿದೆ.
ರಸ್ತೆ ಅಪಘಾತ ಮತ್ತು ಸಾವು ನಿಯಂತ್ರಿಸುವುದು ಹಾಗೂ ರಸ್ತೆ ಸುರಕ್ಷತೆ ಖಚಿತಪಡಿಸುವುದು ಸವಾಲಿನ ಕೆಲಸ. ಪೊಲೀಸ್ ಅಧಿಕಾರಿಗಳು ಅಪಘಾತದಿಂದಾಗುವ ಸಾವಿನ ಪ್ರಮಾಣ ತಗ್ಗಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಅವರಿಗೆ ಅಭಿನಂದನೆ.
-ಅಲೋಕ್‌ಕುಮಾರ್, ಎಡಿಜಿಪಿ ರಸ್ತೆ ಸುರಕ್ಷತೆ ಮತ್ತು ಸಂಚಾರ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.