ಡಾ.ಅಂಬೇಡ್ಕರ್ ಸಮಗ್ರ ಸಂಪುಟಕ್ಕೆ ಹೆಚ್ಚಿದ ಬೇಡಿಕೆ
ಸಂಪುಟದ 6ನೇ ಮುದ್ರಣಕ್ಕೆ ಟೆಂಡರ್ ಕರೆದ ಪ್ರಾಧಿಕಾರ
Team Udayavani, Mar 22, 2021, 12:04 PM IST
ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟಕ್ಕೆ ಸಾಹಿತ್ಯವಲಯದಿಂದ ಬೇಡಿಕೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್ “ಬರೆಹಗಳು ಮತ್ತು ಭಾಷಣಗಳು’ ಕುರಿತ 22 ಸಂಪುಟಗಳಮರು ಮುದ್ರಣಕ್ಕೆ ಕುವೆಂಪು ಭಾಷಾ ಭಾರತಿಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಐದುಮುದ್ರಣಗಳನ್ನು ಕಂಡಿರುವ ಈ ಸಂಪುಟ ಆರನೇ ಮುದ್ರಣಕ್ಕೆ ಸಿದ್ಧವಾಗಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಲವು ರೀತಿಯ ಅನುವಾದಿತ ಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡುತ್ತಿದೆ.ಆದರೆಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳುಮತ್ತು ಭಾಷಣಗಳು ಸಂಪುಟಗಳಿಗೆ ಹೆಚ್ಚುಬೇಡಿಕೆಯಿದೆ. ಈಗಾಗಲೇ ಪ್ರಕಟವಾದ ಎಲ್ಲಾಪುಸ್ತಕಗಳು ಮಾರಾಟವಾಗಿದ್ದು, ಆ ಸಂಪುಟಗಳಿಗಾಗಿ ಓದುಗ ವಲಯದಿಂದ ಬೇಡಿಕೆಉಂಟಾಗಿದೆ. ಆ ಹಿನ್ನೆಲೆಯಲ್ಲಿ ಆರನೇ ಮುದ್ರಣಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳೂ ನಡೆದಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಸ್ತಕದ ಮರುಮುದ್ರಣದ ಕುರಿತ ಕಾಯಕ ಶುರುವಾಗಿದೆ. ಟೆಂಡರ್ ಪ್ರಕ್ರಿಯೆಗೂ ಚಾಲನೆನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲ್ಲಿದ್ದು,ಶೀಘ್ರದಲ್ಲೆ ಮುದ್ರಣ ಕಾರ್ಯ ನಡೆಯಲಿದೆಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಹೇಳಿದ್ದಾರೆ.
ಒಂದೊಂದು ಸಂಪುಟ ಸುಮಾರು 800 ಪುಟಗಳನ್ನು ಒಳಗೊಳ್ಳಲಿದೆ. ಒಟ್ಟು 1ಸಾವಿರಪುಸ್ತಕಗಳ ಹೊರತರುವ ಆಲೋಚನೆ ಪ್ರಾಧಿಕಾರಕ್ಕಿದೆ ಎಂದು ತಿಳಿಸಿದ್ದಾರೆ.
ಸಂಪುಟಗಳಲ್ಲಿ ಯಾವೆಲ್ಲಾ ಅಂಶಗಳಿವೆ: ಸಮಗ್ರ ಸಂಪುಟಗಳಲ್ಲಿ ಹಲವು ಅನುಪಮವಿಷಯಗಳು ಅಡಕವಾಗಿದೆ. ಕೇಂದ್ರದಲ್ಲಿಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್‌ಅವರು ಸಂಸತ್‌ನಲ್ಲಿ ಮಾಡಿದ ಭಾಷಣಗಳು,ಸಂಸತ್‌ನಲ್ಲಿ ಅಂಬೇಡ್ಕರ್ ಅವರ ಮಾತಿಗೆ ವಿರೋಧ ಪಕ್ಷದ ಪ್ರತಿಕ್ರಿಯೆ, ಸಂವಿಧಾನ ಪರಿಚಯ, ಹಿಂದು ಕೋಡ್, ಗಾಂಧೀಜಿ ಉಪವಾಸ ಸತ್ಯಾಗ್ರ, ಭಾರತೀಯ ಆರ್ಥಿಕ ಸಮಸ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ಈಸಮಗ್ರ ಸಂಪುಟಗಳಲ್ಲಿ ಲೇಖನಗಳಿವೆ.ಜಾತಿ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ನಿಲವು, ಅಸ್ಪ್ರಶ್ಯರು ಎದುರಿಬೇಕಾದ ಆರ್ಥಿಕ ಸವಾಲುಗಳು, ಈಸ್ಟ್ ಇಂಡಿಯಾ ಕಂಪನಿ ಆಡಳಿತಸೇರಿದಂತೆ ಇನ್ನೂ ಅನೇಕ ರೀತಿಯ ಕುತೂಹಲ ಮೂಡಿಸುವಂತಹ ಅಂಶ ಈ ಸಂಪುಟದಲ್ಲಿದೆ
ವಿದ್ಯಾರ್ಥಿಗಳಿಗೆ ಅನುಕೂಲ :
ಡಾ.ಬಿ.ಆರ್.ಅಂಬೇಡ್ಕರ್ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟ ರಾಜಕೀಯ ಶಾಸ್ತ್ರದವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅಲ್ಲದೆ ಅಂಬೇಡ್ಕರ್ ಅವರ ಜೀವನ ಕ್ರಮ ಕುರಿತು ಅಧ್ಯಯನ ಮಾಡುವವಿದ್ಯಾರ್ಥಿಗಳಿಗೂ ಈ ಸಂಪುಟ ಮಾರ್ಗದರ್ಶನ ನೀಡಲಿದೆ. ಜತೆಗೆ ರಾಜಕೀಯ ನಾಯಕರಿಗೂ ಉಪಯುಕ್ತ ಮಾಹಿತಿಗಳನ್ನು ನೀಡಲಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಸಮಗ್ರ ಸಂಪುಟ ಅಂಬೇಡ್ಕರ್ ಕುರಿತಐತಿಹಾಸಿಕ ಮಾಹಿತಿಗಳನ್ನು ನೀಡಲಿದೆ. ಸಂವಿಧಾನ ಕುರಿತ ಜ್ಞಾನ ಭಂಡರ ಇದರಲ್ಲಿ ಅಡಗಿದೆ. ಹೀಗಾಗಿ ಈ ಸಂಪುಟ ಆರನೇ ಮುದ್ರಣದತ್ತ ಹೆಜ್ಜೆಯಿರಿಸಿದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟಗಳಿಗೆ ಸಾಹಿತ್ಯವಲಯದಿಂದ ಅಪಾರ ಬೇಡಿಕೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಸುಮಾರು 80ಲಕ್ಷ ರೂ. ಯೋಜನಾ ವೆಚ್ಚ ದಲ್ಲಿ ಸಂಪುಟಗಳ ಮರುಮುದ್ರಣಕ್ಕೆ ಪ್ರಾಧಿಕಾರ ಮುಂದಾಗಿದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ನಡೆಯಲಿದೆ. -ಡಾ.ಅಜಕ್ಕಳ ಗಿರೀಶ್ ಭಟ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.