ಸಿಟಿಯಲ್ಲಿ ಗುಣಮುಖ ಪ್ರಮಾಣ ಹೆಚ್ಚಳ
ನಿನೆ ಒಟ್ಟು ಬಿಡುಗಡೆ ಸಂಖ್ಯೆ 23,603ಕ್ಕೆ ಏರಿಕ
Team Udayavani, Aug 4, 2020, 7:25 AM IST
ಬೆಂಗಳೂರು: ನಗರದಲ್ಲಿ ಸೋಮವಾರ 1,497 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆಯಾದರೂ, 2,693 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡು ವಿವಿಧ ಆರೈಕೆ ಕೇಂದ್ರಗಳಿಂದ ಬಿಡುಗಡೆಯಾಗಿದ್ದಾರೆ!
ಬಿಡುಗಡೆಯಾದವರಲ್ಲಿ 1,590 ಪುರುಷರು ಹಾಗೂ 1,103 ಮಹಿಳೆಯರು ಇದ್ದಾರೆ. ಇದರಿಂದಾಗಿ ಒಟ್ಟಾರೆ ಬಿಡುಗಡೆಗೆ ಆಗಿರುವವರ ಸಂಖ್ಯೆ 23,603ಕ್ಕೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಎರಡು ಸಾವಿರದ ಸರಾಸರಿಯಲ್ಲಿತ್ತು. ಜುಲೈ 29 ರಂದು 2,270 ಸೋಂಕಿತ ಪ್ರಕರಣ ಗಳು ದೃಢಪಟ್ಟಿದ್ದವು. ಇಲ್ಲಿಂದ ಆರಂಭವಾಗಿದ್ದ ಏರಿಕೆ ಪ್ರಮಾಣ ಇದೀಗ 1,497 ಕ್ಕೆ ಇಳಿಕೆಯಾಗಿದೆ. ಆದರೂ ನಗರದಲ್ಲೀಗ ಒಟ್ಟಾರೆ 60,998 ಸೋಂಕಿತ ಪ್ರಕರಣಗಳಿದ್ದು ಈ ಸಂಖ್ಯೆ 61 ಸಾವಿರದ ಗಡಿ ರೇಖೆ ಸಮೀಪಿಸಿದೆ.
ಕಳೆದ ಭಾನುವಾರ 2,331ಜನರು ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆರೈಕೆ ಕೇಂದ್ರಗಳಿಂದ ಬಿಡುಗಡೆಯಾಗಿದ್ದರು. ಜುಲೈ 30 ರಂದು 1,912 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಹಾಗೆಯೇ ಆ.1 ರಂದು 1,683 ಜನರು ಆರೈಕೆ ಕೇಂದ್ರಗಳಿಂದ ಚೇತರಿಸಿಕೊಂಡಿದ್ದರು. ಈಗ ಮತ್ತೆ 2,693 ಮಂದಿ ಬಿಡುಗಡೆ ಆಗುವ ಮೂಲಕ ನಗರದಲ್ಲೀಗ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ಬಿಡುಗಡೆಯಾದ ವರ ಸಂಖ್ಯೆ 23,603ಕ್ಕೆ ಏರಿಕೆಯಾಗಿದೆ.
ಕಳೆದ ಐದು ದಿನಗಳಲ್ಲಿ 117 ಮಂದಿ ಬಲಿ!: ಹೊಸದಾಗಿ ನಗರದಲ್ಲಿ ಸೋಂಕಿಗೆ 14 ಮಂದಿ ಪುರುಷರು ಮತ್ತು 13 ಮಂದಿ ಮಹಿಳೆಯರು ಸೇರಿದಂತೆ 27 ಮಂದಿ ಅಸುನೀಗಿದ್ದಾರೆ. ಇದರಲ್ಲಿ ಕಫ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 34 ವರ್ಷದ ಯುವಕ ಕೂಡ ಸೇರಿದ್ದಾನೆ. ಇದರೊಂದಿಗೆ ಕೊರೊನಾ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 1,104 ಕ್ಕೆ ಏರಿದೆ. ಬೆಂಗಳೂರಿನಲ್ಲಿ ಕಳೆದ ಐದು ದಿನಗಳಲ್ಲಿ 117 ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದು,ಪ್ರತಿದಿನ ಸಾವಿನ ಸಂಖ್ಯೆ 20ರ ಮೇಲೆಯೇ ಇದೆ. ಜುಲೈ 30 ರಂದು 22, ಜುಲೈ 31 ರಂದು 20, ಆಗಸ್ಟ್ 1 ರಂದು 27 ಮಂದಿಯನ್ನು ಮಹಾಮಾರಿ ಬಲಿತೆಗೆದುಕೊಂಡಿತ್ತು. ಸಾವಿನ ಪ್ರಮಾಣ ಶೇ.1.81 ರಷ್ಟಿದೆ. ನಗರದಲ್ಲಿ ಒಟ್ಟಾರೆ 36,290 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲರೂ ವಿವಿಧ ಆಸ್ಪತ್ರೆ,ಆರೈಕೆ ಕೇಂದ್ರ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಕೋವಿಡ್ ಸೋಂಕಿನಿಂದ ಬಳಲುತ್ತಿರುವ 330 ಮಂದಿ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
6,725 ಮಂದಿಗೆ ಪರೀಕ್ಷೆ: ಈಗ ಒಟ್ಟು ಪಾಸಿಟಿವ್ ರೇಟ್ ಶೇ.17.7ರಷ್ಟು ಇದ್ದು, ಆಕ್ಟೀವ್ ರೇಟ್ ಶೇ.59 ರಷ್ಟಿದೆ. ಅಲ್ಲದೆ 6,725 ಜನರನ್ನು ಪರೀಕ್ಷೆ ಗೆ ಒಳಪಡಿಸಲಾಗಿದೆ. ನಗರ ದಲ್ಲಿ ಒಟ್ಟು 22,902 ಕಂಟೈನ್ಮೆಂಟ್ ವಲಯ ವಿದ್ದು ಇದರಲ್ಲಿ 11,872 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಅಂದರೆ 6,717 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ. ಹಾಗೆಯೇ ದಾಸರಹಳ್ಳಿ ಕಡಿಮೆ ಅಂದರೆ 4,18 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.