ಮಣ್ಣಿನ ಗಣೇಶನಿಗೆ ಹೆಚ್ಚಿದ ಬೇಡಿಕೆ


Team Udayavani, Aug 21, 2019, 3:09 AM IST

manninna-gane

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿರುವ ಮಣ್ಣಿನ ಗಣೇಶ, ನಗರದ ಪರಿಸರ ಸಂರಕ್ಷಣೆಗೆ ಕೈಜೋಡಿಸುವುದು ಮಾತ್ರವಲ್ಲ; ತನಗೊಂದು ರೂಪಕೊಡುವ ಸಿದ್ಧತೆಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳುವಂತೆ ಮಾಡಿದ್ದಾನೆ.

ಪ್ರತಿ ವರ್ಷ ಬರುವ ಗಣೇಶ ಉತ್ಸವ ನಗರದ ಹೊರವಲಯದಲ್ಲಿರುವ ನಾರಾಯಣಪುರ ಎಂಬ ಊರಿನಲ್ಲಿರುವ ಬಹುತೇಕ ವೃತ್ತಿ ಬಾಂಧವರ ಅದೃಷ್ಟ ಕುಲಾಯಿಸುವಂತೆ ಮಾಡಿದೆ. ಇಷ್ಟೇ ಅಲ್ಲ, ಅವಸಾನದ ಅಂಚಿನಲ್ಲಿದ್ದ ಕುಂಬಾರಿಕೆಗೂ ಮರುಜೀವ ಪಡೆಯಲು ಹಾದಿ ಸುಗಮವಾಗಿದೆ. ದಶಕದ ಹಿಂದೆ ಕೇವಲ 50ರಿಂದ 60 ಮೂರ್ತಿಗಳು ತಯಾರಾಗುತ್ತಿದ್ದ ಇಡೀ ಊರಿನಲ್ಲಿ ಈಗ 12ರಿಂದ 15 ಸಾವಿರ ಮಣ್ಣಿನ ಗಣಪಗಳು ಪೂರೈಕೆ ಆಗುತ್ತಿವೆ. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.

ನಾರಾಯಣಪುರದಲ್ಲಿ 80 ಕುಟುಂಬಗಳಲ್ಲಿ 60 ಕುಟುಂಬಗಳು ಕುಂಬಾರ ವೃತ್ತಿ ನಂಬಿಕೊಂಡು ಬದುಕುತ್ತಿದ್ದರು. ಮಾರುಕಟ್ಟೆಗೆ ಸ್ಟೀಲ್‌ ಪಾತ್ರೆ ಬಂದ ಕಾರಣ ಮಣ್ಣಿನ ವಸ್ತುಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಆದ್ದರಿಂದ 15ಕ್ಕೂ ಅಧಿಕ ಕುಟುಂಬಗಳು ಮೂಲ ವೃತ್ತಿ ಬಿಟ್ಟು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದರು. ಪ್ರಸ್ತುತ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದ್ದರಿಂದ ಮರಳಿ ಮೂಲ ವೃತ್ತಿಗೆ ಬಂದಿದ್ದಾರೆ ಎಂದು ಗಣೇಶ ಮೂರ್ತಿ ಕಲಾವಿದ ಶ್ರೀನಿವಾಸ ತಿಳಿಸುತ್ತಾರೆ.

ವರ್ಷದ ಆದಾಯ 2 ತಿಂಗಳಲ್ಲಿ!: ಮೂರ್‍ನಾಲ್ಕು ವರ್ಷಗಳ ಹಿಂದೆ 200ರಿಂದ 300 ಗಣೇಶನ ಮೂರ್ತಿಗಳ ತಯಾರಿಕೆಗೆ ಬೇಡಿಕೆ ಬಂದಿತ್ತು. ಇದರಿಂದ ಸಾವಿರಾರು ರೂ. ಆದಾಯ ಬರುತ್ತಿತ್ತು. ಈ ವರ್ಷ ಒಂದರಿಂದ ಒಂದೂವರೆ ಸಾವಿರ ಮೂರ್ತಿಗಳಿಗೆ ಬೇಡಿಕೆ ಇದೆ. ಇದರಿಂದ ಸರಿಸುಮಾರು ಒಂದೂವರೆ ಲಕ್ಷ ರೂ. ಆದಾಯ ಬರುತ್ತದೆ. ಇದರಲ್ಲಿ ಆಳುಗಳು, ಮಣ್ಣು ಮತ್ತಿತರ ಖರ್ಚು 40 ಸಾವಿರ ರೂ. ಆಗುತ್ತದೆ. ಹೆಚ್ಚು-ಕಡಿಮೆ ಹಬ್ಬದ ಸೀಜನ್‌ನಲ್ಲಿ ಲಕ್ಷ ರೂ. ಉಳಿತಾಯ ಆಗುತ್ತದೆ. ಇದು ನಮ್ಮ ಒಂದು ಕುಟುಂಬದ ವಾರ್ಷಿಕ ಆದಾಯ ಎನ್ನುತ್ತಾರೆ ಶ್ರೀನಿವಾಸ್‌.

ಅಂದಹಾಗೆ, 2002ರಲ್ಲಿ ಮಹೇಶ್‌ ಅವರ ಕುಟುಂಬವೊಂದೇ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿತ್ತು. ಆದರೆ, ಈಗ 30ಕ್ಕೂ ಅಧಿಕ ಕುಟುಂಬಗಳು ಈ ಕಾರ್ಯದಲ್ಲಿ ತೊಡಗಿಕೊಂಡಿವೆ. ಈ ಹಳ್ಳಿಯಲ್ಲಿ 250ಕ್ಕೂ ಅಧಿಕ ಜನರಿದ್ದು, 80 ಕುಟುಂಬಗಳಿವೆ. ನಾರಾಯಣಪುರದಲ್ಲಿ ತಯಾರಿಸುವ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆ ಇದೆ. ನೂರಾರು ಗಣೇಶ ಮೂರ್ತಿಗಳನ್ನು ಕೆಲ ಕಂಪನಿಗಳು ಪಡೆಯುತ್ತಿವೆ. ರಾಜಾಜಿನಗರದ ಸಮರ್ಪಣ ಸಂಸ್ಥೆಯವರು ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಇಲ್ಲಿಂದಲೇ ಪಡೆಯುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಾಂಪ್ರದಾಯಿಕ ಮಾದರಿ: ನಾರಾಯಣಪುರದ ಕಲಾವಿದರು ಬೆಟ್ಟೇನಹಳ್ಳಿಯ ಕೆರೆಯಿಂದ ಜೇಡಿ ಮಣ್ಣನ್ನು ತಂದು ಮೂರ್ತಿ ಸಿದ್ಧಪಡಿಸುತ್ತಾರೆ. ಈ ಕೆರೆಗೆ ಮಳೆನೀರು ಶೇಖರಣೆಗೊಳ್ಳುತ್ತಿದ್ದು, ಮಣ್ಣು ಫ‌ಲವತ್ತಾಗಿದೆ. ಈ ಮಣ್ಣಿಗೆ ಗೋವಿನ ಬೆರಣಿ ಮಿಶ್ರಣ ಮಾಡಿ, ಮೂರ್ತಿ ಸಿದ್ಧಪಡಿಸಲಾಗುತ್ತದೆ. ಅಲ್ಲದೆ, ಮೂರ್ತಿಯೊಳಗೆ ಬೀಜದ ಉಂಡೆಗಳನ್ನೂ ಇಡಲಾಗುತ್ತದೆ. ಇಲ್ಲಿನ ಕಲಾವಿದರು ಮೂರ್ತಿ ಸಿದ್ಧಪಡಿಸುವವರೆಗೂ ಮಾಂಸಹಾರ ಸೇವಿಸುವುದಿಲ್ಲ. ಅರ್ಧ ಅಡಿಯಿಂದ ಆರು ಅಡಿವರೆಗೆ ಗಣೇಶ ಮೂರ್ತಿಯನ್ನು ತಯಾರಿಸಲಿದ್ದು, ಅರ್ಧ ಅಡಿಗೆ 2 ಕೆಜಿ ಮಣ್ಣು ಬೇಕಾಗುತ್ತದೆ. ಒಂದು ಅಡಿ ಮೂರ್ತಿಗೆ 3 ರಿಂದ 4 ಕೆಜಿ ಹಾಗೂ 2 ಅಡಿ ಗಣೇಶನ ಮೂರ್ತಿಗೆ 9 ಕೆಜಿ ಮಣ್ಣು ಬೇಕಾಗುತ್ತದೆ ಎಂದು ತಯಾರಕರು ಮಾಹಿತಿ ನೀಡಿದರು.

ಪಿಒಪಿಗೆ ಸೆಡ್ಡು: ದಶಕಗಳ ಹಿಂದೆ ದೀಪಾವಳಿ ಸಮಯದಲ್ಲಿ ಮಣ್ಣಿನ ದೀಪ ತಯಾರಿಸಲಾಗುತ್ತಿತ್ತು. ಆದರೆ, ವರ್ಷಗಳು ಕಳೆದಂತೆ ಮಣ್ಣಿನ ದೀಪಗಳ ಮರೆಯಾದವು. ವ್ಯಾಪಾರ ಕುಂಠಿತವಾಯಿತು. ಆದ್ದರಿಂದ ಕೆಲವರು ಕುಲಕಸಬಿನಿಂದ ವಿಮುಖರಾದರು. ನಾಲ್ಕೈದು ವರ್ಷದಗಳಿಂದ ಜನ ಪಿಒಪಿ ಗಣೇಶನ ಮೂರ್ತಿ ಬಿಟ್ಟು ಮಣ್ಣಿನ ಮೂರ್ತಿ ಕಡೆಗೆ ಮುಖಮಾಡಿದ್ದು, ಅವಕಾಶಗಳ ಬಾಗಿಲು ತೆರೆದಂತಾಗಿದೆ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ಮಹೇಶ್‌. ಕೇವಲ ಗಣೇಶ ಉತ್ಸವಕ್ಕೆ ಈ ವ್ಯಾಪಾರ ಸೀಮಿತವಾಗಿಲ್ಲ. ವಿವಿಧ ಕಂಪನಿಗಳೊಂದಿಗೆ ಸಂಪರ್ಕ ಬೆಳೆಯುತ್ತದೆ. ಆ ಮೂಲಕ ಚಹಾ ಕಪ್‌, ಐಸ್‌ಕ್ರೀಂ ಕಪ್‌ ಸೇರಿದಂತೆ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆಗೂ ಆರ್ಡರ್‌ ಬರಬಹುದು ಎಂದು ತಯಾರಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪರಿಸರ ಗಣಪತಿ ವಿನ್ಯಾಸ ಕಾರ್ಯಾಗಾರ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಇದರ ಮಧ್ಯೆ ಪರಿಸರ ಗಣಪತಿ ವಿನ್ಯಾಸಗೊಳಿಸುವ ಕೆಲಸ ಕೂಡ ನಡೆದಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಹಾಲಕ್ಷ್ಮೀà ಲೇಔಟ್‌ನ ಲಲಿತಶ್ರೀ ಅಕಾಡೆಮಿಯು ಪರಿಸರ ಗಣಪನ ವಿನ್ಯಾಸ ಕಾರ್ಯಾಗಾರ ಹಮ್ಮಿಕೊಂಡಿದ್ದು, 25ರ ಮಧ್ಯಾಹ್ನ 2.30ಕ್ಕೆ ಕಾರ್ಯಾಗಾರ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.

ಕಾರ್ಯಾಗಾರದಲ್ಲಿ ನುರಿತ ತಜ್ಞರು ಗಣಪತಿ ನಿರ್ಮಾಣದ ಬಗ್ಗೆ ಪೂರಕ ಮಾಹಿತಿ ನೀಡಲಿದ್ದಾರೆ. ಅಕಾಡೆಮಿ ನಿರ್ದೇಶಕಿ ಸುಮಾ ಕೃಷ್ಣಮೂರ್ತಿ ಮಾತನಾಡಿ, ಕಳೆದ ಬಾರಿ ಸುಮಾರು 40 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ ಕೂಡ ಈಗಾಗಲೇ 40 ಮಂದಿ ಶಿಬಿರಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿಜಯನಗರ ಮತ್ತು ಮಲ್ಲೇಶ್ವರದಲ್ಲಿ ಕೂಡ ಕಾರ್ಯಾಗಾರ ನಡೆಯಲಿದೆ. ವಯೋಮಿತಿ ಇಲ್ಲ. ಆಸಕ್ತರು ಮಾಹಿತಿಗೆ ಮೊ: 98452 78878 ಸಂಪರ್ಕಿಸಬಹುದು ಎಂದರು.

ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಿದೆ. ನಮ್ಮ ಊರಿನಿಂದ 15 ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಬೆಂಗಳೂರಿಗೆ ಪೂರೈಸಲಾಗುತ್ತದೆ. ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಿಂದಾಗಿ ಕಳೆದ ಮೂರ್‍ನಾಲ್ಕು ವರ್ಷದಿಂದ ನಮ್ಮ ಆರ್ಥಿಕತೆ ಸುಧಾರಿಸಿದೆ. ಕಳೆದ ಒಂದೂವರೆ ದಶಕದಿಂದ ಮಣ್ಣಿನ ಮೂರ್ತಿ ತಯಾರಿಸುತ್ತಿದ್ದೇವೆ.
-ಮಹೇಶ್‌, ಗಣೇಶ ಮೂರ್ತಿ ಕಲಾವಿದ

* ಮಂಜುನಾಥ ಗಂಗಾವತಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.