ನೀರಿನ ಸೊರಿಕೆ ತಡೆಯಿಂದ ಹೆಚ್ಚಿದ ಆದಾಯ
Team Udayavani, Jun 13, 2018, 11:55 AM IST
ಬೆಂಗಳೂರು: ಜಲಮಂಡಳಿಗೆ ತೀವ್ರ ತಲೆನೋವಾಗಿದ್ದ ನೀರಿನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಕೈಗೊಂಡ ಕೆಲವು ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಲೆಕ್ಕಕ್ಕೆ ಸಿಗದ ನೀರಿನ ಸೋರಿಕೆ ಪ್ರಮಾಣ ಶೇ. 11.8 ಇಳಿಕೆಯಾಗಿದ್ದು, ಅದರ ಪರಿಣಾಮ ಆದಾಯ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ.
ಕಳೆದ ವರ್ಷಾರಂಭಕ್ಕೆ ಜಲ ಮಂಡಳಿ ವ್ಯಾಪ್ತಿಯಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ. 49 ಇದ್ದುದು ಪ್ರಸ್ತುತ ಶೇ. 37.2ಕ್ಕೆ ಇಳಿದಿದೆ. ಇದರಿಂದ ಮಂಡಲಿಯ ಆದಾಯ ಸುಮಾರು 10 ಕೋಟಿ ರೂ. ಏರಿಕೆಯಾಗಿದೆ.
ಜಲಮಂಡಳಿಯು ಮಹಾನಗರದ ಲಕ್ಷಾಂತರ ಮನೆಗಳಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದು, ಮಾರ್ಗ ಮಧ್ಯೆ ಹಾಗೂ ನಗರದ ಬಡಾವಣೆಗಳಲ್ಲಿ ನೀರಿನ ಸೋರಿಕೆ ಹಾಗೂ ಕಳ್ಳತನದಿಂದ ಸಾಕಷ್ಟು ನೀರು ಪೋಲಾಗಿ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. 2017 ಮೇ ನಲ್ಲಿ ಪೂರೈಕೆ ಮಾಡುತ್ತಿದ್ದ ಒಟ್ಟಾರೆ ನೀರಿನಲ್ಲಿ ಕೇವಲ ಅರ್ಧದಷ್ಟು ನೀರು ಮಾತ್ರವೇ ಬಿಲ್ ಪಾವತಿಸುವ ಬಳಕೆದಾರಿಗೆ ತಲುಪುತ್ತಿತ್ತು. ಇದರಿಂದ ಮಂಡಳಿಗೆ ನಷ್ಟವಾಗುತ್ತಿತ್ತು.
ಹೀಗಾಗಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕುಗ್ಗಿಸಲು ಜಲಮಂಡಳಿ ಸತತವಾಗಿ ಹೊಸ ಯೋಜನೆ ಹಾಗೂ ಕಾಮಗಾರಿಗಳನ್ನು ಕೈಗೊಂಡಿತ್ತು. ಅದರ ಫಲವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.11.8ರಷ್ಟು ಕಡಿಮೆಯಾಗಿ ಪ್ರತಿನಿತ್ಯ 151 ಮಿಲಿಯನ್ ಲೀ. ನೀರು ಲೆಕ್ಕಕ್ಕೆ ಸಿಗುವಂತಾಗಿದೆ. ಇದರಿಂದಾಗಿ ಮಂಡಳಿಯ ತಿಂಗಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ 10 ಕೋಟಿ ರೂ.ನಷ್ಟು ಹೆಚ್ಚಾಗಿದೆ.
ಸೋರಿಕೆ ತಡೆಗೆ ಕ್ರಮ: ನೀರಿನ ಸೋರಿಕೆ ತಡೆಗಟ್ಟಲು ಜಲಮಂಡಳಿ ತನ್ನ ಉಪವಿಭಾಗಗಳಾದ ಪಶ್ಚಿಮ- 1, 2, 3, ಕೇಂದ್ರ- 1, 2, ವಾಯುವ್ಯ- 1, 2, ಈಶಾನ್ಯ- 1, 2, 3, ನೈರುತ್ಯ- 1 ರಿಂದ 4, ದಕ್ಷಿಣ- 1 ಉಪ ವಿಭಾಗಗಳಲ್ಲಿ ಯುಎಫ್ಡಬ್ಲ್ಯು (ಅನ್‌ವಾಂಟೆಡ್ ಫ್ಲೋ ವಾಟರ್) ಕಾಮಗಾರಿಗಳನ್ನು ಕೈಗೊಂಡಿದೆ.
ಈ ಕಾಮಗಾರಿಯಲ್ಲಿ ಹೀಲಿಯಂ ಗ್ಯಾಸ್ ಡಿಟೆಕ್ಷನ್ ಮೂಲಕ ಗುಪ್ತ ಸೋರಿಕೆ ಜಾಗಗಳನ್ನು ಪತ್ತೆ ಮಾಡಿ ಅವುಗಳ ಪೈಪ್ ಬದಲಿಸಲಾಗಿದ್ದು, ಅಗತ್ಯವಿರುವ ಕಡೆ ಗುಣಮಟ್ಟದ ಪ್ರೀ ಟೆಸ್ಟೆಡ್ ಕಾಂಕ್ರೀಟ್ ಪೈಪ್ ಹಾಕಲಾಗಿದೆ.ಎರಡು ಸಂಪರ್ಕ ಇದ್ದ ಕಡೆ ಹಾಗೂ ಸಾರ್ವಜನಿಕ ಬಳಕೆ ಸ್ಥಳಗಳಲ್ಲಿ ಮೀಟರ್ ಅಳಡಿಸಲಾಗಿದೆ. ಇದರ ಜತೆಗೆ ಎಲ್ಲಾ ಉಪ ವಿಭಾಗಗಳ ವಿವಿಧ ಭಾಗಗಳಲ್ಲಿ ಒಟ್ಟಾರೆ 519 ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಷನ್ ಮೀಟರ್ ಅಳವಡಿಸಿದ್ದು, ನೀರಿನ ಬಳಕೆ ಮಾಹಿತಿ ಸಿಗುತ್ತದೆ.
ಅದರಲ್ಲೂ ಯುಎಫ್ಡಬ್ಲ್ಯು ಕಾಮಗಾರಿ ಕೈಗೊಂಡ ಭಾಗಗಳಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.49 ರಿಂದ ಶೇ. 27ಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಜಲಮಂಡಳಿಯ ಒಟ್ಟಾರೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ. 37.2ಕ್ಕೆ ಬಂದಿದೆ ಎಂದು ಮಂಡಳಿ ಮುಖ್ಯ ಎಂಜಿನಿಯರ್ ಗಂಗಾಧರ್ ಮೂರ್ತಿ “ಉದಯವಾಣಿ’ಗೆ ತಿಳಿಸಿದರು.
ದಾಖಲೆಯ ಆದಾಯ ಸಂಗ್ರಹ: ನೀರು ಸೋರಿಕೆಯ ಪರಿಣಾಮ ನೂರು ಕೋಟಿಯಿದ್ದ ಆದಾಯ, ಬರೋಬ್ಬರಿ 103.8 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2017ರ ಜುಲೈನಲ್ಲಿ ಮೊದಲ ಬಾರಿ ಹಾಗೂ ನವೆಂಬರ್ ಎರಡನೇ ಬಾರಿ ನೂರು ಕೋಟಿ ಆದಾಯ ಬಂದಿತ್ತು. 2018 ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ 2.45 ರೂ. ಕೋಟಿ ಆದಾಯ ಹೆಚ್ಚಿದೆ. ಕಳೆದ ವರ್ಷದ ಸರಾಸರಿ ಆದಾಯಕ್ಕೆ ಹೋಲಿಸಿದರೇ ಈ ವರ್ಷ ಮಾಸಿಕ 10 ಕೋಟಿ ರೂ. ಆದಾಯ ಹೆಚ್ಚಿದೆ.
ಆನ್‌ಲೈನ್ ಪೇಮೆಂಟ್ ಹೆಚ್ಚಳ: ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, 2017 ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಪ್ರಸುತ್ತ ಒಟ್ಟಾರೆ 9.57 ಲಕ್ಷ ಬಳಕೆದಾರರಲ್ಲಿ 91 ಸಾವಿರ ಬಳಕೆದಾರರು ಆನ್‌ಲೈನ್ ಮೂಲಕ ಬಿಲ್ ಪಾವತಿಸುತ್ತಿದ್ದು, ಅದರಿಂದ ಮೇ ತಿಂಗಳು 11.33 ಕೋಟಿ ರೂ. ಸಂಗ್ರಹವಾಗಿದೆ.
ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕುಗ್ಗಿಸಲು ಹಾಗೂ ಆದಾಯ ಸಂಗ್ರಹ ಹೆಚ್ಚಿಸಲು ಗುರಿ ನೀಡಲಾಗುತ್ತಿದೆ. ಯುಎಫ್ಡಬ್ಲ್ಯು ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದ್ದು, ನೀರಿನ ನಷ್ಟ ಕಡಿಮೆಯಾಗಿ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.
-ಕೆಂಪರಾಮಯ್ಯ, ಜಲಮಂಡಳಿ ಪ್ರಧಾನ ಎಂಜಿನಿಯರ್
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.