ಸಿರಿಧಾನ್ಯಗಳಿಗಾಗಿ ಇನ್‌ಕ್ಯುಬೇಶನ್ ಸೆಂಟರ್
Team Udayavani, Jan 21, 2018, 6:20 AM IST
ಬೆಂಗಳೂರು: ಸಿರಿಧಾನ್ಯಗಳಿಗೆ ಸಂಬಂಧಿಸಿದ ಉದ್ಯಮಗಳ ಉತ್ತೇಜನಕ್ಕಾಗಿಯೇ ದೇಶದ ಮೊದಲ ಇನ್‌ಕ್ಯುಬೇಶನ್ ಸೆಂಟರ್ ಅಸ್ತಿತ್ವಕ್ಕೆ ಬರುತ್ತಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿ ನಡಿ ಬರುವ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ (ಐಐಎಂಆರ್) ಇನ್ನೊಂದು ತಿಂಗಳಲ್ಲಿ ಈ ಇನ್‌ಕ್ಯುಬೇಶನ್ ಸೆಂಟರ್ ಆರಂಭಿಸಲಿದೆ.
ಸಿರಿಧಾನ್ಯಗಳಿಗೆ ಸಂಬಂಧಿಸಿದ ಯಾವುದೇ ಐಡಿಯಾಗಳಿಗೆ ಈ ಕೇಂದ್ರವು ಉದ್ಯಮದ ಪರಿಕಲ್ಪನೆ ಕೊಟ್ಟು, ಅದು ಬೆಳೆಯಲು ಅಗತ್ಯ ನೆರವು ನೀಡಲಿದೆ. “ಅಗ್ರಿ ಸ್ಟಾರ್ಟ್ ಅಪ್’ಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಆಸಕ್ತ ನವೋದ್ಯಮಿಗಳಿಗೆ ಉತ್ತಮ ವೇದಿಕೆ ಆಗಲಿದೆ.
ಮೊದಲ ಬ್ಯಾಚ್‌ಗೆ 30 ಮಂದಿ ಆಯ್ಕೆ: ಸುಮಾರು ನೂರು ಅರ್ಜಿಗಳನ್ನು ನಿರೀಕ್ಷಿಸಲಾಗಿದ್ದು, ಈ ಪೈಕಿ ಮೊದಲ ಬ್ಯಾಚ್‌ನಲ್ಲಿ 30 ಜನರನ್ನು ಆಯ್ಕೆ ಮಾಡಲಾಗುವುದು. ನಂತರ ತರಬೇತಿ ನೀಡಿ, ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಲಾಗುವುದು.
ದೇಶಾದ್ಯಂತ ಸಾಕಷ್ಟು ಇನ್‌ಕ್ಯುಬೇಶನ್ ಕೇಂದ್ರಗಳಿರಬಹುದು. ಆದರೆ,ಸಿರಿಧಾನ್ಯಗಳಿಗಾಗಿಯೇ ಪ್ರತ್ಯೇಕ ಇನ್‌ಕ್ಯುಬೇಶನ್ ಸೆಂಟರ್ ಆರಂಭಿಸುತ್ತಿರುವುದು ಇದೇ ಮೊದಲು. ಇದಕ್ಕಾಗಿ ಕೇಂದ್ರದಿಂದ ಹಣಕಾಸಿನ ನೆರವು ಕೂಡ ದೊರೆಯುತ್ತಿದೆ. ದೇಶದಲ್ಲಿ ನೂರಾರು ಕೋಟಿ ರೂ.ಸಿರಿಧಾನ್ಯಗಳ ವಹಿವಾಟು ನಡೆಯುತ್ತಿದೆ. ಇದರಲ್ಲಿ ಶೇ.50ರಷ್ಟು ಪಾಲು ಕರ್ನಾಟಕದ್ದೇ ಆಗಿದೆ. ಅಲ್ಲದೆ, ಐಟಿ-ಬಿಟಿ ಉದ್ಯಮಿಗಳು ಕೂಡ ಇದರತ್ತ ಮುಖಮಾಡುತ್ತಿರುವುದರಿಂದ ಅವರಿಗೆ ಇದು ಉತ್ತಮ ವೇದಿಕೆ ಆಗಲಿ ದೆ ಎಂದು ಐಐಎಂಆರ್ ನಿರ್ದೇಶಕ ವಿಲಾಸ ಎ. ಟೊಣಪಿ “ಉದಯವಾಣಿ’ಗೆ ತಿಳಿಸಿದರು.
ಎನ್‌ಸಿಬಿಎಸ್ ಜತೆ ಮಾತುಕತೆ
ರಾಜ್ಯದಲ್ಲೂ ಇನ್‌ಕ್ಯುಬೇಶನ್ ಸೆಂಟರ್ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್)ದ ಜತೆ ಮಾತುಕತೆ ನಡೆಸಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಗರದ ಅರಮನೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಾವಯವ-ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಶನಿವಾರ “ಸ್ಟಾರ್ಟ್‌ಅಪ್ ಮತ್ತು ಉದ್ಯಮಶೀಲತೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಎನ್‌ಸಿಬಿಎಸ್ ಇನ್‌ಕ್ಯುಬೇಶನ್ ಸೆಂಟರ್ “ಸಿ-ಕ್ಯಾಂಪ್’ನ್ನು ಹೊಂದಿದೆ. ಅದೇ ರೀತಿ, ರಾಜ್ಯದಲ್ಲಿ ಇನ್‌ಕ್ಯುಬೇಶನ್ ಸೆಂಟರ್ ಸ್ಥಾಪಿಸಿ,ಆ ಮೂಲಕ ಅಗ್ರಿ ಸ್ಟಾರ್ಟ್‌ಅಪ್‌ಗ್ಳನ್ನು ತೆರೆಯಲು ಮುಂದೆ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಅಷ್ಟೇ ಅಲ್ಲ, ಇದನ್ನು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಲಿಂಕ್ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಳವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.