ಭಾರತೀಯ ಸಂಗೀತ ರಾಷ್ಟ್ರೀಯ ಸಂಪತ್ತು: ಪೇಜಾವರಶ್ರೀ
Team Udayavani, May 6, 2019, 3:06 AM IST
ಬೆಂಗಳೂರು: ಭಾರತೀಯ ಸಂಗೀತ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ (ರಿ) ವತಿಯಿಂದ ನಗರದ ಉತ್ತರಾದಿ ಮಠದ ಶ್ರೀ ಸತ್ಯ ಪ್ರಮೋದ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಎಸ್.ವಿ. ನಾರಾಯಣರಾವ್ ಸ್ವಾಮಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2019′ ಇದರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವಕ್ಕೆ ಭಾರತ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ಅದರಲ್ಲಿ ಭಾರತೀಯ ಸಂಗೀತದ ಕೊಡುಗೆ ಬಹಳ ದೊಡ್ಡದು. ನಮ್ಮಲ್ಲಿ ಪಾಶ್ಚಾತ್ಯ ಸಂಗೀತವಿದೆ. ಸಿನಿಮಾ ಸಂಗೀತವಿದೆ. ಈ ಸಂಗೀತಗಳು ಮನಸ್ಸನ್ನು ಕೆರಳಿಸಿದರೆ, ಭಾರತೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ. ಪಾಶ್ಚತ್ಯ ಸಂಗೀತ ಮಾದಕವಾದರೆ, ಭಾರತೀಯ ಸಂಗೀತ ಮೋದಕ. ಈ ನಮ್ಮ ಸಂಪತ್ತು ಅದರ ರಕ್ಷಣೆ ಆಗಬೇಕು ಎಂದರು.
ಶಾಸ್ತ್ರದ ವಿದ್ವಾಂಸರು, ಪಂಡಿತರೂ ಸಂಗೀತ ಹಾಡಿದ್ದಾರೆ. ರಾಘವೇಂದ್ರ ಸ್ವಾಮಿ, ಜಗದ್ಗುರು ಮಧ್ವಾಚಾರ್ಯರು ಸಂಗೀತ ಹಾಡಿದ್ದಾರೆ. ಮಧ್ವಚಾರ್ಯರ ಸಂಗೀತ ಪ್ರಕೃತಿ ಮೇಲೆ ಪರಿಣಾಮ ಬೀರಿದೆ. ಆ ಏಕಾಗ್ರತೆ ಸಂಗೀತ ಬರುತ್ತದೆ. ಹಾಗಾಗಿ ಆಧ್ಯಾತ್ಮದ ಸಾಧನೆಯಲ್ಲಿ ಸಂಗೀತ ಅವಶ್ಯಕ ಎಂದು ಪೇಜಾವರಶ್ರೀ ಪ್ರತಿಪಾದಿಸಿದರು.
ಪ್ರಶಸ್ತಿ ಪ್ರದಾನ: ಪದ್ಮಶ್ರೀ ಪುರಸ್ಕೃತ, ಸಂಗೀತ ಕಲಾನಿಧಿ ವಿದ್ವಾನ ವಲಯಪಟ್ಟಿ ಎ.ಆರ್. ಸುಬ್ರಮಣ್ಯಂ ಅವರಿಗೆ ಪೇಜಾವರ ಶ್ರೀಗಳು 2019ನೇ ಸಾಲಿನ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 50 ಸಾವಿರ ರೂ. ನಗದು, ಭಿನ್ನವತ್ತಳೆ, 40 ಸಾವಿರ ರೂ. ಮೌಲ್ಯದ ಪಂಚಲೋಹದ ಪ್ರತಿಮೆಯನ್ನೊಳಗೊಂಡಿದೆ.
ಪ್ರಶಸ್ತಿ ಪುರಸ್ಕೃತ ವಿದ್ವಾನ್ ವಲಯಪಟ್ಟಿ ಎ.ಆರ್. ಸುಬ್ರಮಣ್ಯಂ, ವಿದ್ವಾನ್ ಡಾ. ಕದ್ರಿ ಗೋಪಾಲನಾಥ್, ಉತ್ತರಾದಿ ಮಠದ ಆಡಳಿತಾಧಿಕಾರಿ ವಿದ್ವಾನ್ ಶ್ರೀ ಸತ್ಯಧ್ಯಾನ ಆಚಾರ್ಯ ಕಟ್ಟಿ, ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್‌ನ ಅಧ್ಯಕ್ಷ ಮಣಿ ನಾರಾಯಣಸ್ವಾಮಿ, ಟ್ರಸ್ಟಿ ಎ. ರವೀಂದ್ರ ಇತರರಿದ್ದರು.
ಸಂಗೀತ ಜಾತ್ಯಾತೀತ: ಸಂಗೀತಕ್ಕೆ ಗಡಿ, ಭಾಷೆ, ಧರ್ಮ ಇಲ್ಲ. ನಿಜ ಅರ್ಥದಲ್ಲಿ ಸಂಗೀತ ಜಾತ್ಯಾತೀತ ಮತ್ತು ಭಾಷಾತೀತ. ಸಂಗೀತಕ್ಕೆ ಕನ್ನಡ-ತಮಿಳು, ಹಿಂದೂ-ಮುಸ್ಲಿಂ ಎಂಬುದು ಇಲ್ಲ. ಅನೇಕು ಮುಸ್ಲಿಮರು ಭಾರತೀಯ ಶಾಸ್ತ್ರೀಯ ಸಂಗೀತದ ದೊಡ್ಡ ಕಲಾವಿದರಿದ್ದಾರೆ.
ಎಲ್ಲರನ್ನೂ ಒಂದುಗೂಡಿಸುವ, ಶಾಂತಿ-ಸೌಹಾರ್ದತೆ ಸಾರುವ ಶಕ್ತಿ ಸಂಗೀತಕ್ಕೆ ಇದೆ. ಸಂಗೀತದ ವಾದ್ಯಗಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಅದು ಸಂಗೀತವಾಗುತ್ತದೆ. ಇಲ್ಲದಿದ್ದರೆ ಅದು ಅಪಸ್ವರವಾಗುತ್ತದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.