ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಚಾಲನೆ
Team Udayavani, Oct 2, 2021, 1:50 PM IST
Representative Image used
ಬೆಂಗಳೂರು: ಭಾರತದ ಜನರು ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಸಂಭ್ರಮಿಸುವ ಮತ್ತು ಸ್ಮರಿಸುವ ಉದೇಶವನ್ನು ಸ್ವಾತಂತ್ರ್ಯದ ಅಮೃತಮಹೋತ್ಸವದ ಕಾರ್ಯಕ್ರಮದ ಹೊಂದಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಮೂರು ದಿನಗಳ ಆಜಾದಿ ಕಾ ಅಮೃತ ಮಹೋತ್ಸವ(ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯಲ್ಲಿನ ಸ್ಮಾರ್ಟ್ ಸಿಟಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ದೇಶದ ಆಯ್ದ 100 ಸ್ಮಾರ್ಟ್ ಸಿಟಿಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅದರಂತೆ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಶುಕ್ರವಾರದಿಂದ ಭಾನುವಾರದವರೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಪೈಕಿ ಇಂದು ಮಹತ್ವದ ಯೋಜನೆಯಾದ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಐಸಿಸಿಸಿ) ಯೋಜನೆಯು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಂದೇ ಸೂರಿನಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏಕೀಕೃತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ:-ದಾನಿಗಳ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ: ಕೆ.ಆರ್. ಪಾಟ್ಕರ್
ಅದರಲ್ಲಿ ಫ್ರೀಡಂ ಫಾರ್ ವೇಸ್ಟ್, ಫ್ರೀಡಂ ಫಾರ್ ಟ್ರಾಫಿಕ್ ಹಾಗೂ ಫ್ರೀಡಂ ಫಾರ್ ಪೊಲ್ಯೂಷನ್’ ಎಂಬ ಮೂರು ಪರಿಕಲ್ಪನೆಗಳನ್ನಿಟ್ಟುಕೊಂಡು ಇಸಿಸಿಸಿಯು ಹೇಗೆ ಕಾರ್ಯ ನಿರ್ವಹಿಸಲಿಸಿದೆ, ನಾಗರಿಕರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂಬುದರ ಬಗ್ಗೆ ಅಧಿಕಾರಿಗಳು, ವಿದ್ಯಾರ್ಥಿಗಳು, ನಾಗರಿಕರು ಹಾಗೂ ಇನ್ನಿತರರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮೂರು ದಿನಗಳಲ್ಲಿ ನಿರಂತರ 75 ಗಂಟೆಗಳ ಪ್ಲೇಸ್ ಮೇಕಿಂಗ್ ಮ್ಯಾರಥಾನ್ ಅನ್ನು ಹಮ್ಮಿಕೊಂಡಿದ್ದು, ಶಾಂತಿನಗರ ಮುಖ್ಯ ರಸ್ತೆಯಲ್ಲಿ ಸ್ಲೋ ಸ್ಟ್ರೀಟ್‌ನಡಿ ತಡೆ ಗೋಡೆಗಳು, ಸೂಚನಾ ಫಲಕಗಳನ್ನೊಳಗೊಂಡ ಪಾದಚಾರಿ ಸ್ನೇಹಿ, ಸಂಚಾರ ಸ್ನೇಹಿಯಾದ ರಸ್ತೆ ನಿರ್ಮಾಣ ಮಾಡುವುದು. ಇದಲ್ಲದೆ ಸಾರ್ವಜನಿಕ ಸ್ಥಳಗಳ ರೂಪಾಂತರ ಹಾಗೂ ಈ ಸ್ಥಳದೊಂದಿಗೆ ಜನರನ್ನು ಇನ್ನಷ್ಟು ಬೆಸೆಯುವ ಗುರಿಯೊಂದಿಗೆ ಅಕ್ಕಿತಿಮ್ಮನಹಳ್ಳಿ ಮತ್ತು ಅಯ್ಯಪ್ಪ ಗಾರ್ಡನ್ ಅಂಗನವಾಡಿಗ ಅಭಿವೃದ್ಧಿ, ಕೆ.ಆರ್ ಮಾರುಕಟ್ಟೆಯಲ್ಲಿ ಪ್ಲೇಸ್ ಮೇಕಿಂಗ್, ಬಾಲಭವನದಲ್ಲಿ ಪ್ಲೇಸ್ ಮೇಕಿಂಗ್ ಮಾಡಲಾಗುತ್ತಿದೆ ಎಂದರು.
ಈ ವೇಳೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ವಾತಂತ್ರ್ಯಕ್ಕಾಗಿ ಸೈಕ್ಲಥಾನ್ ಇಂದು –
ಸ್ವಾತಂತ್ರ್ಯಕ್ಕಾಗಿ ಸೈಕ್ಲಥಾನ್ ಎಂಬ ಘೋಷವಾಕ್ಯದಡಿ ಅ.2 ರಂದು ಬೆಳಗ್ಗೆ 7 ಗಂಟೆಯಿಂದ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಸೈಕ್ಲಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಪೂರ್ವ ದ್ವಾರದಿಂದ ಅಂಬೇಡ್ಕರ್ ವೀಧಿ-ತಿಮ್ಮಯ್ಯ ವೃತ್ತದ ಮೂಲಕ – ರಾಜಭವನ ರಸ್ತೆ- ಪ್ಲಾನಿಟೋರಿಯಂ ರಸ್ತೆ-ಮಿಲ್ಲರ್ಸ್ ರಸ್ತೆ-ಚಾಲುಕ್ಯ ವೃತ್ತ-ರೇಸ್ಕೋರ್ಸ್ ರಸ್ತೆ-ಮೌರ್ಯ ಸರ್ಕಲ್ (ಸ್ವಾತಂತ್ರ್ಯ ಉದ್ಯಾನ ಮೂಲಕ)-ಕೆ.ಆರ್.ವೃತ್ತ-(ಶೇಷಾದ್ರಿ ರಸ್ತೆ ಮೂಲಕ) ವಿಧಾನಸೌಧ ಪೂರ್ವ ದ್ವಾರದವರೆಗೆ ಸೈಕ್ಲಥಾನ್ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.