ಮುಚ್ಚುವ ಹಂತದಲ್ಲಿ ಇಂದಿರಾ ಕ್ಲಿನಿಕ್‌ಗಳು
Team Udayavani, Jul 25, 2022, 2:59 PM IST
ಬೆಂಗಳೂರು: ಒಂದೆಡೆ ನಗರದಲ್ಲಿ ವಾರ್ಡ್‌ಗೊಂದರಂತೆ “ನಮ್ಮ ಕ್ಲಿನಿಕ್’ ಆರಂಭಿಸಲು ಸರ್ಕಾರ ಮುಂದಾಗಿದೆ. ಆದರೆ, ಬಸ್‌ನಿಲ್ದಾಣಕ್ಕೊಂದರಂತೆ ನಿರ್ಮಿಸಿದ ಇಂದಿರಾ ಕ್ಲಿನಿಕ್‌ಗಳೇ ಮುಚ್ಚುವ ಸ್ಥಿತಿಯಲ್ಲಿವೆ.
ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಪಡೆದ ಬೆನ್ನಲ್ಲೇ ಮುಂದುವರೆದ ಭಾಗವಾಗಿ ಹಿಂದಿನಸರ್ಕಾರ ಇಂದಿರಾ ಕ್ಲಿನಿಕ್‌ಗಳನ್ನು ನಗರದಎರಡು ಕಡೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಅವು ಪ್ರಯೋಗದ ಹಂತದಲ್ಲಿಯೇ ಅನಾರೋಗ್ಯಗೊಂಡಂತಾಗಿವೆ.
ಇಂದಿರಾ ಕ್ಲಿನಿಕ್‌ಗಳಲ್ಲಿ ಅಪರೂಪಕ್ಕೊಮ್ಮೆಅವುಗಳ ಬಾಗಿಲು ತೆರೆದು ಕಸಗುಡಿಸುವ ಕೆಲಸನಡೆಯುತ್ತಿದೆ. ಅಷ್ಟೇ ಅಪರೂಪಕ್ಕೆ ಇಲ್ಲಿ ವೈದ್ಯರು ಬಂದು ಹೋಗುತ್ತಾರೆ. ಆದರೆ, ಸುತ್ತಲಿನರೋಗಿಗಳು ಮಾತ್ರ ನಿತ್ಯ ಭೇಟಿ ಮಾಡುತ್ತಾರೆ. ಆದರೆ,ಸೌಲಭ್ಯದ ಮರೀಚಿಕೆಯಾಗಿದೆ.
2017ರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರ ತುರ್ತು ಚಿಕಿತ್ಸೆಗಾಗಿ ಹೆಚ್ಚು ಜನ ಸಂಚರಿಸುವ ಮೆಜೆಸ್ಟಿಕ್ ಮತ್ತು ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಲಿನಿಕ್ ತೆರೆಯಲಾಯಿತು.
ನಂತರದ ದಿನಗಳಲ್ಲಿ ಹಲವೆಡೆ ವಿಸ್ತರಿಸುವ ಚಿಂತನೆಯೂ ಇತ್ತು. ಇದರಿಂದ ಸಾರಿಗೆ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಿತ್ತು.ಪ್ರಾರಂಭದಲ್ಲಿ ಕ್ಲಿನಿಕ್‌ಗಳು ಚೆನ್ನಾಗಿಯೇ ನಡೆಯುತ್ತಿದ್ದವು ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಪ್ರಯಾಣದ ವೇಳೆ ಆರೋಗ್ಯದಲ್ಲಿ ಏರುಪೇರಾದಲ್ಲಿ ನಿತ್ಯ ನೂರಾರು ಮಂದಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದರು.
ಇಂದಿರಾ ಕ್ಲಿನಿಕ್ ಆರಂಭವಾದ ನಂತರ ಬಿಎಂಟಿಸಿ ಸಿಬ್ಬಂದಿ ಮಾತ್ರವಲ್ಲದೇ ಜನ ಸಾಮಾನ್ಯರಿಗೂ ತುಂಬಾ ಅನುಕೂಲವಾಗುತ್ತಿತ್ತು. ತುರ್ತು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಈಗ ಸರಿಯಾದ ಸಮಯಕ್ಕೆ ಬಾಗಿಲು ತೆರೆದಿರುವುದಿಲ್ಲ. ವಾರದಲ್ಲಿ ಎರಡರಿಂದ ಮೂರು ದಿನ ಕ್ಲಿನಿಕ್ ಬಾಗಿಲು ತೆರದಿರಬಹುದು ಎಂದು ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ತಿಳಿಸುತ್ತಾರೆ.
ಇಂದಿರಾ ಕ್ಲಿನಿಕ್‌ಗಳಲ್ಲಿ ದೂರದ ಊರುಗಳಿಂದ ಬಂದಿಳಿದ ಪ್ರಯಾಣಿಕರ ಆರೋಗ್ಯದಲ್ಲಿ ತೊಂದರೆಯಾಗಿದ್ದಲ್ಲಿ ತಕ್ಷಣ ಚಿಕಿತ್ಸೆ ನೀಡುತ್ತಿದ್ದರು. ಜತೆಗೆ ಬಸ್ ಚಾಲಕ ಅಥವಾ ನಿರ್ವಾಹಕರು ಕೆಲಸ ನಿರ್ವಹಿಸುವಂತಹ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸವಾದರೂ ಚಿಕಿತ್ಸೆಗಾಗಿ ಧಾವಿಸುತ್ತಿದ್ದರು. ಆದರೆ ಈಗ ಯಾವುದೇ ಚಿಕಿತ್ಸೆಯಿಲ್ಲದೇ, ಕ್ಲಿನಿಕ್ ದುಸ್ಥಿತಿಯಲ್ಲಿದೆ ಎಂದು ಬಸ್ ಚಾಲಕರೊಬ್ಬರು ಹೇಳುತ್ತಾರೆ. ಇಂದಿರಾ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ ಅಧಿಕಾರಿ, ಒಬ್ಬ ನರ್ಸ್ ಹಾಗೂ ಒಬ್ಬ ಔಷಧಿ ನೀಡುವವರು ಸೇರಿದಂತೆ ಮೂವರನ್ನು ನಿಯೋಜಿಸಲಾಗಿದೆ.
ಅವಶ್ಯಕ ಪ್ರಾಥಮಿಕ ಆರೋಗ್ಯ ಸೇವೆಗಳಾದ ಅಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಸೌಲಭ್ಯ, ತುರ್ತು ನಿಗಾ ಘಟಕದ ಸೇವೆ, ಪ್ರಾಥಮಿಕ ಪ್ರಯೋಗಾಶಾಲಾ ಸೌಲಭ್ಯ, ಅವಶ್ಯಕಜನರಿಕ್ ಔಷಧಿಗಳ ಲಭ್ಯತೆಯೂ ಇದೆ. ಆದರೆ,ಯಾಕೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರಬಗ್ಗೆ ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಕ್ರಮದ ಭರವಸೆ : ನಗರದಲ್ಲಿ ಈಗಲೂ ಎರಡು ಇಂದಿರಾ ಕ್ಲಿನಿಕ್‌ಗಳು ಚಾಲ್ತಿಯಲ್ಲಿವೆ. ಒಂದು ಮೆಜೆಸ್ಟಿಕ್ ಹಾಗೂ ಯಶವಂತಪುರ ಬಸ್ ನಿಲ್ದಾಣದಲ್ಲಿವೆ. ಒಂದು ವೇಳೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುವುದು ನಮ್ಮ ಗಮನಕ್ಕೆ ಬಂದರೆ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಬಾಲಸುಂದರ್ ತಿಳಿಸುತ್ತಾರೆ.
– ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.