ಇಂದಿರಾ ಐವಿಎಫ್ ನೂತನ ಶಾಖೆ ಉದ್ಘಾಟನೆ
Team Udayavani, Aug 10, 2018, 12:14 PM IST
ಬೆಂಗಳೂರು: ಬಂಜೆತನಕ್ಕೆ ಚಿಕಿತ್ಸೆ ನೀಡುವ ಖ್ಯಾತ ಇಂದಿರಾ ಐವಿಎಫ್ ಹಾಸ್ಪಿಟಲ್ ಪ್ರೈ. ಲಿ., ಸಮೂಹದ 48ನೇ ಶಾಖೆ ಹಾಗೂ ಬೆಂಗಳೂರು ನಗರದ 3ನೇ ಕೇಂದ್ರವನ್ನು ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಇತೀ¤ಚೆಗೆ ಉದ್ಘಾಟಿಸಲಾಯಿತು.
ಇಂದಿರಾ ಐವಿಎಫ್ ಸಮೂಹದ ಸ್ತ್ರೀರೋಗ ತಜ್ಞೆ ಮತ್ತು ಐವಿಎಫ್ ತಜ್ಞರಾಗಿರುವ ಡಾ. ರುತುಜಾ ಆರ್. ಅಥಾವಲೆ ಅವರು ಶಾಖೆ ಉದ್ಘಾಟಿಸಿದರು. ಈವೇಳೆ ಮಾತನಾಡಿದ ಅವರು, ಸಿಲಿಕಾನ್ ಸಿಟಿಯ ಮೂರನೇ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು, ಸಂಪೂರ್ಣ ರೀತಿಯಲ್ಲಿ ಬಂಜೆತನ ನಿವಾರಣೆಗೆ ಮೀಸಲಾಗಿರುವ ಕೇಂದ್ರವಾಗಿದೆ.
ಇದುವರೆಗೆ ಜಗತ್ತಿನಲ್ಲಿ ಐವಿಎಫ್ ತಂತ್ರದ ಮೂಲಕ 80 ಲಕ್ಷಕ್ಕೂ ಅಧಿಕ ಮಕ್ಕಳ ಜನನವಾಗಿದೆ. ಇತೀಚಿನ ದಿನಗಳಲ್ಲಿ ಈ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಯಶಸ್ಸಿನ ಪ್ರಮಾಣವೂ ಗಣನೀಯವಾಗಿ ವೃದ್ಧಿಸಿದೆ. ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ಐವಿಎಫ್ (ಪ್ರನಾಳ ಶಿಶು) ತಜ್ಞರಿಂದ ಚಿಕಿತ್ಸೆ ಪಡೆದಲ್ಲಿ ಗರ್ಭಧಾರಣೆ ಅವಕಾಶಗಗಳು ಹೆಚ್ಚಲಿವೆ ಎಂದು ಮಾಹಿತಿ ನೀಡಿದರು.
ಸಮೂಹದ ಅಧ್ಯಕ್ಷ ಡಾ.ಅಜಯ್ ಮುರ್ಡಿಯ ಮಾತನಾಡಿ, ಮಗುವಿಗಾಗಿ ಹಂಬಲಿಸುವ ಹಾಗೂ ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಅವರ ಕನಸು ನನಸಾಗಲಿದೆ. ಇಂದು ದೇಶದ ಪ್ರತಿ ಎಂಟು ದಂಪತಿಗಳಲ್ಲಿ ಒಂದು ಜೋಡಿ ಬಂಜೆತನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.