ಇಂದಿರಾ ಕುಟುಂಬ ಆಪ್ತ , ಕಾಂಗ್ರೆಸ್‌ ನಿಷ್ಠ “ಷರೀಫ್’


Team Udayavani, Nov 26, 2018, 6:00 AM IST

jaffer-sharief-aaaa.jpg

ಬೆಂಗಳೂರು: ಮುಸ್ಲಿಂ ಸಮುದಾಯದ ಪ್ರಭಾವಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಜಾಫ‌ರ್‌ ಷರೀಫ್ ಇಂದಿರಾಗಾಂಧಿ ಕಾಲದಿಂದಲೂ ನಿಷ್ಠಾವಂತ ಕಾಂಗ್ರೆಸ್ಸಿಗರಲ್ಲೊಬ್ಬರು. 

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದ ಜೀವನದ ಕೊನೇ ಕ್ಷಣದವರೆಗೆ ಕಾಂಗ್ರೆಸ್‌ ಜತೆ ನಿಕಟಪೂರ್ವ ಸಂಬಂಧ ಇರಿಸಿಕೊಂಡು ಬಂದಿದ್ದ ಜಾಫ‌ರ್‌ ಷರೀಫ್, ನಂತರದ ದಿನಗಳಲ್ಲಿ ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರೊಂದಿಗೂ ನೇರ ಸಂಪರ್ಕ ಹೊಂದಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅರಬ್‌ ರಾಷ್ಟ್ರಗಳ ಜತೆಗಿನ ಸಂಪರ್ಕಕ್ಕೆ ನೆರವಾಗಿದ್ದರು.

ಕಾಂಗ್ರೆಸ್‌ ಪಕ್ಷದಲ್ಲಿ ದೆಹಲಿ ಮಟ್ಟದಲ್ಲಿ ಸುಮಾರು ಮೂರು ದಶಕಗಳ ಕಾಲ ಪ್ರಭಾವಿಯಾಗಿದ್ದ ಅವರು ಎಐಸಿಸಿ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಹೈಕಮಾಂಡ್‌ ಜತೆಗೆ ಅವರಿಗಿದ್ದ ಸಂಪರ್ಕ ನೋಡಿ ದೆಹಲಿ ಮಟ್ಟದಲ್ಲಿ ಎಂದಾದರೂ ಒಂದು ದಿನ ಕರ್ನಾಟಕದ ಮುಖ್ಯಮಂತ್ರಿ ಆಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು.

ಪಿ.ವಿ.ನರಸಿಂಹರಾವ್‌ ಸಂಪುಟದಲ್ಲಿ 1991ರಿಂದ 1995ರ ವರೆಗೆ ರೈಲ್ವೆ ಸಚಿವರಾಗಿದ್ದರು ಜಾಫ‌ರ್‌ ಷರೀಫ್. ಕೇಂದ್ರ ರೈಲ್ವೆ ಸಚಿವರಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದವರು. ಬೆಂಗಳೂರಿನಲ್ಲಿ ರೈಲು ಗಾಲಿ ತಯಾರಿಕಾ ಘಟಕ ಸ್ಥಾಪನೆ, ರೈಲ್ವೆ ಗೇಜ್‌ ಪರಿವರ್ತನೆ ಸೇರಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದರು. ದೇಶದಲ್ಲೇ ಅತ್ಯಂತ ದೊಡ್ಡ ಲೋಕಸಭಾ ಕ್ಷೇತ್ರವಾಗಿದ್ದ ಕನಕಪುರದಿಂದ ಸಂಸದರಾಗಿ ಗೆದ್ದು, ನಂತರ ಬೆಂಗಳೂರು ಉತ್ತರ ಕ್ಷೇತ್ರದಿಂದ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.ಒಮ್ಮೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಸಿಕ್ಕಿರಲಿಲ್ಲ. ಮತ್ತೂಮ್ಮೆ ಸಿ.ಎಂ.ಇಬ್ರಾಹಿಂ ಜೆಡಿಎಸ್‌ನಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್‌.ಟಿ.ಸಾಂಗ್ಲಿಯಾನ ವಿರುದ್ಧ ಸೋಲು ಅನುಭವಿಸಿದ್ದರು.

ಮೊಮ್ಮಗನ ಸೋಲಿಗೆ ಬೇಸರಿಸಿಕೊಂಡಿದ್ದರು
2009ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಚುನಾವಣೆ ಅವರ ಕಡೇ ಸ್ಪರ್ಧೆ. ಆ ನಂತರ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಟಿಕೆಟ್‌ ಸಿಗಲಿಲ್ಲ. ಮೊಮ್ಮಗನಿಗೆ ಎರಡು ಬಾರಿ ಹೆಬ್ಟಾಳ ಕ್ಷೇತ್ರದಿಂದ ಟಿಕೆಟ್‌ ಪಡೆದು, ಸೋಲು ಕಂಡ ನಂತರ ತೀವ್ರ ಬೇಸರಗೊಂಡಿದ್ದರು. ತಮ್ಮ ಸಮುದಾಯದ ನಾಯಕರೇ ತಮ್ಮ ವಿರುದ್ಧ ರಾಜಕೀಯ ಸಂಚು ರೂಪಿಸಿದ್ದು ಅವರಿಗೆ ನೋವು ತರಿಸಿತ್ತು.

2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ಒಮ್ಮೆ ಮುನಿಸಿಕೊಂಡು ಜೆಡಿಎಸ್‌ ಸೇರ್ಪಡೆ ಯೋಚನೆ ಮಾಡಿ ಮೈಸೂರು ಕ್ಷೇತ್ರದಿಂದ ಬಿ ಫಾರಂ ಸಹ ಪಡೆದು ಮೆಕ್ಕಾಗೆ ಹೋಗಿದ್ದರು. ಆದರೆ, ನಂತರ ಆ ತೀರ್ಮಾನ ಬಿಟ್ಟು ಈ ವಯಸ್ಸಿನಲ್ಲಿ ನಾನ್ಯಾಕೆ ಕಾಂಗ್ರೆಸ್‌ ಬಿಡಲಿ ಎಂದು ಪ್ರಶ್ನಿಸಿ ಕಾಂಗ್ರೆಸ್‌ನಲ್ಲೇ ಮುಂದುವರಿದಿದ್ದರು.

ವಿಶ್ವನಾಥ್‌ಗಾಗಿ ತ್ಯಾಗ!
2014ರಲ್ಲಿ ಕಾಂಗ್ರೆಸ್‌ನಿಂದ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಈಗಿನ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು, “ಷರೀಫ್ ಸಾಹೇಬರು ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗಲು ಕಾರಣಕರ್ತರಾಗಿದ್ದವರು. ಅವರು ನನ್ನ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದ್ದರು. ಜತೆಗೆ ದೂರವಾಣಿ ಮೂಲಕವೂ ಸಂಪರ್ಕ ಮಾಡಿ ನೀವು ನಿಲ್ಲುವುದಾದರೆ ಹೇಗೆ? ಎಂದಿದ್ದರು. ಅದರಿಂದ ಕೊನೇ ಕ್ಷಣದಲ್ಲಿ ಷರೀಫ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು ಎಂದೇ ವಿಶ್ಲೇಷಿಸಲಾಗಿತ್ತು.
ಜಾಫ‌ರ್‌ ಷರೀಫ್ ಕೇವಲ ಮುಸ್ಲಿಂ ಸಮುದಾಯದ ನಾಯಕರಷ್ಟೇ ಅಗಿರಲಿಲ್ಲ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಜತೆ ಇತರೆ ಸಮುದಾಯಗಳ ಮೇಲೂ ಹಿಡಿತ ಹೊಂದಿದ್ದರು. ಬೆಂಗಳೂರಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚಿನ ವರ್ತೂರು, ಯಲಹಂಕ, ಭಾರತೀನಗರ, ಶಾಂತಿನಗರ, ಶಿವಾಜಿನಗರ, ಹೊಸಕೋಟೆ ಕ್ಷೇತ್ರಗಳಲ್ಲಿ ಜಾಫ‌ರ್‌ ಷರೀಫ್ ಅವರು ಹೇಳಿದವರಿಗೆ ಟಿಕೆಟ್‌ ದೊರೆಯುತ್ತಿತ್ತು. ಕಾಂಗ್ರೆಸ್‌ ಟಿಕೆಟ್‌ ಪಡೆದವರು ಜಾಫ‌ರ್‌ ಷರೀಫ್ ಅವರ ವರ್ಚಸ್ಸಿನಿಂದ ಗೆಲ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಜಾಫ‌ರ್‌ ಷರೀಫ್ ತಮ್ಮ ಪ್ರಭಾವ ಹೊಂದಿದ್ದರು.

ಪಕ್ಷಾತೀತ ಒಡನಾಟ
ರಾಜಕಾರಣದಲ್ಲಿ ಕಾಂಗ್ರೆಸ್‌ ನಾಯಕರ ಜತೆಗಷ್ಟೇ ಅಲ್ಲ, ಎಚ್‌.ಡಿ.ದೇವೇಗೌಡ, ಮಾಯಾವತಿ. ಫ‌ರೂಕ್‌ ಅಬ್ದುಲ್ಲಾ, ಚಂದ್ರಬಾಬು ನಾಯ್ಡು ಸೇರಿ ಹಲವು ನಾಯಕರ ಜತೆಯೂ ನಿಕಟ ಬಾಂಧವ್ಯ ಹೊಂದಿದ್ದರು. ಒಮ್ಮೆ ಮಾಯಾವತಿಯವರು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬಿಎಸ್‌ಪಿ ಸಮಾವೇಶ ಮಾಡಿದಾಗ ಸಭಿಕರ ಸಾಲಿನಲ್ಲಿ ಕುಳಿತು ಭಾಷಣ ಆಲಿಸಿದ್ದರು. ಬಿಜೆಪಿ ನಾಯಕರ ಜತೆಯೂ ವೈಯಕ್ತಿಕ ಸ್ನೇಹ ಹೊಂದಿದ್ದರು. ಬೆಂಗಳೂರಿನ ನಾಗವಾರದಲ್ಲಿ ಸಮರತಾ ಸಂಗಮ ಆರ್‌ಎಸ್‌ಎಸ್‌ ಸಮಾವೇಶ ಆದಾಗಲೂ ಆ ಕ್ಷೇತ್ರದ ಸಂಸದರಾಗಿ ಖುದ್ದು ಭೇಟಿ ನೀಡಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಿಸಿದ್ದರು. ಕಾಂಗ್ರೆಸ್‌ನ ಸೇವಾದಳ, ಬಿಜೆಪಿಯ ಆರ್‌ಎಸ್‌ಎಸ್‌ ಒಂದೇ ಸೇವಾ ಮನೋಭಾವವುಳ್ಳ ವಿಭಾಗಗಳು. ರಾಜಕೀಯ ಸೋಂಕು ತಾಕದಿರಲಿ ಎನ್ನುತ್ತಿದ್ದರು.

ಮುಸ್ಲಿಂ ಪ್ರಭಾವಿ ನಾಯಕ
ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದವರು ಜಾಫ‌ರ್‌ ಷರೀಫ್. ನಜೀರ್‌ ಸಾಬ್‌, ಅಜೀಜ್‌ ಸೇs…, ಬಿ.ಎ.ಮೊಯಿದ್ದೀನ್‌ ಸಹ ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ನಾಯಕರು. ಅವರೆಲ್ಲರೂ ರಾಜ್ಯ ರಾಜಕಾರಣಕ್ಕೆ ಸೀಮಿತರಾಗಿದ್ದರು. ಆದರೆ, ಜಾಫ‌ರ್‌ ಷರೀಫ್ ಅವರು ಕೇಂದ್ರ ರಾಜಕಾರಣದಲ್ಲಿ ಅನುಭವ ಹೊಂದಿದ್ದವರು. ಮುಸ್ಲಿಂ ಸಮುದಾಯದಲ್ಲಿ ಸಿಎಂ ಆಗಬಲ್ಲ ನಾಯಕ ಎನಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಸಿಎಂ ಸ್ಥಾನದ ಪ್ರಸ್ತಾಪ ಬಂದಾಗ ಕೆಲವೊಮ್ಮೆ ಜಾಫ‌ರ್‌ ಷರೀಫ್ ಅವರ ಹೆಸರು ಪ್ರಸ್ತಾಪವಾಗಿದ್ದೂ ಉಂಟು.

– ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.