ಕೈಗಾರಿಕೆಗಳು ಸ್ತಬ್ಧ; ಕೆರೆಗಳು ಶುದ್ಧ


Team Udayavani, Apr 7, 2020, 12:44 PM IST

ಕೈಗಾರಿಕೆಗಳು ಸ್ತಬ್ಧ; ಕೆರೆಗಳು ಶುದ್ಧ

ಸಾಂದರ್ಭಿಕ ಚಿತ್ರ

ಬೆಂಗಳೂರು: ಯಾವುದೇ ಹೂಳು ತೆಗೆದಿಲ್ಲ. ಔಷಧಿಯನ್ನೂ ಸಿಂಪಡಣೆ ಮಾಡಿಲ್ಲ. ಆದರೂ ನಗರದ ಕೆರೆಗಳ ನೀರು ಶುದ್ಧಗೊಳ್ಳಲು ಸಕಾಲವಾಗಿದೆ.

ಕಳೆದೆರಡು ವಾರಗಳಿಂದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ನಗರದ ಕೈಗಾರಿಕೆಗಳು ಸ್ತಬ್ಧಗೊಂಡಿವೆ. ಇದರೊಂದಿಗೆ ಕೆರೆ-ಕುಂಟೆಗಳಿಗೆ ಸೇರ್ಪಡೆಯಾಗುತ್ತಿದ್ದ ರಾಸಾಯನಿಕ ತಾಜ್ಯ ನೀರು ಕೂಡ ಸ್ಥಗಿತಗೊಂಡಿದೆ. ಪರಿಣಾಮ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಯಾವುದೇ ಪ್ರಯತ್ನವಿಲ್ಲದೆ, ಕೆರೆಗಳಿಗೆ ಸೇರಲ್ಪಡುವ ತ್ಯಾಜ್ಯನೀರು ಅರ್ಧಕ್ಕರ್ಧಕಡಿಮೆಯಾಗಿದೆ. ಪೂರ್ವ ಮುಂಗಾರು ಕೂಡ ಆಗಮಿಸುತ್ತಿರು ವುದರಿಂದ ಸ್ಥಳೀಯ ಸಂಸ್ಥೆಗಳು ಮನಸ್ಸು ಮಾಡಿದರೆ ಕೆರೆನೀರು ಮತ್ತಷ್ಟು ಶುದ್ಧಗೊಳ್ಳಲು ಸಾಧ್ಯವಿದೆ ಎಂದು ತಜ್ಞರ ಅಭಿಮತವಾಗಿದೆ.

ನಗರದಲ್ಲಿರುವ ಕೆರೆಗಳು: ನಗರದಲ್ಲಿ ಹಲವು ಕೆರೆಗಳು ಲೆಕ್ಕಕ್ಕಷ್ಟೇ ಸೀಮಿತವಾಗಿವೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಬಿಡಿಎಯಿಂದ 14 ಕೆರೆಗಳು ಬಿಬಿಎಂಪಿಗೆ ಹಸ್ತಾಂತರವಾಗಬೇಕಿದ್ದು, ಇವು ಸಮೀಕ್ಷೆ ಹಂತದಲ್ಲಿವೆ. ಉಳಿದಂತೆ 205ರಲ್ಲಿ ಪಾಲಿಕೆ 75 ಕೆರೆಗಳನ್ನು ಅಭಿವೃದ್ಧಿಪಡಿಸಿದೆ. 19 ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ. 27 ಕೆರೆಗಳನ್ನು ಮುಖ್ಯ ಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಈ ಪೈಕಿ ಹಲವಾರು ಕೆರೆಗಳಿಗೆ ಮನೆ ಮತ್ತು ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯನೀರು ವಿವಿಧ ರೂಪದಲ್ಲಿ ಸೇರ್ಪಡೆಯಾಗುತ್ತಿದೆ.

ಜಿಗಣಿ, ಬೊಮ್ಮಸಂದ್ರ, ಹೊಸಕೋಟೆ ಒಳಗೊಂಡಂತೆ ನಗರದಲ್ಲಿ ಬೃಹತ್‌, ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಸೇರಿ 60 ಸಾವಿರ ಕೈಗಾರಿಕೆಗಳಿವೆ. ಸಾಮಾನ್ಯವಾಗಿ ದೊಡ್ಡ ಕೈಗಾರಿಕೆಗಳ ಆವರಣದಲ್ಲೇ ರಾಸಾಯನಿಕ ತಾಜ್ಯನೀರು ಸಂಸ್ಕರಣಾ ಘಟಕ ಇರುತ್ತದೆ. ಆದರೆ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳೇ 45 ಸಾವಿರವಿದ್ದು, ಇವೆಲ್ಲವೂ ಸಾಮಾನ್ಯ ರಾಸಾಯನಿಕ ತ್ಯಾಜ್ಯನೀರು ಸಂಸ್ಕರಣಾ ಘಟಕ (ಸಿಇಟಿಪಿ)ವನ್ನೇ ಅವ ಲಂಬಿಸಿರುತ್ತವೆ. ಬಹುತೇಕ ಕೈಗಾರಿಕಾ ವಲಯಗಳಲ್ಲಿ ಈ ಸೌಲಭ್ಯಗಳಿಲ್ಲ.

ಹಾಗಾಗಿ, ಸಮರ್ಪಕವಾಗಿ ಸಂಸ್ಕರಣೆಯಾಗದೆ, ಕೆಲವೆಡೆ ನೇರವಾಗಿ ಕೆರೆಗಳಿಗೆ ಸೇರುತ್ತದೆ. ಎರಡು ವಾರಗಳಿಂದ ಸಂಪೂರ್ಣ ಲಾಕ್‌ಡೌನ್‌ ಆಗಿದ್ದರಿಂದ ಈ ಕಲುಷಿತ ನೀರಿಗೆ ಬ್ರೇಕ್‌ ಬಿದ್ದಿದೆ ಎಂದು ತಜ್ಞರು ಹೇಳುತ್ತಾರೆ. ರಾಸಾಯನಿಕ ತ್ಯಾಜ್ಯನೀರು ಸಂಸ್ಕರಣೆಗೆ ಸಂಬಂಧಿ ಸಿದ ಡೈಯಿಂಗ್‌, ಎಲೆಕ್ಟ್ರೋ ಪ್ಲೇಟಿಂಗ್‌, ಗ್ಯಾಲ್ವನೈಸಿಂಗ್‌ (ಜಿಂಕ್‌ ಮಾದರಿಯದ್ದು)ನಂತಹ ಕೈಗಾರಿಕೆಗಳಿಂದ ಹೆಚ್ಚು ಉತ್ಪತ್ತಿಯಾಗುತ್ತದೆ. ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಯಂತಹ ಸ್ಥಳೀಯ ಸಂಸ್ಥೆಗಳ ನಿರ್ವಹಣಾ ವೈಫ‌ಲ್ಯ, ಕೆಲ ಕೈಗಾರಿಕೆಗಳ ಅಸಮರ್ಪಕ ನಿರ್ವಹಣೆಯಿಂದ ಕೆರೆಗಳಿಗೆ ಹೋಗುತ್ತಿದೆ. ಈಗ ಲಾಕ್‌ಡೌನ್‌ನಿಂದ ಕೈಗಾರಿಕೆಗಳೇ ಸ್ಥಗಿತಗೊಂಡಿವೆ ಎಂದು ಪೀಣ್ಯ ಕೈಗಾರಿಕೆ ಸಂಘದ ಹಿರಿಯ ಉಪಾಧ್ಯಕ್ಷ ಸಿ. ಪ್ರಕಾಶ್‌ ಒಪ್ಪಿಕೊಳ್ಳುತ್ತಾರೆ.

ಸಿಗದ ಸಹಕಾರ: ವೃಷಭಾವತಿ ನದಿಗೆ ಸೇರುತ್ತಿದ್ದ ಕೊಳಚೆ ನೀರು ಪ್ರಮಾಣ ಕಡಿಮೆಯಾಗಿದೆ. ಸದ್ಯ ನೀರಿನ ಕಲುಷಿತ ಪ್ರಮಾಣ ತಿಳಿದುಕೊಳ್ಳಲು ಪ್ರಯೋಗಾ ಲಯಗಳು ತೆಗೆದಿಲ್ಲ. ನೀರು ಸಂಗ್ರಹಿಸಿಕೊಂಡಿದ್ದೇವೆ. ಕೊಳಚೆ ನೀರು ಕೆರೆ ಹಾಗೂ ನದಿಗಳನ್ನು ಸೇರುವುದನ್ನು ತಡೆಯುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ’ ಎಂದು ನಮಾಮಿ ವೃಷಭಾವತಿ ಟ್ರಸ್ಟಿ ನಿವೇದಿತಾ ಸುಂಕದ ಬೇಸರ ವ್ಯಕ್ತಪಡಿಸುತ್ತಾರೆ.

“ಖಂಡಿತ ಅಧ್ಯಯನ ಮಾಡಬಹುದಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಈ ಬಗ್ಗೆ ಗಮನವೇ ಇಲ್ಲ. ಅವರೆಲ್ಲಾ ಕೋವಿಡ್‌-19ರಲ್ಲಿ ಮುಳುಗಿವೆ. ಲಾಕ್‌ ಡೌನ್‌ ಮುಗಿಯುತ್ತಿದ್ದಂತೆ ಅಭಿವೃದ್ಧಿಯತ್ತ ಚಿತ್ತ ಹರಿಸುತ್ತವೆ. ಬೆನ್ನಲ್ಲೇ ಮಾಲಿನ್ಯವೂ ಯಥಾಸ್ಥಿತಿಗೆ ಮರಳುತ್ತದೆ. ಕೊನೆಪಕ್ಷ  ಕೋವಿಡ್ 19 ವೈರಸ್‌ ಹಾವಳಿ ಮುಗಿದ ನಂತರವಾದರೂ ಸುಸ್ಥಿರ ಅಭಿವೃದ್ಧಿಗೆ ಸರ್ಕಾರಗಳು ಒತ್ತುನೀಡುವ ಅವಶ್ಯಕತೆ ಇದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಎನ್‌.ಎಚ್‌. ರವೀಂದ್ರನಾಥ್‌ ತಿಳಿಸುತ್ತಾರೆ.

ಅವಕಾಶ ಕೈಚೆಲ್ಲುತ್ತಿರುವ ಮಂಡಳಿ? :  ವಾಯುಮಾಲಿನ್ಯದಂತೆಯೇ ಜಲಮಾಲಿನ್ಯದ ಪ್ರಮಾಣ ಮತ್ತು ಅದರ ಮೂಲವನ್ನು ಕಂಡುಕೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದು ಸಕಾಲವಾಗಿತ್ತು. ಆದರೆ, ಈ ಅವಕಾಶವನ್ನು ಮಂಡಳಿ ಕೈಚೆಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ನಗರದ ಹಲವು ಕೆರೆ, ನದಿಗಳು ಈಗಾಗಲೇ ಅವನತಿ ಹೊಂದಿವೆ. ಕೆಲವು ಇದ್ದು, ಇಲ್ಲದಂತಾಗಿದೆ. ಇವುಗಳಲ್ಲಿ ಬೆಳ್ಳಂದರೂ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿವೆ. ಅವುಗಳ ಮಾಲಿನ್ಯದಲ್ಲಿ ಕೈಗಾರಿಕೆಗಳ ಪಾಲು ಎಷ್ಟು ಎಂಬುದನ್ನು ಈಗ ಅಧ್ಯಯನದಿಂದ ತಿಳಿಯಬಹುದಾಗಿದೆ. ಲಾಕ್‌ಡೌನ್‌ ಸಂದರ್ಭಕ್ಕಿಂತ ಮೊದಲಿನ ಅಂಕಿ-ಅಂಶಗಳು ಈಗಾಗಲೇ ಮಂಡಳಿ ಬಳಿ ಲಭ್ಯ. ಪ್ರಸ್ತುತ ಸ್ಥಿತಿಯನ್ನು ಪಡೆದು ಹೋಲಿಕೆ ಮಾಡಿದರೆ, ಮನೆ ಮತ್ತು ಕೈಗಾರಿಕೆಗಳ ಪಾತ್ರ ತಿಳಿಯಬಹುದು.

ನಿರ್ದಿಷ್ಟವಾಗಿ ಕಾರ್ಖಾನೆ ಹಾಗೂ ಕೈಗಾರಿಕೆಗಳಿಂದ ರಾಜಕಾಲುವೆಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಯಾರಾದರು ದೂರು ನೀಡಿದರೆ, ಕ್ರಮ ತೆಗೆದುಕೊಳ್ಳುತ್ತೇವೆ. ಕಲುಷಿತ ನೀರು ಎಸ್‌ಟಿಪಿಗೆ ಹೋಗಬೇಕು. ಇದರಲ್ಲಿ ಲೋಪವಾದರೆ, ಜಲಮಂಡಳಿ ಕ್ರಮಕೈಗೊಳ್ಳಲಿದೆ. -ಬಸವರಾಜ್‌ ವಿ.ಪಾಟೀಲ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ

 

  ಹಿತೇಶ್‌ ವೈ

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.